Advertisement
ದಕ್ಷಿಣ ಕನ್ನಡದ ರಾಜಕೀಯ ಇತಿ ಹಾಸವನ್ನು ಅವಲೋಕಿಸಿದಾಗ, ಈ ಹಿಂದಿನ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ 1951ರಲ್ಲಿ ಬೆನಗಲ್ ಶಿವರಾವ್ ಗೆಲುವು ಪಡೆದಿದ್ದರು. 1957ರ ಕೆ.ಆರ್.ಆಚಾರ್, 1962ರ ಎ. ಶಂಕರ್ ಆಳ್ವ, 1967ರ ಸಿ.ಎಂ.ಪೂಣಚ್ಚ, 1971ರ ಕೆ.ಕೆ.ಶೆಟ್ಟಿ, 1977ರಿಂದ 1989ರವರೆಗೆ ಜನಾರ್ದನ ಪೂಜಾರಿ, 1991ರಿಂದ 1999ರವರೆಗೆ ಧನಂಜಯ ಕುಮಾರ್, 2004ರಲ್ಲಿ ಸದಾನಂದ ಗೌಡ, 2009 ಹಾಗೂ 2014ರಲ್ಲಿ ನಳಿನ್ ಕುಮಾರ್ ಕಟೀಲು ಆಯ್ಕೆಯಾಗಿದ್ದರು. ವಿಶೇಷವೆಂದರೆ, ಇವರಾರೂ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದವರಲ್ಲ. ಸಂಸದರಾಗಿ ಆಯ್ಕೆಯಾದ ಇವರಲ್ಲಿ ಯಾರೂ ಕೂಡ ರಾಜಕೀಯದ ಹಿನ್ನೆಲೆಯಿದ್ದವರಲ್ಲ. ಸಂಸದರಾದ ಬಳಿಕ ಕುಟುಂಬದವರನ್ನು ರಾಜಕೀಯಕ್ಕೆ ಕರೆ ತರುವ ಬಗ್ಗೆಯೂ ಪ್ರಯತ್ನಿಸಲಿಲ್ಲ. ಇದು ಸ್ವಲ್ಪ ಮಟ್ಟಿಗೆ ಉಡುಪಿ ಭಾಗಕ್ಕೂ ಅನ್ವಯವಾಗುತ್ತದೆ.
Related Articles
ಸ್ಪರ್ಧಿಸಿ 4 ಬಾರಿ ಶಾಸಕರಾಗಿ, 2004ರಲ್ಲಿ ಸಂಸದೆಯಾಗಿ ಚುನಾಯಿತ ರಾಗಿದ್ದರು. 2013ರಲ್ಲಿ ಅವರ ಪುತ್ರ ಪ್ರಮೋದ್ ಮಧ್ವರಾಜ್ ಉಡುಪಿಯಿಂದ ಚುನಾಯಿತರಾದರು. ಉಳಿದಂತೆ, ಕರಾವಳಿಯ ಕುಟುಂಬ ರಾಜಕಾರಣದ ಬಗ್ಗೆ ಅವಲೋಕಿಸಿದಾಗ, 1957ರ ವಿಧಾನಸಭಾ ಚುನಾವಣೆಯಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಗಜೀವನ್ ದಾಸ್ ಶೆಟ್ಟಿ ಗೆಲುವು ಸಾಧಿಸಿದ್ದರು. 1983ರಲ್ಲಿ ಅವರ ಸಹೋದರ, ಬಿಜೆಪಿಯ ಡಾ|ಬಿ.ಬಿ.ಶೆಟ್ಟಿ ಗೆದ್ದು ಶಾಸಕರಾಗಿದ್ದರು. ವೈದ್ಯರಾಗಿ, ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಬಂಟ್ವಾಳದ ಡಾ| ನಾಗಪ್ಪ ಆಳ್ವ ಅವರ ಪುತ್ರ ಡಾ|ಜೀವರಾಜ ಆಳ್ವ ಸತತ ಐದು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬೆಳ್ತಂಗಡಿಯ ಕೇದೆ ಕುಟುಂಬದ ಮೂವರು ಶಾಸಕರಾದ ಇತಿಹಾಸ ಬೆಳ್ತಂಗಡಿಯದ್ದು. ಇವರು ಚಿದಾನಂದ ಬಂಗೇರ, ವಸಂತ ಬಂಗೇರ ಮತ್ತು ಪ್ರಭಾಕರ ಬಂಗೇರ. ಈ ಮನೆಯವರಿಗೆ ಒಟ್ಟು 7 ಅವಧಿಯ ಶಾಸಕತ್ವ ದೊರೆತಿದೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಗಂಗಾಧರ ಗೌಡ ಬಳಿಕ ಬಿಜೆಪಿ ಸೇರಿ ಸ್ಪರ್ಧಿಸಿದ್ದು, ಅವರ ಪುತ್ರ ರಂಜನ್ ಗೌಡ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.
