Advertisement

ಕುಷ್ಟಗಿ: ಎರಡನೇ ಡೋಸ್ ಆಗದಿದ್ದರೂ ಪ್ರಮಾಣ ಪತ್ರ: ಬೆಚ್ಚಿ ಬಿದ್ದ ಕುಟುಂಬ ವರ್ಗ.!

06:59 PM Dec 08, 2021 | Team Udayavani |

ಕುಷ್ಟಗಿ: ಪಟ್ಟಣದ ಪುರಸಭೆ 15ನೇ ವಾರ್ಡ್ ಸದಸ್ಯೆ ಸೇರಿದಂತೆ ಅವರ ಕುಟುಂಬ ವರ್ಗ ಕೋವಿಡ್ ಲಸಿಕೆ ಎರಡನೇ ಡೋಸ್ ಹಾಕಿಸಿಕೊಳ್ಳದಿದ್ದರೂ, ಲಸಿಕಾಕರಣವಾಗಿದೆ ಎನ್ನುವ ಪ್ರಮಾಣ ಪತ್ರಗಳು ಬಂದಿವೆ.

Advertisement

ಕುಷ್ಟಗಿ ಪಟ್ಟಣದ 15ನೇ ವಾರ್ಡ ಸದಸ್ಯೆ ವಿಜಯಲಕ್ಷ್ಮೀ ಕಟ್ಟಿಮನಿ, ಪತಿ ಮಂಜುನಾಥ ಕಟ್ಟಿಮನಿ ಸೇರಿದಂತೆ ಐವರು ಸದಸ್ಯರು ಕಳೆದ 7ನೇ ಜೂನ್ ರಂದು ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಹಾಕಿಸಲಾಗಿತ್ತು. 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಮನೆಯಲ್ಲಿ ಯಾರಿಗೂ ಒಬ್ಬರು ತಪ್ಪಿದರೆ ಮತ್ತೊಬ್ಬರಿಗೆ ಹುಷಾರ್ ಇಲ್ಲದ ಕಾರಣ ಲಸಿಕೆಯನ್ನು ಮುಂದೂಡಲಾಗಿತ್ತು.

ನಂತರ ಲಸಿಕೆ ಹಾಕಿಸಿಕೊಳ್ಳಲು ಡಿ.7ರಂದು ಸ್ಥಳೀಯ ಆಸ್ಪತ್ರೆಗೆ ಹೋಗಿರುವ ಸಂದರ್ಭದಲ್ಲಿ ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಎಂದು ಲಸಿಕಾಕರಣವಾಗಿರುವ ಬಗ್ಗೆ ಪ್ರಮಾಣ ಪತ್ರ ತೋರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ನಂತರ ಲಸಿಕಾ ಮಿತ್ರರೊಂದಿಗೆ ವಾದಿಸಿ, ಕಡೆಗೂ ಲಸಿಕೆ ಹಾಕಿಸಿಕೊಂಡೆವು ಎಂದು ಪುರಸಭೆ ಸದಸ್ಯೆಯ ಪತಿ ಮಂಜುನಾಥ ಕಟ್ಟಿಮನಿ ಮಾಹಿತಿ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿ ಮಂಜುನಾಥ ಕಟ್ಟಿಮನಿ ಅವರು, ಮೊದಲ ಡೋಸ್ ಬಳಿಕ ಎರಡನೇ ಡೋಸ್ ಹಾಕಿಸಿಕೊಳ್ಳುವ ಕುರಿತು, ಜನರನ್ನು ಲಸಿಕೆ ಕೇಂದ್ರ ಕರೆತರಲಾಗದೇ ಅಂಕಿ ಅಂಶಗಳಿಂದ ಪ್ರಗತಿ ತೋರಿಸಲು ಲಸಿಕೆ ಹಾಕಿಸಿಕೊಳ್ಳದೇ ಇದ್ದರು ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ ಸೃಷ್ಟಿಸಿರುವುದು ಅಕ್ರಮ ಬಹಿರಂಗವಾಗಿದೆ. ಲಸಿಕಾಕರಣದ ಪ್ರಗತಿ ತೋರಿಸಲು ಅಂಕಿ ಅಂಶಗಳ ಹೊದಾಣಿಕೆಯ ಎಡವಟ್ಟು ಮಾಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next