Advertisement

ಫ್ರೆಂಡ್ ಶಿಪ್ ಡೇ ವಿಡಿಯೋ ಪೋಸ್ಟ್ ಮಾಡಿದ ಯುವಿ: ಧೋನಿ, ಕೊಹ್ಲಿಗಿಲ್ಲ ಜಾಗ!

04:27 PM Aug 01, 2021 | Team Udayavani |

ಮುಂಬೈ: ದೇಶದಲ್ಲಿ ಇಂದು ಫ್ರೆಂಡ್ ಶಿಪ್ ಡೇ ಆಚರಿಸಲಾಗುತ್ತಿದೆ. ಕ್ರಿಕೆಟಿಗರೂ ಕೂಡಾ ತನ್ನ ಸ್ನೇಹಿತರಿಗೆ ಶುಭ ಕೋರುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡಾ ಫ್ರೆಂಡ್ ಶಿಪ್ ಡೇ ಪ್ರಯುಕ್ತ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಧೋನಿ ಮತ್ತು ವಿರಾಟ್ ಕೊಹ್ಲಿಗೆ ಜಾಗ ಇಲ್ಲದೇ ಇರುವುದಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ.

Advertisement

ಯುವರಾಜ್ ಸಿಂಗ್ ಅಕ್ಟೋಬರ್ 2000 ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದರು. ಹರ್ಭಜನ್ ಸಿಂಗ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ಅನಿಲ್ ಕುಂಬ್ಳೆ ಅವರಂತಹ ಅದ್ಭುತ ಆಟಗಾರರನ್ನು ಹೊಂದಿದ್ದ ತಂಡದ ಭಾಗವಾಗಿದ್ದರು. 2003 ರಲ್ಲಿ ವಿಶ್ವಕಪ್‌ನ ಫೈನಲ್‌ಗೆ ತಂಡವು ಅರ್ಹತೆ ಪಡೆದಾಗ ಮತ್ತು ಅದಕ್ಕೂ ಮೊದಲು ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾದೊಂದಿಗೆ ಜಂಟಿ ವಿಜೇತರಾಗಿದ್ದಾಗಲೂ ಯುವರಾಜ್ ತಂಡದ ಸದಸ್ಯರಾಗಿದ್ದರು. ನಂತರ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ವಿಜೇತ ತಂಡದಲ್ಲಿ ಯುವರಾಜ್ ಪ್ರಮುಖ ಆಟಗಾರರಾಗಿದ್ದರು.

ಇದನ್ನೂ ಓದಿ:ಪೂರನ್ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಪಾಕ್ ವಿರುದ್ಧ ಸೋತ ವೆಸ್ಟ್ ಇಂಡೀಸ್

ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಜೊತೆ ಯುವರಾಜ್ ಸಿಂಗ್ ಉತ್ತಮ ಸ್ನೇಹ ಹೊಂದಿದ್ದರು. ಆದಾಗ್ಯೂ, ತನ್ನ ಫ್ರೆಂಡ್ ಶಿಪ್ ಡೇ ವೀಡಿಯೋದಲ್ಲಿ, ಯುವರಾಜ್ ಸಿಂಗ್ ಧೋನಿ ಮತ್ತು ಕೊಹ್ಲಿ ಇಬ್ಬರೊಂದಿಗೂ ಯಾವುದೇ ತಮಾಷೆಯ ಕ್ಷಣವನ್ನು ಪೋಸ್ಟ್ ಮಾಡಿಲ್ಲ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಯುವರಾಜ್ ಸಿಂಗ್ ಪೋಸ್ಟ್ ಗೆ ಹಲವು ಪ್ರತಿಕ್ರಿಯೆಗಳು ಬಂದದಿವೆ. ಕೆಲವು ಅಭಿಮಾನಿಗಳು ಧೋನಿ ಮತ್ತು ವಿರಾಟ್ ಕೊಹ್ಲಿ ವೃತ್ತಿಜೀವನದ ಕಷ್ಟದ ಸಮಯದಲ್ಲಿ ಯುವರಾಜ್ ಸಿಂಗ್ ರನ್ನು ಬೆಂಬಲಿಸಿದ್ದಾರೆ ಎಂದು ಕೆಲವರು ತಮ್ಮ ನಿರಾಶೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next