Advertisement

ಆರ್‌ಟಿಐ ಕಾರ್ಯಕರ್ತ ಸಹಿತ ಪತ್ನಿ, ಮಕ್ಕಳು ನಾಪತ್ತೆ?

11:23 AM Dec 20, 2020 | sudhir |

ಸಿದ್ದಾಪುರ: ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಕಬ್ಬಿನಾಲೆ ನಿವಾಸಿ ಆರ್‌ಟಿಐ ಕಾರ್ಯಕರ್ತ ಅಶೋಕ ಶೆಟ್ಟಿಗಾರ್‌ (49) ಹಾಗೂ ಅವರ ಪತ್ನಿ ಶ್ರೀನಿಧಿ (40), ಮಗ ಅಶ್ವಿ‌ನ್‌ (16), ಮಗಳು ಆಶಿಕಾ (14) ಅವರು ಡಿ. 15ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಅಳಿಯ ಶಿವಕುಮಾರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಆರ್‌ಟಿಐ ಕಾರ್ಯಕರ್ತರಾಗಿರುವ ಅಶೋಕ ಶೆಟ್ಟಿಗಾರ್‌ ಅವರ ಮನೆಗೆ ಡಿ. 15ರಿಂದ ಬೀಗ ಹಾಕಿರುವುದರಿಂದ ಅನುಮಾನಗೊಂಡ ಅಳಿಯ ಶಿವಕುಮಾರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮಕ್ಕಳಿಬ್ಬರು ಹಾಲಾಡಿಯ ಶಾಲೆಯೊಂದರ ಹೈಸ್ಕೂಲ್‌ ವಿದ್ಯಾರ್ಥಿಗಳಾಗಿದ್ದರು.

ಮೊಬೈಲ್‌ ಸ್ವಿಟ್ಚ್ಡ್ ಆಫ್

ಯಾವ ಕಾರಣಕ್ಕೆ ಕಾಣಿಯಾಗಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿಲ್ಲ. ಅವರ ಮೊಬೈಲ್‌ ಕೂಡ ಸ್ವಿಟ್ಚ್ಡ್ ಆಫ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಕ್ಕಪಕ್ಕದ ಮನೆಯವರಿಗಾಗಲಿ ಅಥವಾ ಸಂಬಂಧಿಕರಿಗಾಗಲಿ ಅವರು ನಾಪತ್ತೆಯಾಗಿದ್ದಾರೆಯೇ ಅಥವಾ ಎಲ್ಲಿಗಾದರೂ ಹೋಗಿದ್ದಾರೆಯೇ ಎನ್ನುವ ಖಚಿತತೆ ಸಿಕ್ಕಿಲ್ಲ. ಅಮಾಸೆಬೈಲು ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಾಮಪತ್ರ ಸಲ್ಲಿಸಿದ್ದರು
ಅಶೋಕ್‌ ಶೆಟ್ಟಿಗಾರ್‌ ಅವರು ಗ್ರಾ.ಪಂ. ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ರಾಜಕೀಯ ಒತ್ತಡದಿಂದ ಚುನಾವಣೆ ಮುಗಿಯುವವರೆಗೆ ಬೇರೆಡೆ ಇರೋಣವೆಂದು ಹೋಗಿರಬಹುದೇ? ಅಥವಾ ರಾಜಕೀಯದಿಂದ ಅಪಹರಣ ಮಾಡಿರಬಹುದೇ ಎನ್ನುವ ದೃಷ್ಟಿಕೋನದಲ್ಲೂ ತನಿಖೆ ಸಾಗಿದೆ.

Advertisement

ಬಳ್ಳಾರಿಯಲ್ಲಿದ್ದಾರೆಯೇ?
ನಾಪತ್ತೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಅವರು ಬಳ್ಳಾರಿಯಲ್ಲಿ ಇರುವ ಶಂಕೆ ವ್ಯಕ್ತಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next