Advertisement

ಸುಳ್ಳು, ದ್ವೇಷದ ಬೋಧನೆ

06:00 AM Apr 04, 2018 | |

ಶಿವಮೊಗ್ಗ: “”ಪ್ರಧಾನಿ ನರೇಂದ್ರ ಮೋದಿ ಯವರಿಗೆ ಆರ್‌ಎಸ್‌ಎಸ್‌ ಸುಳ್ಳು ಹೇಳುವುದು ಮತ್ತು ದ್ವೇಷಿಸುವುದನ್ನು ಮಾತ್ರ ಹೇಳಿಕೊಟ್ಟಿದೆ” ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತುಸು ಖಾರವಾಗಿ ಹೇಳಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಜನಾಶೀರ್ವಾದ ಯಾತ್ರೆ ಅಂಗವಾಗಿ ನಡೆದ ರೋಡ್‌ ಶೋ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದರು. “”ಇತಿಹಾಸವನ್ನು ಗಮನಿಸಿದಾಗ ದೇಶದಲ್ಲಿ ದ್ವೇಷ ಬಿತ್ತುವವರನ್ನು ಜನರು ನಾಶ ಮಾಡಿದ್ದಾರೆ. ದೇಶದ ಏಕತೆ ಕಾಪಾಡಿಕೊಂಡು ಹೋದಾಗ ಮಾತ್ರ ಸದೃಢ ಭಾರತ ಕಟ್ಟಲು ಸಾಧ್ಯ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ನರಸಿಂಹ ರಾವ್‌, ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಈ ದೇಶವನ್ನು ನೋಡಿ ದ್ದೇವೆ. ಪ್ರೀತಿ, ಕರುಣೆ, ವಿಶ್ವಾಸದಿಂದ ಅಧಿಕಾರ ನಡೆಸಬೇಕು. ದ್ವೇಷ, ಸೇಡಿನ ರಾಜಕಾರಣ ಮಾಡ ಬಾರದು” ಎಂದು ಪರೋಕ್ಷವಾಗಿ ಮೋದಿ ಯವರನ್ನು ಟೀಕಿಸಿದರು.

“”ಅಧಿಕಾರಕ್ಕೆ ಬಂದ ಅನಂತರ ಮೋದಿ ಸುಳ್ಳು ಹೇಳಿದ್ದೇ ಹೆಚ್ಚು. ಕಳೆದ 4 ವರ್ಷಗಳಲ್ಲಿ ಅವರು ನೀಡಿದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಮಾಡುವು ದಾಗಿ ವಾಗ್ಧಾನ ಮಾಡಿದ್ದರು. ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಅಲ್ಲದೇ ಬೆಳೆಗಳಿಗೆ ಯೋಗ್ಯ ಧಾರಣೆ ನೀಡುವುದಾಗಿ, ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ತಲಾ 15 ಲಕ್ಷ ರೂ. ಜಮಾ ಮಾಡುತ್ತೇವೆ ಎಂದಿದ್ದರು. ಆದರೆ ಕೊಟ್ಟ ಮಾತನ್ನು ಈ ತನಕ ಈಡೇರಿಸಿಲ್ಲ” ಎಂದರು.

“”ಮೋದಿ ಅವರು ತಮ್ಮ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಇಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್‌ ಸರಕಾರ ಭ್ರಷ್ಟ ಎಂದು ಟೀಕಿಸುತ್ತಾರೆ. ಈ ಆರೋಪ ಹೊರಿಸುವ ಮೊದಲು ತಮ್ಮ ಅಕ್ಕಪಕ್ಕದಲ್ಲಿ ಯಾರಿದ್ದಾರೆ ಎಂಬುದನ್ನು ಅವರು ಗಮನಿಸಲಿ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಇನ್ನಿತರ ಬಿಜೆಪಿ ಮುಖಂಡರನ್ನು ಕಣ್ಣೆತ್ತಿ ನೋಡಲಿ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next