Advertisement

ತಂದೆಯ ಮಾತು ಕೇಳದೆ ಸತ್ತ ಉಗ್ರ

06:50 AM Jan 10, 2018 | Team Udayavani |

ಶ್ರೀನಗರ: ಉಗ್ರ ಸಂಘಟನೆ ಸೇರಿದ ಪುತ್ರನನ್ನು ಮನೆಗೆ ಬಾ ಎಂದು ಮನಮಿಡಿಯುವಂತೆ ತಂದೆ ಕರೆದಿದ್ದಷ್ಟೇ… ಆ ಕರೆ ಪುತ್ರನಿಗೆ ಕೇಳಿತೋ ಇಲ್ಲವೋ ಗೊತ್ತಿಲ್ಲ. ಆತ ಮನೆಗೆ ಬಂದಿದ್ದು ಜೀವಂತವಾಗಿ ಅಲ್ಲ. ಹೆಣವಾಗಿ! ಇದು ಕಾಶ್ಮೀರದಲ್ಲಿ ಉಗ್ರ ಸಂಘಟನೆ ಸೇರಿ ಪೊಲೀಸರ ಗುಂಡಿಗೆ ಬಲಿಯಾದ ಯುವಕನ ದುರಂತ ಕಥೆ. ಕುಲ್ಗಾಂವ್‌ನ ಖುದ್ವಾನಿ ಗ್ರಾಮದ ಫ‌ರ್ಹಾನ್‌ ವಾನಿ(18) ಕಳೆದ ವರ್ಷ ಮನೆಯಿಂದ ನಾಪತ್ತೆಯಾಗಿದ್ದ. ಪುತ್ರ ಉಗ್ರ ಸಂಘಟನೆ ಸೇರಿದ್ದ ಎಂಬುದು ತಿಳಿದ ನಂತರ ಆತನ ತಂದೆ ಗುಲಾಮ್‌ ಮೊಹಮ್ಮದ್‌ ವಾನಿ ಫೇಸ್‌ಬುಕ್‌ನಲ್ಲಿ ಮನಮಿಡಿ ಯು ವಂತೆ ಪೋಸ್ಟ್‌ ಹಾಕಿ, ಮನೆಗೆ ವಾಪಸಾಗು ಎಂದು ಕರೆದಿದ್ದರು.

Advertisement

ಆದರೆ ಮಂಗಳವಾರ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಪೊಲೀಸರೊಂದಿಗಿನ ಕದನದಲ್ಲಿ ಫ‌ರ್ಹಾನ್‌ ಸಾವನ್ನಪ್ಪಿದ್ದಾನೆ. ಈ ಹಿಂದೆ ಅನಂತ್‌ನಾಗ್‌ನಲ್ಲಿ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ ಸೇರಿದ್ದ ಫ‌ುಟ್‌ಬಾಲ್‌ ಆಟಗಾರ ಮಜೀದ್‌ ಖಾನ್‌ ತಾಯಿ ವಿಡಿಯೋ ಬಿಡುಗಡೆ ಮಾಡಿ, ಪುತ್ರನನ್ನು ಕರೆದಿದ್ದು ಮತ್ತು ತಾಯಿಯ ಕರೆಯಿಂದ ಮನಸು ಬದಲಿಸಿ ಉಗ್ರ ಸಂಘಟನೆ ತೊರೆದು ವಾಪಸಾಗಿದ್ದ ಘಟನೆ ಗುಲಾಮ್‌ ಮೊಹಮ್ಮದ್‌ರವರನ್ನು ಪ್ರೇರೇಪಿಸಿತ್ತು ಎನ್ನಲಾಗಿದೆ. ಆದರೆ, ಇಲ್ಲಿ ಮಾತ್ರ ಫ‌ರ್ಹಾನ್‌ ವಾನಿ ತನ್ನ ತಂದೆಯ ಮನವಿಗೆ ಓಗೊಡಲಿಲ್ಲ. ಈ ಎನ್‌ಕೌಂಟರ್‌ನಲ್ಲಿ ವಾನಿ ಸೇರಿದಂತೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿದೆ.

ಮನಾನ್‌ ಹಿಜ್ಬುಲ್‌ ಸೇರಿದ್ದು ನಿಜ: ಅಲಿಗ ಮುಸ್ಲಿಂ ವಿವಿಯ ವಿದ್ಯಾರ್ಥಿ ಮನಾನ್‌ ವಾನಿ ಹಿಜ್ಬುಲ್‌ ಮುಜಾಹಿದೀನ್‌ ಸೇರಿದ್ದು ಇದೀಗ ಖಚಿತಪಟ್ಟಿದೆ. ಹಿಜ್ಬುಲ್‌ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್‌ ಸಲಾಹುದ್ದೀನ್‌ ಈ ಬಗ್ಗೆ ಸ್ಥಳೀಯ ಮಾಧ್ಯ ಮ ಗಳಿಗೆ ಖಚಿತಪಡಿಸಿದ್ದಾನೆ. ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಟಿಕಿಪೋರಾ ಪ್ರಾಂತ್ಯದ ವಾನಿ ಕಳೆದ ವಾರ ನಾಪತ್ತೆಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next