Advertisement
ಸೋಮವಾರ ಉಡುಪಿ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ವಿವಿ ಪ್ಯಾಟ್ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.
ಮತಯಂತ್ರಗಳು ಶೇ. 100 ಸರಿ ಇದೆ ಎಂದು ಖಾತರಿಯಾದ ಅನಂತರವೇ ಅಳವಡಿಸ ಲಾಗುತ್ತದೆ. ಮತದಾನದ ಅನಂತರ ವಿವಿ ಪ್ಯಾಟ್ ಯಂತ್ರದಲ್ಲಿ ತನ್ನ ಮತ ತಪ್ಪಾಗಿ ಚಲಾವಣೆ ಯಾಗಿದೆ ಎಂದು ಯಾರಾದರೂ ಆಕ್ಷೇಪಿಸಿದರೆ ಅಂತಹ ವ್ಯಕ್ತಿಯಿಂದ ಡಿಕ್ಲರೇಷನ್ ಪಡೆದು ಮತ್ತೂಮ್ಮೆ ಮತದಾನ (ಟೆಸ್ಟ್ ವೋಟ್) ಮಾಡಿಸಲಾಗುವುದು. ಆರೋಪ ಸುಳ್ಳಾಗಿದ್ದಲ್ಲಿ ದೂರುದಾರರನ್ನು ಡಿಕ್ಲರೇಷನ್ ಪ್ರಕಾರ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಡಿಸಿ ಹೇಳಿದರು.
Related Articles
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕ ಮಾತನಾಡಿ, ಉಡುಪಿ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿ ರಾಜ್ಯದಲ್ಲಿಯೇ ಮುಂಚೂಣಿ ಯಲ್ಲಿದೆ. ಈ ಬಾರಿ ಮತದಾನ ಪ್ರಮಾಣದಲ್ಲೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು. ಈ ನಿಟ್ಟಿನಲ್ಲಿ ಮೇ 12ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು ಹಾಗೂ ಇತರರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
Advertisement
ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ, ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ., ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ಟರ್ ಟ್ರೈನರ್ ಪ್ರಕಾಶ್ ಅವರು ಯಂತ್ರಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.