Advertisement
ಉತ್ತರ ಪ್ರದೇಶದ ಬಂದಾ ನಗರದಲ್ಲಿ ವಾಸಿಸುತ್ತಿದ್ದ ರಾಜಕುಮಾರ್ ದಂಪತಿಗಳ ಮನೆಗೆ ಭಾನುವಾರದಂದು ಹಾವೊಂದು ನುಸುಳಿ ಕೂತಿದೆ ಇದನ್ನು ಕಂಡ ಮನೆಮಂದಿ ಮನೆಯೊಳಗಿದ್ದ ಹಾವನ್ನು ಎಷ್ಟೇ ಪ್ರಯತ್ನ ಪಟ್ಟರೂ ಮನೆಯೊಳಗಿಂದ ಹೊರ ಹಾಕಲು ಮಾತ್ರ ಸಾಧ್ಯವಾಗಲಿಲ್ಲ, ಇದರಿಂದ ಬೇಸತ್ತ ಮನೆಮಂದಿ ಹಾವನ್ನು ಮನೆಯೊಳಗಿಂದ ಹೊರ ಹಾಕಲು ಮನೆಯೊಳಗೆ ಹೊಗೆ ಹಾಕಲು ಮುಂದಾಗಿದ್ದಾರೆ, ಮನೆಯೊಳಗೆ ಸಗಣಿಯಿಂದ ತಯಾರಿಸಿದ ಬೆರಣಿಯನ್ನು ಹಾಕಿ ಬಳಿಕ ಬೆಂಕಿ ಹಚ್ಚಿ ಅದರಿಂದ ಬರುವ ಹೊಗೆಯಿಂದ ಹಾವು ಮನೆಯಿಂದ ಹೊರ ಬರಬಹುದು ಎಂದು ನಂಬಿ ಮನೆಯೊಳಗೆ ಬೆರಣಿ ರಾಶಿ ಹಾಕಿ ಹೊಗೆ ಹಾಕಿದ್ದಾರೆ, ಹೊಗೆ ಹಾಕಿದ ಕೆಲವೇ ಹೊತ್ತಿನಲ್ಲಿ ಬೆರಣಿಗೆ ಬೆಂಕಿ ಆವರಿಸಿ ಇಡೀ ಮನೆಯೇ ಸುಟ್ಟು ಭಸ್ಮವಾಗಿದೆ.
Related Articles
Advertisement
ಮನೆ, ದವಸ ಧಾನ್ಯ, ಚಿನ್ನಾಭರಣ, ಸೇರಿದಂತೆ ಹಾನಿಗೊಳಗಾದ ಘಟನೆ ಕುರಿತು ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದ್ದು ಅಧಿಕಾರಿಗಳು ಹಾನಿಯ ಪ್ರಮಾಣದ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ರಾಜ್ ಕುಮಾರ್ ದೆಹಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಪತ್ನಿ ಹಾಗು ಐದು ಮಂದಿ ಮಕ್ಕಳೊಂದಿಗೆ ಉತ್ತರ ಪ್ರದೇಶದ ಬಂದಾ ನಗರದಲ್ಲಿ ಜೀವನ ನಡೆಸುತಿದ್ದರು, ಭಾನುವಾರ ಮನೆಯೊಳಗೆ ಬಂದ ಹಾವನ್ನು ಓಡಿಸಲು ಮನೆಯೊಳಗೆ ಹೊಗೆ ಹಾಕಲು ಹೋಗಿ ಮನೆ ಸಹಿತ ಮನೆಯೊಳಗಿದ್ದ ವಸ್ತುಗಳೆಲ್ಲವನ್ನೂ ಕಳೆದುಕೊಂಡಿದ್ದಾರೆ.
ಇಷ್ಟೆಲ್ಲಾ ನಡೆದ ಬಳಿಕ ಮನೆಯೊಳಗಿದ್ದ ಹಾವು ಎಲ್ಲಿ ಹೋಗಿದೆ ಎಂಬುದು ಮನೆ ಮಂದಿಯ ಗಮನಕ್ಕೆ ಮಾತ್ರ ಬರಲಿಲ್ಲ,
ಇನ್ನು ಮುಂದೆ ಎಲ್ಲಿಯಾದರೂ ಮನೆಯೊಳಗೆ ಹಾವು ಬಂತೆಂದು ಮನೆಯೊಳಗೆ ಹೊಗೆ ಹಾಕುವ ಪ್ರಯತ್ನ ಮಾಡಲು ಹೋಗದಿರಿ, ಹಾಗೇನಾದರೂ ಮನೆಯೊಳಗೆ ಹಾವು ಬಂದಿದ್ದಲ್ಲಿ ಸ್ಥಳೀಯ ಉರಗ ತಜ್ಞರನ್ನು ಕರೆಸಿ ಹಾವುಗಳನ್ನು ರಕ್ಶಣೆ ಮಾಡಿ, ಈ ರೀತಿ ಹಾವುಗಳನ್ನು ಓಡಿಸುವ ಪ್ರಯತ್ನ ಎಂದೂ ಮಾಡದಿರಿ.
ಇದನ್ನೂ ಓದಿ: Kerala Incident: ಕೇರಳ ಸರಣಿ ಸ್ಫೋಟ… ಮೃತರ ಸಂಖ್ಯೆ 3ಕ್ಕೆ ಏರಿಕೆ, ಇಂದು ಸರ್ವಪಕ್ಷ ಸಭೆ