Advertisement
“ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ’ದ ಅಧ್ಯಕ್ಷರಾಗಿರುವ ದೀಪಾ, ಈ ಹುದ್ದೆಗೆ ಏರುವ ಸಲುವಾಗಿ ಸ್ಪರ್ಧಾತ್ಮಕ ಕ್ರೀಡೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಈ ಹಿಂದೆ ಬಂದಿದ್ದರು.
“ಭವಿಷ್ಯದಲ್ಲಿ ಪ್ಯಾರಾ ಸ್ಪೋರ್ಟ್ಸ್ ಇತರ ಕ್ರೀಡಾ ಸಾಧಕ ರಿಗೆ ಮಾರ್ಗದರ್ಶನ ನೀಡುವುದು ನನ್ನ ಗುರಿ. ಹೀಗಾಗಿ ಚುನಾವಣ ಪ್ರಕ್ರಿಯೆಯ ಉದ್ದೇಶದಿಂದ ಭಾರತೀಯ ಪ್ಯಾರಾಲಿಂಪಿಕ್ ಕಮಿಟಿಗೆ (ಪಿಸಿಐ) ಬಹಳ ಹಿಂದೆಯೇ ಪತ್ರವೊಂದನ್ನು ಬರೆದು ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೆ. ಹೊಸ ಸಮಿತಿಯ ನೇಮಕಾತಿಯ ವಿಷಯದಲ್ಲಿ ನ್ಯಾಯಾಲಯದ ನಿಲುವನ್ನು ಕಾದು ನೋಡಬೇಕಿತ್ತು. ಇಂದು ಅಧಿಕೃತವಾಗಿ ವಿದಾಯ ಘೋಷಿಸುತ್ತಿದ್ದೇನೆ…’ ಎಂದು ದೀಪಾ ಮಲಿಕ್ ಹೇಳಿದ್ದಾರೆ.
Related Articles
2016ರ ರಿಯೋ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ದೀಪಾ ಮಲಿಕ್ ಶಾಟ್‌ಪುಟ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇದು ಪ್ಯಾರಾಲಿಂಪಿಕ್ ಕೂಟದಲ್ಲಿ ಭಾರತದ ವನಿತೆಯೊಬ್ಬರಿಗೆ ಒಲಿದ ಮೊದಲ ಪದಕವಾಗಿತ್ತು. 2018ರಂದು ದುಬಾೖಯಲ್ಲಿ ನಡೆದ ಪ್ಯಾರಾ ಆ್ಯತ್ಲೆಟಿಕ್ ಗ್ರಾÂನ್‌ಪ್ರಿ ಪಂದ್ಯಾವಳಿಯ ಎಫ್-53/54 ವಿಭಾಗದ ಜಾವೆಲಿನ್ ಎಸೆತದಲ್ಲಿ ಬಂಗಾರಕ್ಕೆ ಕೊರಳೊಡ್ಡಿದ್ದರು.
Advertisement
ರಿಯೋ ಸಾಧನೆಗಾಗಿ ಕಳೆದ ವರ್ಷ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್‌ರತ್ನಕ್ಕೆ ದೀಪಾ ಮಲಿಕ್ ಭಾಜ ನರಾಗಿದ್ದರು. ಅವರು ಈ ಗೌರವಕ್ಕೆ ಪಾತ್ರರಾದ ದ್ವಿತೀಯ ಪ್ಯಾರಾ ಆ್ಯತ್ಲೀಟ್ ಆಗಿದ್ದರು. ಜಾವೆಲಿನ್ ಎಸೆತಗಾರ ದೇವೇಂದ್ರ ಜಜಾರಿಯಾ ಮೊದಲಿಗರು (2017).
48 ವರ್ಷದ ದೀಪಾ ಮಲಿಕ್ 58 ರಾಷ್ಟ್ರೀಯ ಹಾಗೂ 23 ಅಂತಾರಾಷ್ಟ್ರೀಯ ಪದಕಗಳನ್ನು ಜಯಿಸಿದ್ದಾರೆ. 2012ರಲ್ಲಿ ಅರ್ಜುನ ಹಾಗೂ 2017ರಲ್ಲಿ ಪದ್ಮಶ್ರೀ ಗೌರವಕ್ಕೂ ದೀಪಾ ಪಾತ್ರರಾಗಿದ್ದರು.
“ನಾನು ಕಳೆದ ವರ್ಷವೇ ನಿವೃತ್ತಿಯಾಗಿದ್ದೆ’“ನಾನು ಇಂದು ನಿವೃತ್ತಿ ಘೋಷಿಸಿದ್ದಾಗಿ ನಿಮಗೆ ಹೇಳಿದವರ್ಯಾರು? ಕಳೆದ ಸೆಪ್ಟಂಬರ್‌ನಲ್ಲೇ ನಾನು ಸ್ಪರ್ಧಾತ್ಮಕ ಕ್ರೀಡೆಗೆ ವಿದಾಯ ಹೇಳಿದ್ದೆ. ನಾನು ಪಿಸಿಐ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಈ ನಿರ್ಧಾರಕ್ಕೆ ಬಂದಿದ್ದೆ. ಆದರೆ ಇದನ್ನು ಸಾರ್ವಜನಿಕವಾಗಿ ಪ್ರಕಟಿಸಿರಲಿಲ್ಲ…’ ಎಂಬುದಾಗಿ ದೀಪಾ ಮಲಿಕ್ ತಮ್ಮ ವಿದಾಯದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ದಿನದ ಆರಂಭದಲ್ಲಿ ಮಾಡಿದ್ದ ಟ್ವೀಟ್ ಒಂದನ್ನು ಬಳಿಕ ಡಿಲೀಟ್ ಮಾಡಿದ್ದಾರೆ. ದಿಲ್ಲಿ ಹೈಕೋರ್ಟ್ ನಿರ್ದೇಶನದಂತೆ ಕಳೆದ ಫೆಬ್ರವರಿಯಲ್ಲಿ ನಡೆದ ಪಿಸಿಐ ಚುನಾವಣೆಯಲ್ಲಿ ದೀಪಾ ಮಲಿಕ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. “ಸಪ್ಟಂಬರ್‌ನಲ್ಲೇ ಭಾರತೀಯ ಪ್ಯಾರಾಲಿಂಪಿಕ್ ಕಮಿಟಿ (ಪಿಸಿಐ) ಅಧ್ಯಕ್ಷ ಚುನಾವಣೆಯ ಪ್ರಕ್ರಿಯೆ ಆರಂಭವಾಗಿತ್ತು. ಆಗಲೇ ನಾನು ನಿವೃತ್ತಿ ಪತ್ರವನ್ನು ಪಿಸಿಐಗೆ ಸಲ್ಲಿಸಿ ಬಳಿಕ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದೆ. ಇದರಲ್ಲಿ ಗೆದ್ದು ಬಂದು ಪಿಸಿಐ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದೇನೆ’ ಎಂದು ದೀಪಾ ಸ್ಪಷ್ಟನೆ ನೀಡಿದ್ದಾರೆ.