Advertisement

Bodybuilder; ಚಿನ್ನದ ಪದಕ ವಿಜೇತ ಖ್ಯಾತ ದೇಹದಾರ್ಢ್ಯ ಪಟು ಅರೋರಾ ಹೃದಯ ಸ್ತಂಭನದಿಂದ ಮೃತ್ಯು

12:01 PM May 26, 2023 | Team Udayavani |

ರಾಜಸ್ಥಾನ: ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದಕ್ಕೊಂದು ಸೇರ್ಪಡೆ ಎಂಬಂತೆ ಖ್ಯಾತ ದೇಹದಾರ್ಢ್ಯ ಪಟು, ಮಾಜಿ ಮಿಸ್ಟರ್‌ ಇಂಡಿಯಾ ಪ್ರೇಮ್‌ ರಾಜ್‌ ಅರೋರಾ(42ವರ್ಷ) ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:Moral policing: ಯುವತಿಯೊಂದಿಗೆ ಇದ್ದ ಕಾರಣಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಖ್ಯಾತ ಬಾಡಿ ಬಿಲ್ಡರ್‌, ಮಾಜಿ ಮಿಸ್ಟರ್‌ ಇಂಡಿಯಾ ಪ್ರೇಮ್‌ ರಾಜ್‌ ಎಂದಿನಂತೆ ವ್ಯಾಯಾಮ ಮುಗಿಸಿ ವಾಶ್‌ ರೂಂಗೆ ತೆರಳಿದ್ದರು. ಆದರೆ ಸುಮಾರು ಒಂದು ಗಂಟೆ ಕಳೆದರೂ ಹೊರಗೆ ಬಾರದಿರುವುದನ್ನು ಗಮನಿಸಿ, ಕುಟುಂಬ ಸದಸ್ಯರು ವಾಶ್‌ ರೂಂ ಬಾಗಿಲು ತಟ್ಟಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲವಾಗಿತ್ತು.

ನಂತರ ಬಾಗಿಲು ಒಡೆದು ನೋಡಿದಾಗ ಪ್ರೇಮ್‌ ರಾಜ್‌ ನೆಲದ ಮೇಲೆ ಕುಸಿದು ಬಿದ್ದಿರುವುದನ್ನು ಗಮನಿಸಿ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

ಪರೀಕ್ಷೆ ನಡೆಸಿದ ವೈದ್ಯರು ಪ್ರೇಮ್‌ ರಾಜ್‌ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದರು. ಪ್ರೇಮ್‌ ರಾಜ್‌ ದಿಢೀರ್‌ ನಿಧನ ಕುಟುಂಬ ಸದಸ್ಯರಿಗೆ ಆಘಾತವನ್ನು ತಂದಿದ್ದು, ಅರೋರಾ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಪ್ರೇಮ್‌ ರಾಜ್‌ ಅರೋರಾ 2012-13ರಲ್ಲಿ ಪವರ್‌ ಲಿಫ್ಟಿಂಗ್ ಸೇರಿದಂತೆ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು. 2014ರಲ್ಲಿ ಮಿಸ್ಟರ್‌ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದರು. ನಾಗ್ಪುರ್‌ ಚಾಂಪಿಯನ್‌ ಶಿಪ್‌ ನಲ್ಲಿ ಚಿನ್ನದ ಪದಕ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next