Advertisement
ಈ ವಿಶೇಷ ಪ್ರವಾಸಿ ಆಕರ್ಷಣೆಯ ಜತೆಗೆ ಅರಣ್ಯ ಇಲಾಖೆಯಡಿ 2 ಕೋಟಿ ರೂ. ವೆಚ್ಚದಲ್ಲಿ ಸುಂದರ ಉದ್ಯಾನವನ ನಿರ್ಮಾಣ, ಕಾಂಡ್ಲಾ ವನಗಳ ರಕ್ಷಣೆ ಯೋಜನೆಯಿದೆ. ಪ್ಯಾಂಟಸಿ ಪಾರ್ಕ್ ಮಾದರಿಯಲ್ಲಿ ಮನೋರಂಜನೆಗೂ ಇಲ್ಲಿ ಆದ್ಯತೆಯಿರಲಿದೆ. ಮೂಲಸೌಕರ್ಯ ಗಳಾದ ರಸ್ತೆ, ಶೌಚಾಲಯ, ಉಡುಪು ಬದಲಾಯಿಸುವ ಕೊಠಡಿಗಳು, ವಾಹನ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗುತ್ತದೆ. ರಸ್ತೆಗಳ ವಿಸ್ತರಣೆ ಸೇರಿದಂತೆ ಬೀಚ್ ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸಲು ನಿರ್ಧರಿಸಲಾಗಿದೆ.
ಸುರತ್ಕಲ್‌ನಿಂದ ಎನ್‌ಐಟಿಕೆ ಬೀಚ್ ವರೆಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಅಂದಾಜು 7 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು
ನಡೆಯಲಿವೆ. ಮಂಗಳೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ 5 ಕೋಟಿ ರೂ. ಮತ್ತು ಅರಣ್ಯ ಇಲಾಖೆಯಿಂದ 2 ಕೋಟಿ ರೂ. ಲಭಿಸಲಿದೆ. ತಣ್ಣೀರುಬಾವಿಯಲ್ಲಿ ಬ್ಲೂ ಫ್ಲಾ Âಗ್
ಬೀಚ್, ಪಣಂಬೂರಿನಲ್ಲಿ ಸರಕಾರ – ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದೇವೆ. ಸುರತ್ಕಲ್ ಬೀಚ್‌ನಲ್ಲೂ ಸರಕಾರಿ ಜಾಗವನ್ನು ಸದ್ಬಳಕೆ ಮಾಡಿಕೊಂಡು ವಿಭಿನ್ನ ಮಾದರಿಯಲ್ಲಿ ಬೀಚ್ ಅಭಿವೃದ್ಧಿಗೆ ಯೋಜಿಸಲಾಗಿದೆ. ಸಿಆರ್‌ಝಡ್ ನಿಯಮ ಸರಳಗೊಂಡಿರುವುದರಿಂದ ಬೀಚ್ ರೆಸಾರ್ಟ್, ಹೋಂ ಸ್ಟೇ, ಸ್ವ ಉದ್ಯೋಗಕ್ಕೆ ಒತ್ತು ಸಿಗಲಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ ವೈ. ತಿಳಿಸಿದ್ದಾರೆ. ಇದನ್ನೂ ಓದಿ : ಪಶ್ಚಿಮಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ; ಸಿಎಂ ಬ್ಯಾನರ್ಜಿ ವಿರುದ್ಧ ಬಿಜೆಪಿ ಆಕ್ರೋಶ
Related Articles
ಸಮುದ್ರದ ನೀರಿಗೆ ತಾಗಿಕೊಂಡು, ಆದರೆ ನೇರವಾಗಿ ತೆರೆಗಳ ಹೊಡೆತಕ್ಕೆ ಸಿಲುಕಿ ಅಪಾಯ ಎದುರಾಗದಂತೆ ಉಪ್ಪು ನೀರಿನ ಕೊಳವನ್ನು ನಿರ್ಮಿಸಲಾಗುತ್ತದೆ. ನೀರಿನ ಜಾರುಬಂಡಿ, ಕೃತಕ ತೆರೆಗಳು ಮತ್ತಿತರ ಮನೋರಂಜನೆಗಳನ್ನು ಇದು ಒಳಗೊಂಡಿರುತ್ತದೆ. ಸಂಪೂರ್ಣ ಸುರಕ್ಷಿತವಾಗಿದ್ದು, ಮಕ್ಕಳು, ಮಹಿಳೆಯರು ಕೂಡ ನಿಶ್ಚಿಂತೆಯಿಂದ ನೀರಾಟದ ಮನೋರಂಜನೆ ಪಡೆಯಬಹುದು. ಕೊಳದ ರೂಪರೇಖೆಗಳನ್ನು ಇನ್ನಷ್ಟೇ ತಯಾರಿಸಬೇಕಾಗಿದೆ.
Advertisement
ಪ್ರವಾಸೋದ್ಯಮ ಬೆಳವಣಿಗೆಗೆ ಹೊಸ ಯೋಜನೆಗಳ ಅನುಷ್ಠಾನ ಪೂರಕವಾಗುತ್ತದೆ. ಸುರತ್ಕಲ್ ಬೀಚ್‌ನಲ್ಲಿ ಮನೋರಂಜನೆ ಮತ್ತು ಪ್ರವಾಸಿಗರ ಆಕರ್ಷಣೆಯ ನಿಟ್ಟಿನಲ್ಲಿ ಉಪ್ಪುನೀರಿನ ಕೊಳ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಯೋಜಿಸಲಾಗಿದೆ. ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.– ಮಾಣಿಕ್ಯ, ಪ್ರವಾಸೋದ್ಯಮ ಇಲಾಖೆ, ಉಪನಿರ್ದೇಶಕರು, ದ.ಕ. ಜಿಲ್ಲೆ