ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿ ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ. ಯುವಕರಿಗೆ ರಾಜಕಾರಣದಲ್ಲಿ ಆಸಕ್ತಿ ಮೂಡಿಸಬೇಕು, ಅವರನ್ನು ರಾಜಕಾರಣದ ಕಡೆ ಆಕರ್ಷಿತರಾಗಿ ಮಾಡಬೇಕು ಎಂಬ ವಿಚಾರದಿಂದ ಸಂಸದೀಯ ಸಮಿತಿಯೊಂದು ಮಾಡಿದ ಶಿಫಾರಸು ಉತ್ತಮವಾದ ನಿಲುವು. ಆದರೆ ಅದು 18 ವರ್ಷಕ್ಕೆ ತರುವುದು ಸೂಕ್ತವಲ್ಲ, ಇದು ಹಲವಾರು ಸಮಸ್ಯೆಗಳು ಉದ್ಭವಿಸಲು ಕಾರಣವಾಗಬಹುದು.
18ನೇ ವಯಸ್ಸಿನ ಯುವಕನಿಗೆ ಪರಿಣಾಮಕಾರಿಯಾಗಿ ನಿರ್ಧಾರ ಮತ್ತು ಆಡಳಿತಕ್ಕೆ ಅಗತ್ಯವಾದ ಅನುಭವ, ಪ್ರಭುದ್ದತೆ ಕಡಿಮೆ ಇರುತ್ತದೆ. ಜತೆಗೆ ಸರಿಯಾದ ಶಿಕ್ಷಣ ಇರುವುದಿಲ್ಲ. 18ನೇ ವಯಸ್ಸಿನ ವ್ಯಕ್ತಿ ಚುನಾ ವಣೆಯಲ್ಲಿ ಸ್ಪರ್ಧಿಸಿದರೆ ಅವರು ಬಾಹ್ಯ ಪ್ರಭಾವಕ್ಕೆ ಹೆಚ್ಚು ಒಳಗಾಗಬಹುದು.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಹೊಣೆಗಾರಿಕೆ ಬಗ್ಗೆ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವ ಬಗ್ಗೆ ಮತ್ತು ದೇಶದ ಆಡಳಿತ ವ್ಯವಸ್ಥೆ ಬಗ್ಗೆ ಚುನಾವಣೆ ನಿಲ್ಲುವ ವ್ಯಕ್ತಿಗೆ ಜ್ಞಾನ ಇರಬೇಕು. ಅದನ್ನು ಪಡೆಯಲು ಸರಿಯಾದ ಶಿಕ್ಷಣ ಅವಶ್ಯ ಅಥವಾ ರಾಜಕೀಯದಲ್ಲಿ ಅನು ಭವ ಅವಶ್ಯ. ಆದರೆ 18ನೇ ವಯಸ್ಸಿಗೆ ಪದವಿ ಶಿಕ್ಷಣ ಕೂಡಾ ಪಡೆಯಲು ಸಾಧ್ಯ ವಿಲ್ಲ.
ಸರಿಯಾದ ಶಿಕ್ಷಣ, ಅನುಭವವಿಲ್ಲದೆ ಇರುವ ವ್ಯಕ್ತಿಗೆ ಚುನಾವಣೆ ನಿಲ್ಲಲು ಅವಕಾಶ ನೀಡುದರೆ ಆ ವ್ಯಕ್ತಿಯು ಅಧಿಕಾರ ನಡೆಸಲು ಬೇರೆಯವರನ್ನು ಅವಲಂ ಬಿಸಬೇಕಾಗುತ್ತದೆ. ಅವರ ಅಧಿಕಾರದಲ್ಲಿ ಕುಟುಂಬದವರು ಹಸ್ತಕ್ಷೇಪ ಮಾಡುವ ಸಾಧ್ಯತೆ ಹೆಚ್ಚು.
ಲೋಕಸಭೆ ಮತ್ತು ವಿಧಾನಸಭೆಯ ವ್ಯಾಪ್ತಿಯ ದೊಡ್ಡದಾಗಿರುತ್ತದೆ. ಜವಾಬ್ದಾರಿ ಹೆಚ್ಚು ಇರುತ್ತದೆ ಮತ್ತು ಅಲ್ಲಿ ಲಕ್ಷಾಂತರ ಜನರ ಸಮಸ್ಯೆ, ಕ್ಷೇತ್ರದ ಅಭಿವೃದ್ದಿ ಬಗ್ಗೆ ಚಿಂತನೆೆ ಇರುವ ವ್ಯಕ್ತಿ ಬಹಳ ಅವಶ್ಯ. ಅಂತಹ ಹುದ್ದೆಗಳಿಗೆ ಅಧಿಕಾರಕ್ಕೆ ಬರುವ ವ್ಯಕ್ತಿ ಉತ್ತಮವಾದ ಶಿಕ್ಷಣ ಅಥವಾ ರಾಜಕೀಯ ಬಗ್ಗೆ ತಿಳಿದುಕೊಂಡ ವ್ಯಕ್ತಿ ಇರಬೇಕು.
ಜನರ ಸಮಸ್ಯೆ ಬಗ್ಗೆ,ಕ್ಷೇತ್ರದ ಅಭಿವೃದ್ದಿ ಬಗ್ಗೆ ಕನಸು ಹೊತ್ತುಕೊಂಡ ಪ್ರಜ್ಞಾವಂತ ವ್ಯಕ್ತಿ ಇದ್ದರೆ ಸೂಕ್ತ. ಇದರಿಂದ ಸಮಗ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಆದರೆ 18 ವರ್ಷದ ಯುವಕನಿಂದ ಇದನ್ನು ನಿರೀಕ್ಷಿಸುವುದು ಕಷ್ಟ. ಹಾಗಾಗಿ ಚುನಾವಣೆ ನಿಲ್ಲಲು 18ನೇ ವಯಸ್ಸಿಗೆ ಇಳಿಸುವ ನಿರ್ಧಾರ ಸರಿಯಲ್ಲ. ಇದರ ಬಗ್ಗೆ ಬಹಳಷ್ಟು ಅಧ್ಯಯನ, ತಜ್ಞರ ಜತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.