ಮೇಯರ್ ಅಧ್ಯಕ್ಷತೆಯಲ್ಲಿ ಐವರು ಅಧಿಕಾರಿ, ಐವರು ಪಾಲಿಕೆ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ತುರ್ತು ಸಾಮಾನ್ಯ ಸಭೆ ನಿರ್ಧರಿಸಿದೆ.
Advertisement
ಸಭೆ ಆರಂಭದಲ್ಲಿಯೇ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಸದಸ್ಯ ಎಂ. ಹಾಲೇಶ್, ಪೌರ ಕಾರ್ಮಿಕರಿಗೆ ಆದ ಅನ್ಯಾಯದ ಕುರಿತು ಪ್ರಸ್ತಾಪಿಸಿದರು. ಪಾಲಿಕೆ ಆಯುಕ್ತರನ್ನು ಪ್ರಶ್ನಿಸಿದ ಅವರು, ಇವರಿಗೆ ಅನ್ಯಾಯ ಆಗಿದ್ದು ಯಾರಿಂದ ಎಂಬುದನ್ನು ಪತ್ತೆಮಾಡಿ. ಅವರಿಗೆ ಶಿಕ್ಷೆ ಆಗಬೇಕು. ಇವರಿಗೆ ನ್ಯಾಯ ಸಿಗಬೇಕು ಎಂದರು. ಆಯುಕ್ತ ಬಿ.ಎಚ್. ನಾರಾಯಣಪ್ಪ, 2016ರಲ್ಲಿ ಸರ್ಕಾರ ಆದೇಶಿದಂತೆ ಗುತ್ತಿಗೆ ಪೌರ ಕಾರ್ಮಿಕರ ಖಾಯಮಾತಿಗೆ ಕ್ರಮ ವಹಿಸಲಾಗಿದೆ. ಅದರಂತೆ 270 ಜನರ ಪಟ್ಟಿ ಕಳುಹಿಸಲಾಗಿದೆ. ಇವರು ಆ ಪಟ್ಟಿಯಲ್ಲಿ ಇಲ್ಲದೇ ಇರುವುದು ತಿಳಿದಿಲ್ಲ ಎಂದರು. ಆಗ ಗರಂ ಆದ ಹಾಲೇಶ್, ಸಿಪಿಐ ಸದಸ್ಯ ಎಚ್.ಜಿ. ಉಮೇಶ್, ಇಎಸ್‌ಐ, ಪಿಎಫ್ ಕಟ್ಟಿದ ದಾಖಲೆ ಇವೆ. ಅದರ ಆಧಾರ ನೋಡಿ ಎಂದರು.
ಕಣೀ¡ರಿಡುತ್ತಲೇ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ತಮ್ಮ ಚಿಕ್ಕ ಮಕ್ಕಳೊಂದಿಗೆ ಎದುರು ನೋಡುತ್ತಿದ್ದರು. ಕೊನೆಗೆ ಮೇಯರ್ ನೋಡ್ರಮ್ಮ ಎಂದಾಗ ಎಲ್ಲರೂ ಒಮ್ಮೆಲೇ ದಿಢೀರ್ ಕುರ್ಚಿಯಿಂದ ಎದ್ದು, ಕಾತುರದಿಂದ ಅವರ ಮಾತು ಕೇಳಿದ್ದು ಅವರ ಅಮಾಯಕತೆಗೆ ಕನ್ನಡಿ ಹಿಡಿದಂತಿತ್ತು.