ವಿಜಯಪುರ: ಭಾರತೀಯ ಪರಂಪರೆಯಲ್ಲಿ ಹಬ್ಬಗಳು ಸಾಮರಸ್ಯದ ಪ್ರತೀಕವಾಗಿದ್ದು ಪ್ರತಿಯೊಬ್ಬರು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಂತೋಷದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಸಾಬೂನು-ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ರಾಜು ಆಲಗೂರ ಹೇಳಿದರು.
ನಗರದ ಶಿವಾಜಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಜಾನನ ಮಹಾಮಂಡಳದ ಗಣೇಶ ವಿಸರ್ಜನಾ ಪೂರ್ವ ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಗಣೇಶನಲ್ಲಿ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದರು.
ನಂತರ ಶಿವಾಜಿ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ಗಾಂಧಿಧೀಜಿ ವೃತ್ತ, ಕಿರಾಣಿ ಮಾರುಕಟ್ಟೆ, ರಾಮಮಂದಿರ, ಸಿದ್ದೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ತಾಜ್ ಬಾವಡಿಗೆ ತಲುಪಿತು.
ವಿವಿಧ ಪುಷ್ಪ ಅಲಂಕೃತ ವಾಹನದಲ್ಲಿ ಗಣೇಶನ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಆನೆ ನಡಿಗೆ, ಪುಣೆಯ ಸಂಘರ್ಷ ಕಲಾ ತಂಡದ ಸದಸ್ಯರಿಂದ ಮೊಳಗಿದ ಡೊಳ್ಳಿನ ಪ್ರದರ್ಶನ ಜನಮನ ಸೆಳೆಯಿತು. ಹೊನ್ನುಟಗಿಯ ಹಲಗಿ ಮೇಳ,
ಬಳ್ಳಾರಿಯ ವೀರಗಾಸೆ ಮೊದಲಾದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರುಗು ಹೆಚ್ಚಿಸಿದ್ದವು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿದರು. ಮಂಗಳವೇಡೆಯ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಮಾಧಾನ ಅವತಡೆ, ಉಪಾಧ್ಯಕ್ಷ ಅಂಬಾದಾಸ ಕುಲಕರ್ಣಿ, ಎಸ್ಪಿ ಡಾ| ಶಿವಕುಮಾರ ಗುಣಾರೆ, ಸೈನಿಕ ಶಾಲೆ ಪ್ರಾಚಾರ್ಯ ತಮೋಜಿತ್ ಬಿಸ್ವಾಸ್, ಮಂಗಳವೇಡೆ ಮಂಡಳದ ಬಿಜೆಪಿ ಅಧ್ಯಕ್ಷ ರಾಜೇಂದ್ರ, ಸೂರ್ಯವಂಶಿ, ವಿಜಯಪುರ ಗಜಾನನ ಮಹಾಮಂಡಳದ ಅಧ್ಯಕ್ಷ ಆನಂದ ಧುಮಾಳೆ, ಡಾ| ಸುರೇಶ ಬಿರಾದಾರ, ಅಪ್ಪು ಬುಕ್ಕಣ್ಣಿ, ಗೋಪಾಲ ಘಟಕಾಂಬಳೆ, ವಿಜಯ ಕೋರಳ್ಳಿ, ಶಿವರುದ್ರ ಬಾಗಲಕೋಟೆ, ಪಾಲಿಕೆ ಸದಸ್ಯರಾದ ಅಪ್ಪು ಸಜ್ಜನ, ಉಮೇಶ ವಂದಾಲ, ರಾಹುಲ್ ಜಾಧವ, ಶಿವಾಜಿರಾವ್ ಪಾಟೀಲ, ಭೀಮಾಶಂಕರ ಹದನೂರ, ರವಿ ಬಾಗಲಕೋಟೆ, ಸತೀಶ ಪಾಟೀಲ, ಚಂದ್ರು ಉಮರ್ಜಿ, ವಿಜಯ ಜೋಶಿ, ಸಿದ್ದು ಮಲ್ಲಿಕಾರ್ಜುನಮಠ, ಸಂತೋಷ ಕವಲ್ದಾರ, ಈರಣ್ಣ ಪಟ್ಟಣಶೆಟ್ಟಿ, ರಾಕೇಶ ಕುಲಕರ್ಣಿ ಇದ್ದರು.