Advertisement

ರಾಹುಲ್‌ ಜತೆ ಮತ್ತೆ ಅಭಿಮಾನಿಗಳ ತುಳು

01:06 PM Jul 01, 2019 | Team Udayavani |

ಮ್ಯಾಂಚೆಸ್ಟರ್‌ನಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳ ನಡುವಿನ ಪಂದ್ಯದ ವೇಳೆ ರಾಹುಲ್‌ ಬಳಿ ತುಳು ಮಾತನಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣ ದಲ್ಲಿ ವೈರಲ್‌ ಆಗಿತ್ತು.

Advertisement

ಇದೀಗ ಮತ್ತೆ ತುಳು ಮಾತು ಬರ್ಮಿಂಗ್‌ಹ್ಯಾಮ್‌ ಮೈದಾನದಲ್ಲಿ ಮೊಳಗಿದೆ. ಭಾರತ-ಇಂಗ್ಲೆಂಡ್‌ ಪಂದ್ಯ ಆರಂಭದ ವೇಳೆ ರಾಷ್ಟ್ರಗೀತೆ ಹಾಡಲು ಮೈದಾನಕ್ಕೆ ಬರುತ್ತಿದ್ದ ಕೆ.ಎಲ್‌.ರಾಹುಲ್‌ ಅವರಲ್ಲಿ ಮಂಗಳೂರಿನ ಯುವಕರು ತುಳುವಿನಲ್ಲಿ ಮಾತನಾಡಿದ್ದಾರೆ.

ರಾಹುಲ್‌ ರಾಹುಲ್‌ ಎಂದು ಕರೆದಿರುವ ಯುವಕರು “ಎಡ್ಡೆ ಗೊಬ್ಬೊಡು ರಾಹುಲ್‌’ ಎಂದಿದ್ದಾರೆ. ಇದಕ್ಕೆ ಮುಗುಳ್ನಕ್ಕು ರಾಹುಲ್‌ ತಲೆಯಾಡಿಸಿದ್ದಾರೆ. ಬಳಿಕ “ಎಂಕ್ಲ ಕುಡ್ಲಡ್‌ ಬಯ್ದ’ ಎಂದು ಹೇಳಿದ ಯುವಕರಿಗೆ ರಾಹುಲ್‌ ಕೈ ಭಾಷೆಯಲ್ಲೇ ಆಯ್ತು ಎಂದಿದ್ದಾರೆ.

ಮಹಿಳೆಯೊಬ್ಬರು ಭುವಿ, ರಿಷಬ್‌ ಅವರಲ್ಲಿ ಚೆನ್ನಾಗಿ ಆಡಿ ಎಂದಿದ್ದಾರೆ. ಜತೆಗಿದ್ದ ಜಡೇಜ ಅವರಿಗೆ ಹಾಯ್‌ ಮಾಡಿದ್ದಾರೆ. ಯುವಕರ ಉತ್ಸಾಹ ಕಂಡು ಆಟಗಾರರು ಮುಗುಳ್ನಗುತ್ತ ಮೈದಾನಕ್ಕಿಳಿದರು. ರಾಹುಲ್‌ ಮಾತ್ರ ಫ‌ುಲ್‌ ಖುಷ್‌ ಆಗಿದ್ದಂತೆ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next