Advertisement

ಸುಳ್ಳು ಅತ್ಯಾಚಾರ ಪ್ರಕರಣ; ಬಾಲಕಿ ಬಂಧನ

09:42 AM Nov 30, 2019 | Team Udayavani |

ಥಾಣೆ: ಅಪಹರಣಕ್ಕೀಡಾಗಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಸುಳ್ಳು ಕೇಸ್ ದಾಖಲಿಸಿದ ಬಾಲಕಿಯನ್ನು ಥಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Advertisement

ನವೆಂಬರ್ 18ರಂದು ಠಾಣೆ ಮೆಟ್ಟಿಲೇರಿದ ಬಾಲಕಿ, ʼನವೆಂಬರ್ 14ರಂದು ನನ್ನನ್ನು ಅಪಹರಣ ಮಾಡಲಾಗಿದೆ. ಬಳಿಕ 4 ಜನ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಪರಿಚಿತ ಪುರುಷರು ಈ ಕೃತ್ಯ ನಡೆಸಿದ್ದಾರೆ’ ಎಂದು ಆರೋಪಿಸಿದ್ದರು. ಘಟನೆ ನಡೆದ 4 ದಿನಗಳ ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.

ಬಾಲಕಿ ನೀಡಿದ ದೂರು ಮತ್ತು ಅವಳು ವಿಚಾರಣೆ ವೇಳೆ ನೀಡುತ್ತಿದ್ದ ಉತ್ತರಗಳು ಸರಿಯಾಗಿ ಹೋಲಿಕೆಯಾಗದೇ ಇರುವುದನ್ನು ಕಂಡು ಪೊಲೀಸ್ ಅಧಿಕಾರಿಗಳು ವಿಚಾರಣೆಯನ್ನು ಬಿಗಿಗೊಳಿಸಿದ್ದರು. ಘಟನೆ ನಡೆದಿದೆ ಎಂದು ಹೇಳಲಾದ ಜಾಗದಲ್ಲಿ ತೀವ್ರ ತನಿಖೆ ಒಳಪಡಿಸಾಗಿತ್ತು. ಬಳಿಕ ಅಲ್ಲಿನ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಲಾಗಿತ್ತು. ದೂರಿನಂತೆ ದಾಖಲಾದ ಅಪಹರಣ ಮತ್ತು ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳು ದೊರೆಯದೇ ಇದ್ದ ಕಾರಣ ಬಾಲಕಿಯ ಮೇಲೆ ಅನುಮಾನ ಮೂಡಿಬಂದಿದೆ.

ಘಟನೆಯನ್ನು ಬಾಲಕಿ ಚಿತ್ರಿಸುತ್ತಿದ್ದ ರೀತಿ ಮತ್ತು ದಾಖಲಾದ ಪ್ರಕರಣಗಳು ಹೊಂದಾಣಿಕೆಯಾಗದೇ ಇದ್ದ ಕಾರಣ ಪೊಲೀಸರು ಸುಳ್ಳು ಆರೋಪದಡಿಯಲ್ಲಿ ಬಾಲಕಿಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಬಾಯಿಬಿಟ್ಟಿರುವ ಬಾಲಕಿ “ನಾನು ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಬಂದಿದ್ದೆ, ಮತ್ತೆ ವಾಪಾಸು ಹೋಗಲು ಯಾವುದೇ ಕಾರಣ ಇರದ ಹಿನ್ನೆಲೆಯಲ್ಲಿ ಈ ರೀತಿ ಮಾಡಬೇಕಾಯಿತು’ ಎಂದಿದ್ದಾರೆ. ಈಗ ಸುಳ್ಳು ಆರೋಪದಡಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next