Advertisement
ಅಗತ್ಯ ಸೇವೆಗಳಿಗಾಗಿ ಪರದಾಟಮೇರಿ ಸ್ಟಾಪ್ಸ್ ಇಂಟರ್‌ನ್ಯಾಷನಲ್ ನಡೆಸಿರುವ ಅಧ್ಯಯನದ ಪ್ರಕಾರ, ಲಾಕ್‌ಡೌನ್‌ನಿಂದಾಗುವ ತೊಂದರೆ ತಾಪತ್ರಯಗಳನ್ನು ತೆರೆದಿಟ್ಟಿದೆ. ಗರ್ಭ ನಿರೋಧಕ ಮತ್ತು ಸುರಕ್ಷಿತ ಗರ್ಭಪಾತದಂತಹ ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಮಹಿಳೆಯರು ಪರದಾಡುವ ಸ್ಥಿತಿ ಎದುರಾಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಈ ಸಂಸ್ಥೆಯು ತಾನು ಕಾರ್ಯ ನಿರ್ವಹಿಸುತ್ತಿರುವ 37 ದೇಶಗಳಲ್ಲಿ ಈ ಅಧ್ಯಯನವನ್ನು ನಡೆಸಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಎಂಎಸ್‌ಐ ಅಂದಾಜಿನ ಪ್ರಕಾರ, ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳವರೆಗೆ ಅಗತ್ಯ ಸೇವಾ ಸೌಲಭ್ಯದಲ್ಲಿ ಶೇ.80 ರಷ್ಟು ಕಡಿತವಾಗಲಿದೆ. ಸುಮಾರು 9.5 ಕೋಟಿ ಕುಟುಂಬ ಯೋಜನೆಯಿಂದ ಹೊರ ಬೀಳಲಿದ್ದಾರೆ ಎಂದು ಹೇಳಿದೆ. ಒಂದು ವೇಳೆ ನಿಗದಿತ ಸಮಯಕ್ಕೆ ಲಾಕ್‌ಡೌನ್ ತೆರವುಗೊಂಡರೆ ಇದರ ಪ್ರಮಾಣ 4 ಕೋಟಿಗೆ ಇಳಿಯಲಿದೆ ಎಂಬುದನ್ನು ಉಲ್ಲೇಖೀಸಿದೆ. ಅಸುರಕ್ಷಿತ ಮಾರ್ಗಗಳಿಂದ ಸಾವು-ನೋವು
ಅಗತ್ಯ ಸೇವೆ ದೊರೆಯದ ಹಿನ್ನೆಲೆ ಅನಪೇಕ್ಷಿತ ಗರ್ಭಧಾರಣೆ ಪ್ರಮಾಣದಲ್ಲಿ ಮೂರು ಮಿಲಿಯನ್ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದ್ದು, ಅಸುರಕ್ಷಿತ ಮಾರ್ಗಗಳ ಪಾಲನೆಯಿಂದ 2.7 ಮಿಲಿಯನ್ ನಷ್ಟು ಗರ್ಭಪಾತ ಪ್ರಕರಣಗಳು ದಾಖಲಾಗಬಹುದು ಎಂದಿದೆ. ಜತೆಗೆ ಅಗತ್ಯ ಚಿಕಿತ್ಸೆಗಳು ದೊರೆಯದೇ 11 ಸಾವಿರದಷ್ಟು ಹೆರಿಗೆ ಸಂಬಂಧಿತ ಸಾವುಗಳು ಸಂಭವಿಸಲೂಬಹುದು ಎಂದು ಎಚ್ಚರಿಸಿದೆ.
Related Articles
ನೇಪಾಲದಲ್ಲಿ ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ದೇಶಾದ್ಯಂತ ಮೇರಿ ಸ್ಟಾಪ್ಸ್ ಚಿಕಿತ್ಸಾಲಯಗಳನ್ನು ಮುಚ್ಚಬೇಕಾಯಿತು. ಆದರೆ ಅಲ್ಲಿನ ಪ್ರಜೆಗಳಿಂದ ಗರ್ಭಧಾರಣೆ ಸಂಬಂಧಿತ ಸೇವೆಗೆ ಬೇಡಿಕೆ ಹೆಚ್ಚಿದ್ದು, ಸರಕಾರದ ಮುಂದೆ ಸೇವೆಯನ್ನು ಪುನರಾರಂಭಿಸುವಂತೆ ಕೋರಲಾಗಿದೆ. ಸರಕಾರ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿದ್ದು, ಆರೋಗ್ಯ ಕಾರ್ಯಕರ್ತರಿಗೆ ಮತ್ತು ಚಿಕಿತ್ಸಾಲಯದ ಸಿಬಂದಿಗೆ ಪ್ರಯಾಣಕ್ಕೆ ಅನುಕೂಲವಾಗುವಂತೆ ಪಾಸ್‌ಗಳನ್ನು ನೀಡಿದ್ದು, ಚಿಕಿತ್ಸಾಲಯವನ್ನು ತೆರೆಯಲು ಆದೇಶಿಸಿದೆ.
Advertisement
ಸಾವು-ನೋವುಇಂತಹ ಸಂದರ್ಭದಲ್ಲಿ ಗರ್ಭಧಾರಣೆ ಸಂಬಂಧಿತ ಸೇವಾ ಕೇಂದ್ರಗಳನ್ನು ಮತ್ತು ಸೇವೆಯನ್ನು ಕಡಿತಗೊಳಿಸುವುದರಿಂದ ಸಾವು-ನೋವುಗಳು ಹೆಚ್ಚಾಗಬಹುದು. ಸರಿಯಾದ ಸೇವೆಗಳು ಸಿಗದೇ 2014 ಮತ್ತು 2015ರ ನಡುವೆ 3,600 ಮತ್ತು 4,900 ಹೆಚ್ಚುವರಿ ತಾಯಿ, ನವಜಾತ ಮತ್ತು ಹೆರಿಗೆಯ ಸಾವುಗಳಿಗೆ ಕಾರಣವಾಗಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಎಬೋಲಾ ವೈರಸ್ ಕಾಣಿಸಿಕೊಂಡ ಸಂದರ್ಭದಲ್ಲೂ ಸೇವೆಗಳ ಕಡಿತದಿಂದ 4 ಸಾವಿರ ಸಾವುಗಳು ಸಂಭವಿಸಿತು ಎಂದು ತಿಳಿಸಿದ್ದಾರೆ.