Advertisement

ರಿಕ್ಷಾ ರನ್‌ ತಂಡಕ್ಕೆ ಬೀಳ್ಕೊಡುಗೆ

10:36 AM Dec 16, 2019 | Team Udayavani |

ಹುಬ್ಬಳ್ಳಿ: ಭಾರತದಲ್ಲಿನ ಕೆಲವೊಂದು ಅಂಗವಿಕಲ ಮಕ್ಕಳ ಶಾಲೆಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಸೇವಾ ಯುಕೆ ಸಂಸ್ಥೆ ಆಯೋಜಿಸಿರುವ ರಿಕ್ಷಾ ರನ್‌ ಅಭಿಯಾನದ ತಂಡ ಹುಬ್ಬಳ್ಳಿ ಆಗಮಿಸಿತ್ತು. ರವಿವಾರ ಬೆಳಗ್ಗೆ ತಂಡವನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಮೈದಾನದಲ್ಲಿ ರಿಕ್ಷಾ ರನ್‌ ತಂಡಕ್ಕೆ ಬಾವುಟ ತೋರಿಸುವ ಮೂಲಕ ಬೀಳ್ಕೊಟ್ಟರು.

Advertisement

ರಿಕ್ಷಾ ರನ್‌ ತಂಡ ಶನಿವಾರ ಸಂಜೆ ವೇಳೆಗೆ ಶಿವಮೊಗ್ಗದಿಂದ ಗದುಗಿಗೆ ತೆರಳಿ ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಿ ಇಲ್ಲಿಯೇ ತಂಗಿತ್ತು. ಸ್ಥಳೀಯ ಸೇವಾ ಭಾರತಿ ಟ್ರಸ್ಟ್‌ ಅಡಿಯಲ್ಲಿ ನಗರಕ್ಕೆ ಬಂದ ಸುಮಾರು 105ಕ್ಕೂ ಅಧಿಕ ಅತಿಥಿಗಳಿಗೆ ಇಲ್ಲಿನ ಅನೇಕ ಮನೆಗಳಲ್ಲಿ ಆತಿಥ್ಯ ನೀಡಲಾಗಿತ್ತು. ಬೆಳಗ್ಗೆ 7 ಗಂಟೆ ಸುಮಾರಿಗೆ ರಿಕ್ಷಾ ರನ್‌ ತಂಡದ ಸದಸ್ಯರು ಜಿಮಖಾನಾ ಮೈದಾನದಲ್ಲಿ ಸಮಾವೇಶಗೊಂಡು ತಮ್ಮ ತಮ್ಮ ಆಟೋರಿಕ್ಷಾಗಳಲ್ಲಿ ಗೋವಾಕ್ಕೆ ಪ್ರಯಾಣ ಬೆಳೆಸಿದರು. ಹುಬ್ಬಳ್ಳಿಯಲ್ಲಿ ತಮಗೆ ದೊರೆತ ಆತ್ಮೀಯ ಆತಿಥ್ಯವನ್ನು ಕೊಂಡಾಡಿದರಲ್ಲದೆ, ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಶಿಲ್ಪಾ ಶೆಟ್ಟರ, ಗೋವರ್ಧನರಾವ್‌, ಡಾ| ರಘು ಅಕ್ಮಂಚಿ, ಚಂದ್ರಶೇಖರ ಗೋಕಾಕ, ಶಂಕರ ಗುಮಾಸ್ತೆ, ಕಿರಣ ಗುಡ್ಡದಕೇರಿ, ಜಯತೀರ್ಥ ಕಟ್ಟಿ, ಪ್ರಭು ಉಮದಿ, ಸತೀಶ ಶೇಜವಾಡಕರ, ನಾಗೇಶ ಕಲಬುರ್ಗಿ, ಉಮೇಶ ದುಶಿ, ಸೇವಾ ಭಾರತಿ ಟ್ರಸ್ಟ್‌ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next