ನಿರ್ಮಿಸಿರುವ ಬಲಾಡ್ಯರ ಮೇಲೆ ಪೌರುಷ ತೋರಿಸಲಾಗದ ಅರಣ್ಯ ಇಲಾಖೆ ಅಧಿಕಾರಿಗಳು, ಬಡ ರೈತರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿ, ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷಕೆ.ನಾರಾಯಣಗೌಡ ಆರೋಪಿಸಿದರು.
Advertisement
ತಾಲೂಕು ಕಚೇರಿ ಮುಂಭಾಗ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ,ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ವಿರುದ್ಧ ಇತ್ತೀಚಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯದ ಮೂಲಕ ಬಡ ರೈತರ ಮೇಲೆ ಕೇಸುಗಳನ್ನು ದಾಖಲಿಸಿ, ಅನಗತ್ಯವಾಗಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು.
ಶ್ರೀನಿವಾಸಪುರ ತಾಲೂಕಿನ ಉಪ್ಪರಪಲ್ಲಿ ದಲಿತ ರೈತ ವೆಂಕಟಸ್ವಾಮಿ ಅವರು ಸರ್ಕಾರಿ ಗೋಮಾಳ ಸರ್ವೆ ನಂ.35ರಲ್ಲಿ ಜಮೀನು ಹೊಂದಿ ಅದಕ್ಕೆ ದಾಖಲೆ ಪಡೆದಿದ್ದಾರೆ. ಇದರಲ್ಲಿ ರಾಗಿ ಬಿತ್ತನೆ ಮಾಡುತ್ತಿರುವಾಗ, ಅರಣ್ಯ ಇಲಾಖೆಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ, ವೆಂಕಟ ಸ್ವಾಮಿ ಮತ್ತು ಅವರ ಮಗನನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ:ರಾಜ್ಯದ ಜೀವನದಿ ಕೃಷ್ಣೆ ಮಕ್ಕಳಿಗೆ ವಚನ ಕೊಡುವರೆ ಬೊಮ್ಮಾಯಿ?
Related Articles
Advertisement
ತೊಂದರೆ ನೀಡಿದರೆ ಕಚೇರಿಗೆ ಮುತ್ತಿಗೆ:ರೈತರಿಗೆ ತೊಂದರೆ ನೀಡುತ್ತಿದ್ದರೆ ಸಾವಿರಾರು ಟ್ರ್ಯಾಕ್ಟರ್‌ಗಳ ಸಮೇತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗು
ವುದು. ಅಲ್ಲದೆ, ಉಪ್ಪರಪಲ್ಲಿಯ ರೈತ ವೆಂಕಟಸ್ವಾಮಿ ಮೇಲೆ ಹಲ್ಲೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡುನೊಂದ ರೈತ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಉಪ ತಹಶೀಲ್ದಾರ್ ಕಿರಣ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಕಲ್ಲೂರು ವೆಂಕಟ್, ಷಫಿ, ಆಲವಾಟ ಶಿವಕುಮಾರ್, ವಿಜಯಕುಮಾರ್, ರಾಯಲ್ಪಾಡು ಹರೀಶ್ ಹಾಜರಿದ್ದರು.