ಅಮೀನಗಡ: ಮದುವೆ ಉಡುಗೊರೆ ಹಣವನ್ನು ಗೋಶಾಲೆಗೆ ನೀಡಿ ಉದಾರತೆ ಮೆರೆದ ಅಪರೂಪದ ಘಟನೆ ಪಟ್ಟಣದಲ್ಲಿ ನಡೆದಿದೆ.
ಹೌದು, ಬಾಗಲಕೋಟೆಯ ಜಿಲ್ಲೆಯ ಅಮೀನಗಡ ಪಟ್ಟಣದ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಂಡಿ ಕುಟುಂಬದ ಮದುವೆ ಸಮಾರಂಭ ಈ ವಿಶೇಷ ಘಟನೆಗೆ ಸಾಕ್ಷಿಯಾಗಿದೆ.
ಪಟ್ಟಣದ ಪ್ರಸಿದ್ಧ ಸೀರೆ ವ್ಯಾಪಾರಸ್ಥ ಸಂಗಪ್ಪ ಈರಪ್ಪ ಬಂಡಿ ಅವರ ಮೊಮ್ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಮಣಿಕಂಠ ಅವರ ಮದುವೆಯಲ್ಲಿ ಮದುವೆಗೆ ಬಂದ ಬಂಧು ಮಿತ್ರರು ನೀಡಿದ 1 ಲಕ್ಷ 5176 ರೂ. ಉಡುಗೊರೆ ಹಣವನ್ನು ಸಂತ ಸೇವಾಲಾಲ ಗೋಶಾಲೆ, ನಾಗರಾಳ ತಾಂಡಾಗೆ ನೀಡುವುದರ ಮೂಲಕ ಉದಾರತೆ ಮೆರೆದಿದ್ದಾರೆ.
ಉಡುಗೊರೆ ಹಣವನ್ನು ಗೋಶಾಲೆ ನೀಡಿ ಮಾನವೀಯತೆ ಮೆರೆದ ಪ್ರಸಿದ್ದ ಸೀರೆ ವ್ಯಾಪಾರಸ್ಥ ಸಂಗಪ್ಪ ಈರಪ್ಪ ಬಂಡಿ ಕುಟುಂಬದ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಈ ವೇಳೆ ಗೋಶಾಲೆಯ ಪ್ರಮುಖರಾದ ರವಿ ಚವ್ಹಾಣ, ಡಾ.ಬಾಸೂರ, ಶಿವು ಮೇಲ್ನಾಡ, ಕೃಷ್ಣಾ ರಾಜೂರ, ಬಸವರಾಜ ಬಂಡಿ, ದಯಾನಂದ ಬಂಡಿ, ಪರಸು ಸೂಳೇಭಾವಿ ಪ್ರೇರಣಾದಾಯಿ ಕಾರ್ಯಕ್ಕೆ ಸಾಕ್ಷಿಯಾದರು