Advertisement

Farangipete: ಪೂರ್ವದ್ವೇಷದ ಹಿನ್ನಲೆ ತಲ್ವಾರ್ ದಾಳಿ; ಇಬ್ಬರಿಗೆ ಗಾಯ

02:25 PM Oct 23, 2024 | Team Udayavani |

ಬಂಟ್ವಾಳ: ಪೂರ್ವದ್ಚೇಷದ ಹಿನ್ನೆಲೆಯಲ್ಲಿ ತಂಡವೊಂದು ತಲ್ವಾರ್ ನಿಂದ ದಾಳಿ ಮಾಡಿದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ ಬುಧವಾರ(ಅ.23)ನಡೆದಿದೆ.

Advertisement

ಪ್ರಕರಣದಲ್ಲಿ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್, ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಎಂಬವರು ಆರೋಪಿಗಳಾಗಿದ್ದಾರೆ.

ಅಮ್ಮೆಮಾರ್ ನಿವಾಸಿ ತಸ್ಲೀಮ್, ಮಹಮ್ಮದ್ ಶಾಕೀರ್, ನಾಸೀರ್, ಸಿಯಾಬು, ಸೈಫುದ್ದೀನ್ ಅವರು ಮಾತನಾಡುತ್ತಿದ್ದ ವೇಳೆ ತಸ್ಲೀಮ್ ಗೆ ಕರೆಯೊಂದು ಬಂದಿದ್ದು, ಈ ವೇಳೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ನಾಲ್ಕು ಮಾರ್ಗಕ್ಕೆ ಬರುವಂತೆ ಸವಾಲು ಹಾಕಿದ್ದಾನೆ.

Advertisement

ಈ ವೇಳೆ ಅವರು ಅಮ್ಮೆಮಾರ್ ಶಾಲಾ ಬಳಿಗೆ ಹೋದಾಗ, ಆರೋಪಿ ಮನ್ಸೂರ್ ಹಾಗೂ ಇತರರಿದ್ದು, ಈ ವೇಳೆ ಪಲ್ಟಿ ಇಮ್ರಾನ್ ತಲವಾರಿನಿಂದ ತಸ್ಲೀಮ್ ನ ಬಲ ಕಾಲು, ಮತ್ತೋರ್ವ ಆರೋಪಿ ಮುಸ್ತಾಕನು ಬಲಗೈಕಡಿದಿದ್ದು, ಸರ್ಫುದ್ದೀನ್ ಕಲ್ಲಿನಿಂದ ಹೊಡೆದಿದ್ದಾನೆ. ಈ ವೇಳೆ ತಸ್ಲೀಮ್ ನೆಲಕ್ಕೆ ಬಿದ್ದಾಗ ಮನ್ಸೂರ್ ಮುಖಕ್ಕೆ ಕಡಿದಿದ್ದಾನೆ. ಜೊತೆಗೆ ಆರೋಪಿಗಳು ಮಹಮ್ಮದ್ ಶಾಕೀರ್ ಗೂ ಅದೇ ರೀತಿ ತಲವಾರಿನಿಂದ ಕಡಿದಿದ್ದಾನೆ. ಜೊತೆಗೆ ಆಶ್ರಫ್, ರಿಜ್ವಾನ್ ಮತ್ತು ಲತೀಫ್ ಮರದ ದೊಣ್ಣೆಯಿಂದ ಹೊಡೆದಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತಸ್ಲೀಮ್ ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಕುರಿತು ಬಂಟ್ವಾಳ ‌ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next