-ಇದು ಅಭಿಮಾನಿಯೊಬ್ಬರ ಅಭಿಮಾನದ ಕಥೆ. ಹೌದು, ಈಗಾಗಲೇ ರಂಗಭೂಮಿ, ರಿಯಾಲಿಟಿ ಶೋ ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಚಿತ್ರಗಳು ಮೂಡಿಬಂದಿವೆ. ಅಷ್ಟೇ ಯಾಕೆ, ಚಿತ್ರರಂಗದ ವಿಷಯವೇ ಸಿನಿಮಾ ಆಗಿರುವ ಉದಾಹರಣೆಗಳು ಸಾಕಷ್ಟು ಇವೆ. ಆದರೆ, ಇದೇ ಮೊದಲ ಸಲ ಒಂದು ಸೂಪರ್ ಹಿಟ್ ಧಾರಾವಾಹಿ ವಿಷಯ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದೇ “ಫ್ಯಾನ್’. ಹೌದು, ಪ್ರಸ್ತುತ ಕಿರುತೆರೆ ಎಲ್ಲರಿಗೂ ಅಚ್ಚುಮೆಚ್ಚು. ಸಾಕಷ್ಟು ಪ್ರಭಾವ ಬೀರಿದ ರಂಗವೂ ಹೌದು. ಅದರಲ್ಲೂ ಧಾರಾವಾಹಿಗಳ ಬಗ್ಗೆ ಇನ್ನಿಲ್ಲದ ಕ್ರೇಜ್ ಇದೆ. ಆ ಅಂಶಗಳನ್ನೆಲ್ಲಾ ಒಟ್ಟಿಗೆ ಸೇರಿಸಿ, ಒಂದು ಸೂಪರ್ ಹಿಟ್ ಧಾರಾವಾಹಿಯ ಒಬ್ಬ ಹೀರೋ ಮತ್ತು ಆ ಹೀರೋನನ್ನು ಸಿಕ್ಕಾಪಟ್ಟೆ ಇಷ್ಟಪಡುವ ಅಪ್ಪಟ ಅಭಿಮಾನಿಯೊಬ್ಬಳ ಕಥೆಯೇ “ಫ್ಯಾನ್’ ಚಿತ್ರದ ಹೈಲೈಟ್.
Advertisement
ಇತ್ತೀಚೆಗೆ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವ ಮೂಲಕ ಚಿತ್ರದ ಅನುಭವ ಹೇಳಲೆಂದೇ ಪತ್ರಕರ್ತರ ಮುಂದೆ ಆಗಮಿಸಿತ್ತು ಚಿತ್ರತಂಡ. ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ ಅವರು ಶೀರ್ಷಿಕೆ ಇರುವ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ನಂತರ ಚಿತ್ರತಂಡ ಮಾತುಕತೆ ಶುರುಮಾಡಿತು. ದರ್ಶಿತ್ ಭಟ್ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಅನುಭವ. ಸಿನಿಮಾ ಕುರಿತು ಹೇಳಿಕೊಂಡ ನಿರ್ದೇಶಕರು, “ಚಿತ್ರ ಮುಗಿದಿದೆ. ಇಲ್ಲಿ ಹೊಸ ಕಥೆ ಹೆಣೆದಿದ್ದೇನೆ. ಧಾರಾವಾಹಿ ನೋಡುವ ಅಭಿಮಾನಿಯೊಬ್ಬಳ ಕಥೆ ಇಲ್ಲಿದೆ. ಆ ಧಾರಾವಾಹಿ ಹೀರೋ ಜೊತೆಗಿನ ಅಭಿಮಾನ ಮತ್ತು ಪ್ರೀತಿಯ ವಿಷಯಗಳು ಹೈಲೈಟ್. ಚಿತ್ರದ ಪೋಸ್ಟರ್ ನೋಡಿದಾಗ, ಹೀರೋ ಶಂಕರ್‌ನಾಗ್ ಅವರ ಭಾವಚಿತ್ರವಿರುವ ಟೀ ಶರ್ಟ್ ಧರಿಸಿರುವುದು ಗೊತ್ತಾಗುತ್ತೆ. ಶಂಕರ್‌ನಾಗ್ ಅವರಿಗೂ ಚಿತ್ರಕ್ಕೂ ಸಂಬಂಧವಿದೆ. ಅದು ಏನು ಅನ್ನೋದು ಸಸ್ಪೆನ್ಸ್. ಅವರ ಹೊನ್ನಾವರ ಊರಲ್ಲೇ ಚಿತ್ರೀಕರಿಸಲಾಗಿದೆ. ಸಿನಿಮಾಗೂ, ಶಂಕರ್‌ನಾಗ್ ಅವರಿಗೂ ಕನೆಕ್ಟ್ ಆಗುತ್ತೆ. ಅದನ್ನು ಚಿತ್ರದಲ್ಲೇ ನೋಡಿ. ಇದೊಂದು ಹೊಸ ಕಥೆ. ನೋಡುಗರಿಗೆ ನನ್ನ ಅಭಿಮಾನದ ಕಥೆ’ ಎನ್ನುವಷ್ಟರ ಮಟ್ಟಿಗೆ ಕಾಡುತ್ತದೆ’ ಎಂದರು ದರ್ಶಿತ್ ಭಟ್.
Related Articles
Advertisement