Advertisement

ಗನ್‌ ಹಿಡಿದು ಕೆಲಸ ಮಾಡುವಂತಿರಬಾರದು

12:23 PM Oct 08, 2018 | Team Udayavani |

ಪುತ್ತೂರು: ಪಿಸ್ತೂಲ್‌, ಗನ್‌ ಹಿಡಿದು ಕೆಲಸ ಮಾಡುವ ಸ್ಥಿತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬರಬಾರದು. ಇಲ್ಲಿರುವವರು ನಮ್ಮದೇ ಜನ. ಅವರು ನಮ್ಮ ಮಾತನ್ನು ಕೇಳಿಯೇ ಕೇಳುತ್ತಾರೆ. ಇದೇ ಕಾರಣಕ್ಕೆ ಯಾವತ್ತೂ ಪಿಸ್ತೂಲ್‌ ಹಿಡಿದುಕೊಂಡು ಓಡಾಡಿದ್ದೇ ಇಲ್ಲ ಎಂದು ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ಹೇಳಿದರು.

Advertisement

ನಗರ ಠಾಣೆಯಿಂದ ಕಾಪುವಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅ. 6ರಂದು ರಾತ್ರಿ ಬ್ರಹ್ಮಶ್ರೀ  ನಾರಾಯಣ ಗುರು ಸಭಾ ಭವನದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಎಷ್ಟೋ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುವಾಗ ನಾವು ನಡುವಿದ್ದೆವು. ಆಗಲೂ ಗನ್‌, ಪಿಸ್ತೂಲ್‌ ಹಿಡಿದುಕೊಂಡಿಲ್ಲ. ಘರ್ಷಣೆಯಲ್ಲಿ ನಮಗೇ ಎರಡೇಟು ಬಿದ್ದದ್ದೂ ಇದೆ. ಆದರೆ ಹೊಡೆದ ವ್ಯಕ್ತಿ ಮತ್ತೆ ನಮ್ಮ ಬಳಿ ಬಂದು ಕ್ಷಮೆ ಕೇಳಿದ ಉದಾಹರಣೆ ಇದೆ. ನಮ್ಮ ಜನಗಳಿಗೆ ನಾವೇ ಹಿಂಸೆ ನೀಡುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಕಾಶ್ಮೀರದಂತಹ ಪರಿಸ್ಥಿತಿ ಇನ್ನೆಲ್ಲಿಯೂ ಬರಬಾರದು ಎನ್ನುವುದೇ ನಮ್ಮೆಲ್ಲರ ಆಶಯ ಆಗಿರಬೇಕು ಎಂದರು.

ಆಂತರಿಕ ಭದ್ರತೆ ದೊಡ್ಡ ಸವಾಲು
ಆಂತರಿಕ ಭದ್ರತೆ ಇಂದಿನ ದೊಡ್ಡ ಸವಾಲು. ಇದನ್ನು ಎದುರಿಸಲು ಶಸ್ತ್ರಾಸ್ತ್ರಗಳಿಂದ ಸಾಧ್ಯವಿಲ್ಲ. ಜನರಿಗೆ ಮನವರಿಕೆ ಮಾಡುವುದು ಒಂದೇ ದಾರಿ. ಪುತ್ತೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಇದನ್ನೇ ಮಾಡಿದ್ದೇನೆ. ಜನಸ್ನೇಹಿ ಪೊಲೀಸರಿಂದ ಉತ್ತಮ ಬೆಂಬಲ ಸಿಕ್ಕಿದೆ. ಆದ್ದರಿಂದ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

ಮಾದರಿ ಠಾಣೆ
ಎಸ್‌ಐ ಜಗದೀಶ್‌ ರೆಡ್ಡಿ ಮಾತನಾಡಿ, ನಗರ ಠಾಣೆ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ. ಇಲ್ಲಿ ನಡೆದಷ್ಟು ಉತ್ತಮ ಕೆಲಸಗಳು ಬೇರೆಲ್ಲೂ ನಡೆದಿಲ್ಲ. ಸರಕಾರದ ಯಾವುದೇ ಅನುದಾನಕ್ಕೆ ಕಾಯದೆ, ಪೇಟೆಯಲ್ಲಿ ಸಿಸಿ ಕೆಮರಾ ಅಳವಡಿಸಿರುವುದು ಮಹತ್ವದ ಕೆಲಸ ಎಂದು ಶ್ಲಾಘಿಸಿದರು.

Advertisement

ಸ್ಕರಿಯ ಮಾತನಾಡಿ, ಮಹೇಶ್‌ ಪ್ರಸಾದ್‌ ಎಂದರೆ ಪುತ್ತೂರಿನ ಸಿಂಗಂ ಎಂದೇ ಖ್ಯಾತಿ. ಕಾನೂನು ಸುವ್ಯವಸ್ಥೆಯನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಿದ್ದಾರೆ. ಇವರಿಗೆ ಕರ್ತವ್ಯವೇ ಮುಖ್ಯ. ಊಟ, ನಿದ್ರೆ ಆನಂತರ. ಪ್ರಧಾನಿ ನಂತರ ಅಷ್ಟು ಕೆಲಸ ಮಾಡುವ ವ್ಯಕ್ತಿ ಇದ್ದರೆ, ಅದು ಮಹೇಶ್‌ ಪ್ರಸಾದ್‌. ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿದ ಕೀರ್ತಿ ಮಹೇಶ್‌ ಪ್ರಸಾದ್‌ ಅವರಿಗೆ ಸಲ್ಲುತ್ತದೆ ಎಂದರು.

ಪಿಎಸ್‌ಐ ಅಜಯ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಎಸ್‌ಐಗಳಾದ ರವಿ, ನಾರಾಯಣ ರೈ, ರುಕ್ಮಯ, ಓಮನಾ, ಸೇಸಮ್ಮ, ಮಂಜುನಾಥ್‌, ಚಂದ್ರಶೇಖರ್‌, ಎಎಸ್‌ಐಗಳಾದ ಲೋಕನಾಥ್‌, ಶ್ರೀಧರ್‌, ಸಿಬಂದಿ ಹರೀಶ್‌, ಕಿರಣ್‌ ಕುಮಾರ್‌, ಶರಣ ಪಾಟೀಲ ಅನಿಸಿಕೆ ವ್ಯಕ್ತಪಡಿಸಿದರು.

ವಿಶ್ವಾಸ ಮುಖ್ಯ
ಸಮಾಜದ ಮುಂದೆ ಪೊಲೀಸರು ದೊಡ್ಡ ಹುದ್ದೆಯಲ್ಲಿರುತ್ತಾರೆ. ಬಿಟ್ಟರೆ ಮತ್ತೆ ನ್ಯಾಯಾಲಯ. ಪ್ರತಿಯೊಬ್ಬ ಪೊಲೀಸರು ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಜನರು ನಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ಹಾಗೆಂದು ಪೊಲೀಸರಿಗೆ ಅವಮಾನ ಆಗುವುದನ್ನು ಯಾವ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ.
– ಮಹೇಶ್‌ ಪ್ರಸಾದ್‌
ವರ್ಗಾವಣೆಗೊಂಡ ಪುತ್ತೂರು ಪೊಲೀಸ್‌ ನಿರೀಕ್ಷ

Advertisement

Udayavani is now on Telegram. Click here to join our channel and stay updated with the latest news.

Next