Advertisement

ಫ್ಯಾಮಿಲಿ ವೀಸಾ ನಿಯಮ ರದ್ದಾಗಲಿ: ಅಧ್ಯಕ್ಷ ಟ್ರಂಪ್‌

07:20 AM Dec 13, 2017 | Team Udayavani |

ವಾಷಿಂಗ್ಟನ್‌: ಅಮೆರಿಕದ ವಲಸೆ ನೀತಿಯಲ್ಲಿನ ಲೋಪದೋಷಗಳನ್ನು ತುರ್ತಾಗಿ ಸರಿಪಡಿಸಬೇಕು ಹಾಗೂ ಕುಟುಂಬ ವೀಸಾದಂತಹ “ಸರಣಿ ವಲಸೆ’ ನೀತಿಯನ್ನು ನಿಷೇಧಿಸಬೇಕೆಂದು ಅಮೆರಿಕದ ಅಧ್ಯಕ್ಷ ಟ್ರಂಪ್‌, ಅಮೆರಿಕ ಸಂಸತ್ತನ್ನು ಆಗ್ರಹಿಸಿದ್ದಾರೆ. 

Advertisement

ಮ್ಯಾನ್‌ಹಟನ್‌ನಲ್ಲಿ ಸೋಮವಾರ ನಡೆದ ದಾಳಿ ಹಿನ್ನೆಲೆ ಪ್ರತಿಕ್ರಿಯಿಸಿರುವ ಅವರು, “”ಬಂಧಿತ ಬಾಂಗ್ಲಾ ಶಂಕಿತ ಅಕಾಯೇದ್‌ ಉಲ್ಲಾ, “ಫ್ಯಾಮಿಲಿ ವೀಸಾ’ ಮೂಲಕ 7 ವರ್ಷಗಳ ಹಿಂದೆ ಇಲ್ಲಿಗೆ ಕಾಲಿಟ್ಟವನು. ಆದ್ದರಿಂದ ಕುಟುಂಬದ ಪ್ರಾಯೋಜಕತ್ವ ಪಡೆದು ಅವರ ಮನೆಗಳ ಇತರ ಸದಸ್ಯರು ಅಮೆರಿಕಕ್ಕೆ ಕಾಲಿಡುವುದನ್ನು ನಿಷೇಧಿಸಬೇಕು” ಎಂದಿದ್ದಾರೆ. ಏತನ್ಮಧ್ಯೆ, ಬಂಧಿತ ಆರೋಪಿ ಅಕಾಯೇದ್‌ ಉಲ್ಲಾ (27) ತಾನು ಐಸಿಸ್‌ ಉಗ್ರ ಸಂಘಟನೆ ಜತೆ ಸಂಬಂಧ ಹೊಂದಿರು ವುದನ್ನು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. 

ಅರಮನೆ ಅಕ್ರಮ ಪ್ರವೇಶ ಯತ್ನ: ಲಂಡನ್‌ನ ರಾಜಮನೆ ತನ ವಾಸಿಸುವ ಬಕಿಂಗ್‌ಹ್ಯಾಮ್‌ ಅರಮನೆ ಹೊರವಲಯದ ಗೋಡೆಯೊಂದನ್ನು ಹತ್ತಲು ಪ್ರಯತ್ನಿಸಿದ್ದ 24 ವರ್ಷದ ಯುವಕನೊಬ್ಬನನ್ನು ಭದ್ರತಾ ಪಡೆ ಬಂಧಿಸಿವೆ. ಆದರೆ, ಇದು ಉಗ್ರ ಚಟುವಟಿಕೆಯಲ್ಲ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next