Advertisement

ಬಾಲಿವುಡ್, ಸ್ಯಾಂಡಲ್ ವುಡ್ ಗೆ ಬರಸಿಡಿಲು! ಮೂರು ತಿಂಗಳಲ್ಲಿ 10 ಕಲಾವಿದರ ಸಾವು!

03:56 PM Jun 14, 2020 | Nagendra Trasi |

ಮುಂಬೈ/ಬೆಂಗಳೂರು:ಮಹಾಮಾರಿ ಕೋವಿಡ್ 19 ವೈರಸ್ ಇಡೀ ಜಗತ್ತಿನಾದ್ಯಂತ ಹಲವು ರೀತಿ ಭೀತಿಯನ್ನು ಹುಟ್ಟಿಸಿದೆ. ಕೋವಿಡ್ 19 ವೈರಸ್ ಗೆ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಅವೆಲ್ಲಕ್ಕಿಂತ ಹೆಚ್ಚಾಗಿ ಈ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಘಟಾನುಘಟಿ ನಟರು ಇಹಲೋಕ ತ್ಯಜಿಸಿದ್ದಾರೆ.

Advertisement

ಬಾಲಿವುಡ್ ನ ಖ್ಯಾತ ನಟ, ಟೆಲಿವಿಷನ್ ಸ್ಟಾರ್, ಎಂಎಸ್ ಧೋನಿ: ದಿ ಅನ್ ಟೋಲ್ಡ್ ಸ್ಟೋರಿ ಖ್ಯಾತಿಯ ಸುಶಾಂತ್ ಸಿಂಗ್ ರಜಪೂತ್ ಇಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಲಿವುಡ್ ಬೆಚ್ಚಿಬಿದ್ದಿದೆ.

ಕಳೆದ ಎರಡು ತಿಂಗಳಲ್ಲಿ ಬಾಲಿವುಡ್ ಗೆ ಆಘಾತದ ಮೇಲೆ ಆಘಾತ:
ರಜಪೂತ್ ಆತ್ಮಹತ್ಯೆಗೆ ಶರಣಾಗುವ ಮೂಲಕ ಕಳೆದ ಎರಡು ತಿಂಗಳಲ್ಲಿ ಬಾಲಿವುಡ್ ನ ನಾಲ್ವರು ಖ್ಯಾತ ನಟರು ಸಾವನ್ನಪ್ಪಿರುವುದನ್ನು ಗಮನಿಸಬೇಕಾಗಿದೆ. ಬಾಲಿವುಡ್ ನಲ್ಲಿ ಖ್ಯಾತಿಯಾಗಿದ್ದ ಇರ್ಫಾನ್ ಖಾನ್, ನಂತರ ರಿಷಿ ಕಪೂರ್ ಆ ಬಳಿಕ ವಾಜಿದ್ ಖಾನ್ ಸಾವನ್ನಪ್ಪಿದ್ದರು. ಇದೀಗ ಸುಶಾಂತ್ ಸಿಂಗ್ ನಾಲ್ಕನೇಯವರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಬಾಲಿವುಡ್ ಅಂಗಳದಲ್ಲಿ “ರಜನಿಗಂಧ” ಸೇರಿದಂತೆ ಹಲವಾರು ಕ್ಲಾಸಿಕ್ ಸಿನಿಮಾಗಳ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಬಸು ಚಟರ್ಜಿ ಜೂನ್ 4ರಂದು ವಿಧಿವಶರಾಗಿದ್ದರು. ಅಷ್ಟೇ ಅಲ್ಲ ಬಾಲಿವುಡ್ ನ ಹಿಟ್ ಸಿನಿಮಾಗಳ ಗೀತೆಗಳಿಗೆ ಸಾಹಿತ್ಯ ರಚಿಸಿದ್ದ ಖ್ಯಾತ ಗೀತರಚನೆಕಾರ ಯೋಗೇಶ್ ಗೌರ್ ಅವರು ಮೇ 29ರಂದು ಸಾವನ್ನಪ್ಪಿದ್ದರು.

ಸ್ಯಾಂಡಲ್ ವುಡ್ ಗೆ ಬರಸಿಡಿಲು:
ಕೋವಿಡ್ 19, ಲಾಕ್ ಡೌನ್ ನಿಂದ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು, ಚಿತ್ರ ಪ್ರದರ್ಶನವೂ ಕೂಡಾ ಆರಂಭವಾಗದೆ ಸಿನಿಮಾರಂಗ ಕಂಗಾಲಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡದ ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ವಿಧಿವಶರಾಗಿದ್ದ ಸುದ್ದಿ ಹೊರಬಿದ್ದಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಆತ್ಮೀಯರು, ಕುಟುಂಬ ವರ್ಗ ಸೇರಿ ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ ನಡೆಸಲಾಗಿತ್ತು.

Advertisement

ಇದಾದ ನಂತರ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ಹಾಸ್ಯ ನಟ ಮೈಕಲ್ ಮಧು ಅವರು ಮೇ 13ರಂದು ಇಹಲೋಕ ತ್ಯಜಿಸಿದ್ದರು. ಆ ಬಳಿಕ ರಿಯಾಲಿಟಿ ಶೋ ವಿಜೇತೆ ಮೆಬಿನಾ ಮೈಕಲ್ (23ವರ್ಷ) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಂದೆರಗಿದ್ದ ಸುದ್ದಿ ಚಿರಂಜೀವಿ ಸರ್ಜಾ ಅವರ ಆಕಸ್ಮಿಕ ನಿಧನ ಸುದ್ದಿ. ಯಾರೂ ಊಹಿಸದೇ, ನಿರೀಕ್ಷಿದೇ ಇದ್ದ ಸುದ್ದಿ ಅದಾಗಿತ್ತು. ಖ್ಯಾತ ನಟ ಅರ್ಜುನ್ ಸರ್ಜಾ ಅವರ ಅಳಿಯ (ಅಕ್ಕನ ಮಗ) ಚಿರು ಅವರು ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next