Advertisement
ಹರ್ಷ ಮೊಯ್ಲಿ ಎಂಟ್ರಿ ಫಲಿಸಲಿಲ್ಲ
ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಅವರು ಪುತ್ರ ಹರ್ಷ ಮೊಯ್ಲಿ ಅವರನ್ನು ಲೋಕಸಭೆಗೆ ಕರೆ ತರಲು ಒಂದು ಸುತ್ತಿನ ಪ್ರಯತ್ನ ನಡೆಸಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯಿಂದ ಹರ್ಷ ಮೊಯ್ಲಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಲು ದಿಢೀರ್ ಪ್ರಯತ್ನ ನಡೆಸಿದ್ದರೂ ಫಲಿಸಿರಲಿಲ್ಲ.
ತಲಾ 4 ಬಾರಿ ತಂದೆ-ಮಗ ಎಂಎಲ್‌ಎ
ತಂದೆ ಪ್ರತಿನಿಧಿಸಿದ ಕ್ಷೇತ್ರವನ್ನು ಬಳಿಕ ಪುತ್ರ ಕೂಡ ಪ್ರತಿನಿಧಿಸುತ್ತಿರುವ ಅಪರೂ ಪದ ಕ್ಷೇತ್ರ ಕೂಡ ದ.ಕ.ಜಿಲ್ಲೆಯಲ್ಲಿದೆ ಎಂಬುದು ವಿಶೇಷ. ಹಿಂದಿನ “ಉಳ್ಳಾಲ’ ಹಾಗೂ ಈಗಿನ “ಮಂಗಳೂರು’ ವಿಧಾನಸಭಾ ಕ್ಷೇತ್ರವನ್ನು ಯು.ಟಿ. ಫರೀದ್ ಅವರು 1972-1978- 1999-2004ರಲ್ಲಿ ಜಯಿಸಿದ್ದರು. ಅವರ ನಿಧನಾನಂತರ ಅವರ ಪುತ್ರ ಯು.ಟಿ.ಖಾದರ್ ಈ ಕ್ಷೇತ್ರವನ್ನು 2007, 2008, 2013ಹಾಗೂ 2018ರಲ್ಲಿ ಗೆದ್ದಿದ್ದಾರೆ. ಹೀಗೆ, ಇಲ್ಲಿ ಕಳೆದ 14 ಚುನಾವಣೆಗಳಲ್ಲಿ ತಂದೆ-ಮಗ ಒಟ್ಟು 8 ಬಾರಿ ಇಲ್ಲಿ ಗೆದ್ದಿ ದ್ದಾರೆ. ಈ ಬಾರಿ, ಖಾದರ್ ಸಹೋದರ ಯು.ಟಿ.ಇಫ್ತಿಕಾರ್ ಕಾಸರಗೋಡು ಲೋಕಸಭಾ ಸೀಟಿನ ಮೇಲೆ ಕಣ್ಣಿಟ್ಟಿದ್ದಾರೆ.
ದಿನೇಶ್ ಇರಾ