Advertisement
ಮುಖ್ಯ ಅತಿಥಿಯಾಗಿದ್ದ ಆಸರೆ ಚಾರಿಟೆಬಲ್ ಟ್ರಸ್ಟ್ ಇದರ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ ಮಾತನಾಡಿ, ಮದ್ಯಪಾನದಂತಹ ದುಶ್ಚಟದಿಂದ ಕುಟುಂಬ ಬೀದಿಪಾಲಾಗುತ್ತದೆ. ಸಮಾಜದಲ್ಲಿ ಗೌರವವೂ ಇರುವುದಿಲ್ಲ. ಸಾಂಸಾರಿಕ ನೆಮ್ಮದಿ ಹಾಳಾಗಿ ಬದುಕು ನರಕಸದೃಶವಾಗುತ್ತದೆ. ಹೀಗಾಗಿ ಧರ್ಮಸ್ಥಳದ ಖಾವಂದರು ಸಮಾಜದ ಉದ್ಧಾರಕ್ಕಾಗಿ ಮದ್ಯವರ್ಜನದಂತಹ ಶಿಬಿರ ಹಮ್ಮಿಕೊಂಡು ಕುಟುಂಬವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಶಿಬಿರದಲ್ಲಿ ಪಾಲ್ಗೊಂಡವರು ನೂತನ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮದ್ಯವರ್ಜನದ ಶಿಬಿರಾರ್ಥಿಗಳಿಗೆ ಸಲಹೆ ಸೂಚನೆ ನೀಡಿ ಉತ್ತಮ ಬದುಕನ್ನು ನಡೆಸುವಂತೆ ಕರೆ ನೀಡಿದರು.
ಜನಜಾಗೃತಿ ವೇದಿಕೆ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಹಾಬಲ ಚೌಟ ಮಾತನಾಡಿ, ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖೀ ಕಾರ್ಯ ಕ್ರಮದಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಜನ ಪಾನಮುಕ್ತರಾಗಿ ಉತ್ತಮ ಬದುಕು ನಡೆಸುವಂತಾಗಿದೆ. ಈ ಮದ್ಯವರ್ಜನ ಶಿಬಿರದಲ್ಲಿ 59 ಮಂದಿ ಮದ್ಯಪಾನ ತ್ಯಜಿಸಿ ನೂತನ ಜೀವನಕ್ಕೆ ನಾಂದಿ ಹಾಡಿದ್ದೀರಿ. ಇಷ್ಟು ದಿನ ನಿಮ್ಮ ಕುಟುಂಬದಲ್ಲಿ ಇದ್ದ ನೋವು,ದುಃಖವನ್ನು ಅಳಿಸಿ ಹಾಕಿ, ಸುಖ ಸಂತೋಷದಿಂದ ಬಾಳಬೇಕು ಮಾತ್ರವಲ್ಲ, ಸಮಾಜಕ್ಕೆ ಕೊಡುಗೆ ನೀಡು ವಂತವರಾಗಬೇಕು ಎಂದರು. ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ರಾಮಚಂದ್ರ, ದೇವಾಂಗ ಸಮಾಜದ ಮುಖಂಡ ರಾಮಚಂದ್ರ, ದುಗೇìಶ್ ಚೆಟ್ಟಿಯಾರ್, ಕ್ಷೇತ್ರದ ಯೋಜನಾ ಧಿಕಾರಿ ಉಮರಬ್ಬ, ಕೆ. ಸದಾಶಿವ ಶೆಟ್ಟಿ, ಶ್ರೀಧರ ರಾವ್, ನಾಗರಾಜ್ ಉಪಸ್ಥಿತರಿದ್ದರು. ಲತಾ ನಿರೂಪಿಸಿದರು. ಶಿಬಿರಾರ್ಥಿ ಗಳಿಗೆ ಎಂಟು ದಿನಗಳ ಶಿಬಿರದಲ್ಲಿ ವ್ಯಾಯಾಮ, ಮಾರ್ಗದರ್ಶನ, ಕೌಟುಂಬಿಕ ಸಲಹೆ ಮತ್ತಿತರ ವಿವಿಧ ಹಂತದ ತರಬೇತಿ ನೀಡಲಾಯಿತು.