Advertisement

ಅಭಿಮಾನಿಯಿಂದ ಬಂತು ನಟಿ ಮೃಣಾಲ್‌ ಗೆ ಮದುವೆ ಪ್ರಪೋಸಲ್: ನಟಿ ಕೊಟ್ಟ ರಿಪ್ಲೈ ವೈರಲ್

02:57 PM Feb 28, 2023 | Team Udayavani |

ಮುಂಬಯಿ: ನಟಿ ಮೃಣಾಲ್ ಠಾಕೂರ್ ಬಿಟೌನ್‌ ನ ಬ್ಯುಸಿ ನಟಿಯರಲ್ಲಿ ಒಬ್ಬರು. ʼಸೀತಾರಾಮಂʼ ಸಿನಿಮಾದ ಮೂಲಕ ಎಲ್ಲರ ಮನ ಗೆದ್ದ ಮೃಣಾಲ್ ಇತ್ತೀಚೆಗೆ ʼಸೆಲ್ಫಿʼ ಸಿನಿಮಾದ ಡ್ಯಾನ್ಸ್‌ ನಂಬರ್‌ ನಲ್ಲಿ ಹೆಜ್ಜೆ ಹಾಕಿದ್ದರು.

Advertisement

ಮೊದಲಿಗೆ ಧಾರಾವಾಹಿಗಳಲ್ಲಿ ನಟಿಸಿ 2018 ರಲ್ಲಿ ಸಿನಿ ಪರೆದೆಗೆ ಎಂಟ್ರಿ ಕೊಟ್ಟ ಮೃಣಾಲ್‌ ಕಳೆದ 5 ವರ್ಷಗಳಲ್ಲಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ. ಸೋಶಿಯಲ್‌ ಮೀಡಿಯಾಲ್ಲಿ ಸಖತ್‌ ಆ್ಯಕ್ಟಿವ್‌ ಆಗಿರುವ ಮೃಣಾಲ್‌ ಮೊನ್ನೆಯಷ್ಟೇ  ಬ್ಯೂಟಿಫುಲ್‌ ಲುಕ್‌ ವುಳ್ಳ ಸ್ಲೋ ಮೋಷನ್‌ ವಿಡಿಯೋವೊಂದನ್ನು ಹಾಕಿದ್ದರು.

ಸುಂದರವಾಗಿ ಕಾಣಿಸಿಕೊಂಡ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮೃಣಾಲ್‌ ಹಂಚಿಕೊಂಡಿದ್ದು, ಸಾವಿರಾರು ಅಭಿಮಾನಿಗಳು ಇದಕ್ಕೆ ಕಮೆಂಟ್‌ ಮಾಡಿದ್ದಾರೆ. ಇದರಲ್ಲಿ ಅಭಿಮಾನಿಯೊಬ್ಬ ನಟಿಗೆ ಮದುವೆ ಪ್ರಪೋಸ್‌ ಮಾಡಿದ್ದಾನೆ.  ʼನನ್ನ ಕಡೆಯಿಂದ ಸಂಬಂಧ ಒಪ್ಪಿಗೆʼ ಎಂದು ಅಭಿಮಾನಿ ನಟಿಯ ವಿಡಿಯೋಗೆ ಕಮೆಂಟ್‌ ಮಾಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಭಿಮಾನಿಗಳ ಕಮೆಂಟ್‌ ಗಳಿಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಆದರೆ ಮೃಣಾಲ್‌ ಅಭಿಮಾನಿಯಿಂದ ಬಂದ ಪ್ರಪೋಸ್‌ ಗೆ “ನನ್ನ ಕಡೆಯಿಂದ ಒಪ್ಪಿಗೆಯಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಮೃಣಾಲ್‌ ಅವರ ರಿಪ್ಲೈ ವೈರಲ್‌ ಆಗಿದೆ.

ಇಶಾನ್ ಖಟ್ಟರ್  ಅವರʼ ಪಿಪ್ಪಾʼ, ಆದಿತ್ಯ ರಾಯ್‌ ಕಪೂರ್‌ ಅವರ ʼಗುಮ್ರಾಹ್ʼ ಸಿನಿಮಾದಲ್ಲಿ ಮೃಣಾಲ್‌ ಕಾಣಿಸಿಕೊಳ್ಳಲಿದ್ದಾರೆ. ʼಗುಮ್ರಾಹ್ʼ 2019 ರಲ್ಲಿ ಬಂದ ತಮಿಳು ಥ್ರಿಲ್ಲರ್‌ ʼ ಥಡಮ್ʼ ಸಿನಿಮಾದ ಹಿಂದಿ ರಿಮೇಕ್‌ ಸಿನಿಮಾವಾಗಿರಲಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next