Advertisement

ಫ್ಯಾಮಿಲಿ “ಡಾಕ್ಟರ್‌’

07:35 PM Sep 10, 2019 | mahesh |

ಶೀತ, ಕೆಮ್ಮು, ಜ್ವರ, ಬಾಯಿಹುಣ್ಣು, ಹೊಟ್ಟೆನೋವು… ಇವು ನಮ್ಮನ್ನು ಕಾಡುವ ಅತೀ ಸಾಮಾನ್ಯ ಆರೋಗ್ಯ ಸಮಸ್ಯೆಗಳು. ಈ ಸಮಸ್ಯೆಗಳಿಗೆ ಪರಿಹಾರವೂ ಸರಳವೇ. ಅಡುಗೆಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ, ಹಲವು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು.

Advertisement

ಶೀತ , ನೆಗಡಿ
-ತುಳಸಿ ಎಲೆಯನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿದರೆ ಅಥವಾ ತುಳಸಿ ಎಲೆಯನ್ನು ತಿಂದರೆ ಶೀತ, ನೆಗಡಿ ಕಡಿಮೆ ಆಗುತ್ತದೆ.
-ಜೇನುತುಪ್ಪಕ್ಕೆ ಸ್ವಲ್ಪ ಶುಂಠಿ ರಸ ಮತ್ತು ಕರಿಮೆಣಸಿನ ಪುಡಿ ಹಾಕಿ ಕುಡಿಯಿರಿ.

ಅತಿಸಾರ
-ತುರಿದ ಸೇಬು ಹಣ್ಣನ್ನು ಹಾಲಿನಲ್ಲಿ ಬೆರೆಸಿ ಕುಡಿಯಿರಿ.
-ಕೆಂಪು ದಾಸವಾಳದ ತೊಟ್ಟನ್ನು ಕಲ್ಲು ಸಕ್ಕರೆ ಜೊತೆ ಸೇವಿಸಿ.

ಅಜೀರ್ಣ
-ದಾಳಿಂಬೆ ಹಣ್ಣಿನ ರಸ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.
-ಶುಂಠಿಯನ್ನು ನೀರಿನಲ್ಲಿ ಕುದಿಸಿ, ಜೇನುತುಪ್ಪ ಬೆರೆಸಿ ಸೇವಿಸಿ.

ಹೊಟ್ಟೆ ಹುಳ
-ಈರುಳ್ಳಿಯನ್ನು ಜಜ್ಜಿ 3-4 ಚಮಚ ರಸ ಸೇವಿಸಿ.
-2-3 ಚಮಚ ತುಳಸಿ ರಸಕ್ಕೆ 2 ಲವಂಗ ಸೇರಿಸಿ ಬೆಳಗಿನ ಜಾವ ಕುಡಿದರೆ ಜಂತುಹುಳುಗಳು ಸಾಯುತ್ತವೆ.

Advertisement

ವಾಂತಿ
-ಲಿಂಬೆರಸದಲ್ಲಿ ಸಕ್ಕರೆ ಕಲಸಿ ಆಗಾಗ್ಗೆ ಸ್ವಲ್ಪಸ್ವಲ್ಪವೇ ಕುಡಿಯಿರಿ.
-ಕೊತ್ತಂಬರಿಯನ್ನು ಪುಡಿ ಮಾಡಿ ನೀರಿನಲ್ಲಿ ನೆನೆಸಿ, ಸ್ವಲ್ಪ ಸಕ್ಕರೆ ಸೇರಿಸಿ ಕುಡಿಯಿರಿ.

ಮಲ ಬದ್ಧತೆ
-ಬೆಚ್ಚಗಿನ ನೀರಿಗೆ ಇಂಗು ಹಾಕಿ ಹೊಕ್ಕಳಿನ ಸುತ್ತ ಹಚ್ಚಿ ಮಸಾಜ್‌ ಮಾಡಿ.
-ಒಣ ದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ರಸದ ಜೊತೆ ಸೇವಿಸಿ.

ಚರ್ಮದ ತೊಂದರೆ
-ಕೊಬ್ಬರಿ ಅಥವಾ ಆಲಿವ್‌ಎಣ್ಣೆ ಹಚ್ಚಿ ಮಸಾಜ್‌ ಮಾಡಿದರೆ ಚರ್ಮವ್ಯಾಧಿಗಳಿಂದ ದೂರವಿರಬಹುದು.
-ಹಾಲಿಗೆ ಅರಿಶಿಣ ಹಾಕಿ ಕುಡಿದರೆ ಚರ್ಮದ ತೊಂದರೆಗಳು ಬರುವುದಿಲ್ಲ.

ತಲೆನೋವು
-ನೀರಿಗೆ ಶುಂಠಿ ಅಥವಾ ಶುಂಠಿ ಪೌಡರ್‌ ಹಾಕಿ ಕುದಿಸಿ, ಆ ಹಬೆಯನ್ನು ತೆಗೆದುಕೊಳ್ಳಬೇಕು.
– ಖಾಲಿ ಹೊಟ್ಟೆಯಲ್ಲಿ ಒಂದು ಸೇಬುಹಣ್ಣನ್ನು ಉಪ್ಪು ಸೇರಿಸಿ ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಒಂದು ವಾರ ಹೀಗೆ ಮಾಡಬೇಕು.

-ಡಾ. ಶ್ರೀಲತಾ ಪದ್ಯಾಣ, ಪ್ರಕೃತಿ ಚಿಕಿತ್ಸಾ ವೈದ್ಯೆ

Advertisement

Udayavani is now on Telegram. Click here to join our channel and stay updated with the latest news.

Next