Advertisement
ಉಪ್ಪರಿಗೇನಹಳ್ಳಿ ವ್ಯಾಪ್ತಿಯ ಕೆರೆಯಾಗಲಹಳ್ಳಿಯಲ್ಲಿ ಬೆಳೆದಿರುವ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕೇಬಲ್ ಕಳವು ಮಾಡಲಾಗಿದೆ. ಕೆರೆಯಾಗಲಹಳ್ಳಿಯಲ್ಲಿ ಸುಮಾರು ಎರಡ್ಮೂರು ತಿಂಗಳ ಅಂತರದಲ್ಲಿ 10 ಲಕ್ಷ ರೂ. ಮೌಲ್ಯದ 20 ಶ್ರೀಗಂಧ ಮರಗಳು ಕಳ್ಳತನವಾಗಿವೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ. ಹೊಲಗಳಲ್ಲಿರುವ ಬೆಲೆ ಬಾಳುವ ವಸ್ತುಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದರೂ ಪೊಲೀಸರು ನಿರ್ಲಕ್ಷ್ಯ ತಾಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Related Articles
Advertisement
ಇತ್ತೀಚೆಗೆ ನಡೆದ ಕಳ್ಳತನದಿಂದ ರೈತರು ಕಂಗೆಟ್ಟಿದ್ದಾರೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು.ತೋಟಗಳಲ್ಲಿ ಮೋಟಾರ್, ಕೇಬಲ್ ಕಳ್ಳತನವಾಗದಂತೆ ಹಳ್ಳಿಗಳಲ್ಲಿ ಗಸ್ತು ವ್ಯವಸ್ಥೆ ಮಾಡಬೇಕು. ಪೊಲೀಸರು ರಾತ್ರಿ ಪಾಳಿಯಲ್ಲಿ ಹಳ್ಳಿ ರಸ್ತೆಗಳ ಮೇಲೆ ಗಸ್ತು ತಿರುಗುವುದರಿಂದ ಕಳ್ಳತನ ತಪ್ಪಿಸಲು ಸಾಧ್ಯ. ಇಲ್ಲವಾದಲ್ಲಿ ಕೃಷಿ ಮಾಡುವುದು ಕಠಿಣವಾಗಲಿದೆ. -ಲೋಕೇಶ್, ಚೌಡಗೊಂಡನಹಳ್ಳಿ
ಶ್ರೀಗಂಧ ಮರಗಳ ದಿಂಡುಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗುತ್ತಿದ್ದರೂ ಪೊಲೀಸರುನಿರ್ಲಕ್ಷಿಸಿದ್ದಾರೆ. ಸರಕಾರದ ರಕ್ಷಣೆ ಇಲ್ಲದೆ ಬೆಳೆಗಾರ ಬೆಲೆ ಬಾಳುವ ಶ್ರೀಗಂಧ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ.ಆದ್ದರಿಂದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಳ್ಳರು ರೈತರ ಪ್ರಾಣ ತೆಗೆದು ಕಳ್ಳತನ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ. -ಕೆ.ಸಿ. ದಿನೇಶ್, ಉಪ್ಪರಿಗೇನಹಳ್ಳಿ
-ಎಸ್. ವೇದಮೂರ್ತಿ