ನಿನ್ನ ಕೈ ಸ್ಪರ್ಶದಿಂದ ಹೆಚ್ಚಾದ ನನ್ನ ಮೈಬಿಸಿಗೆ ನೀ ಬಿಡಿಸಿದ ಮದರಂಗಿಯ ಚೆಂದದ ಚಿತ್ತಾರ ಕ್ಷಣ ಮಾತ್ರದಲ್ಲಿ ರಂಗು ಪಡೆದಿತ್ತು. ಬೆಳಗಾಗೆದ್ದು ಎಲ್ಲರಿಗೂ ಮದುವೆಯ ಸಂಭ್ರಮವಾದರೆ ನನಗೆ ವಿಪರೀತ ಪ್ರೇಮಜ್ವರ…
ಆವತ್ತು ಗೆಳೆಯನ ಮದುವೆಯ ಮುನ್ನಾದಿನದ ರಾತ್ರಿ. ಒಂದೆಡೆ ವರನ ಕಡೆಯವರು, ಮತ್ತೂಂದೆಡೆ ವಧುವಿನ ಕಡೆಯ ಹೆಂಗಳೆಯರೆಲ್ಲ ತಮ್ಮ ಕೈಗಳಿಗೆ ಮೆಹಂದಿ ಹಾಕಿಸಿಕೊಳ್ಳುತ್ತಿದ್ದರು. ವಧುವಿನ ಪಕ್ಕ ಕುಳಿತು ಮೆಹಂದಿಯ ಚಿತ್ತಾರ ಬಿಡಿಸುತ್ತಿದ್ದ ಹುಡುಗಿಯೇ, ನಿನಗೆ ನೆನಪಿದೆಯೇ? ನಿನ್ನ ಕನ್ನಡಕದೊಳಗಿನ ಕಣ್ಣು ನನ್ನನ್ನು ಕೆಣಕಿದ್ದು? ನಿನ್ನ ತುಂಟ ನಗು ನನ್ನ ತಲೆ ಕೆಡಿಸಿದ್ದು? ಅಷ್ಟೆಲ್ಲ ಹುಡುಗರ ಮಧ್ಯೆ ನನ್ನನ್ನೇ ಟಾರ್ಗೆಟ್ ಮಾಡಿ ಹುಬ್ಬು ಹಾರಿಸಿ ನಿನಗೂ ಮೆಹಂದಿ ಹಾಕಲೇ ಎನ್ನುವಂತೆ ನೀನು ಸನ್ನೆ ಮಾಡಿದ್ದು? ಆ ಕ್ಷಣ ನಾನು ವಿಚಲಿತನಾಗಿಬಿಟ್ಟೆ. ಏನು ನಡೆಯುತ್ತಿದೆ ಇಲ್ಲಿ ಎಂದು ಕಕ್ಕಾಬಿಕ್ಕಿಯಾಗಿ ಆ ಕಡೆ ಈ ಕಡೆ ನಾ ನೋಡುತ್ತಿದ್ದೆ!
ಇದನ್ನು ಸೂಕ್ಷ್ಮವಾಗಿ ಗಮನಿಸಿದ ವರಮಹಾಶಯ, ಕಣ್ಣÇÉೇ ಅಪ್ಪಣೆ ಕೊಟ್ಟಿದ್ದೇ ತಡ, ಸಿಕ್ಕಿದ್ದೇ ಚಾನ್ಸು ಅಂತ ನಿನ್ನ ಮುಂದೆ ಪ್ರೇಮಭಿಕ್ಷೆ ಬೇಡುವಂತೆ ಕೈ ಚಾಚಿದೆ. ನೀನು ಮೆಹಂದಿ ಹಾಕುತ್ತ ಆಗಾಗ ನನ್ನ ಕಣ್ಣ ಚಲನವಲನ ಗಮನಿಸುತ್ತಿ¨ªೆಯಲ್ಲ; ಆಗ ನಿನ್ನ ಕಣ್ಣೋಟದ ಕೊಲೆಯ ಸಂಚಿಗೆ ನಾನು ಬಲಿಯಾಗುತ್ತಿ¨ªೆ. ನೀನು ಮುಟ್ಟಿದಾಗಲೆಲ್ಲಾ ಎದೆಬಡಿತ ವೇಗ ಪಡೆದುಕೊಳ್ಳುತ್ತಿತ್ತು. ನಿನ್ನ ಕೈ ಸ್ಪರ್ಶದಿಂದ ಹೆಚ್ಚಾದ ನನ್ನ ಮೈಬಿಸಿಗೆ ನೀ ಬಿಡಿಸಿದ ಮದರಂಗಿಯ ಚೆಂದದ ಚಿತ್ತಾರ ಕ್ಷಣ ಮಾತ್ರದಲ್ಲಿ ರಂಗು ಪಡೆದಿತ್ತು. ರಾತ್ರಿಯೂ ಬೆಳದಿಂಗಳಲ್ಲೂ ನೀನೇ ಓಡಾಡಿದ ಹಾಗೆ ಅನ್ನಿಸುತ್ತಿತ್ತು. ಬೆಳಗಾಗೆದ್ದು ಎಲ್ಲರಿಗೂ ಮದುವೆಯ ಸಂಭ್ರಮವಾದರೆ ನನಗೆ ವಿಪರೀತ ಪ್ರೇಮಜ್ವರ. ಮೊದಲ ಬಾರಿ ಹುಡುಗಿಯೊಬ್ಬಳಿಗೆ ಅರಿವಿಲ್ಲದೇ ಬಲಿಯಾಗಿ¨ªೆ. ಮದುವೆಯ ಇಡೀ ದಿನ ನಿನ್ನ ಸುತ್ತಲೇ ಸುತ್ತಿ¨ªೆ.
ಅಂದು ಸಂಜೆ ಮದುವೆಯ ಕಾರ್ಯಗಳೆಲ್ಲ ಮುಗಿದು ನಿಮ್ಮ ಕಡೆಯ ಎಲ್ಲರೂ ಹೊರಟು ನಿಂತಾಗ ಎದೆಬಡಿತವೇ ನಿಂತ ಅನುಭವ. ಆಗಲೇ ವಧು ನನ್ನ ಹತ್ತಿರ ಬಂದು, “ಗಡಿಬಿಡಿಯಲ್ಲಿ ನಿನ್ನೆ ಇವಳನ್ನು ಪರಿಚಯ ಮಾಡೋಕೆ ಆಗಲಿಲ್ಲ. ಇವ್ಳು ನನ್ನ ತಂಗಿ, ಬಿಇ ಓದಿ¤¨ªಾಳೆ. ಹುಡುಗರಿಗೆ ಹಲ್ಲು ಕಿರಿದು ಮರಳು ಮಾಡಿ ಮಜಾ ಮಾಡೋದು ಇವಳ ಖಯಾಲಿ. ಈಗಾಗ್ಲೆà 23 ಜನಾನ ಬಕ್ರಾ ಮಾಡಿ¨ªಾಳೆ’ ಎಂದು ನಕ್ಕಾಗ ನಾನು ನನ್ನ 24 ಗಂಟೆಯ ಕನಸಿನ ಪ್ರೇಮ ಪಯಣಕ್ಕೆ, ಹೊಸ ಬಗೆಯ ಖುಷಿಯ ಅನುಭವಕ್ಕೆ ಸ್ವಲ್ಪ$ಮಟ್ಟಿನ ಬ್ರೇಕ್ ಹಾಕಿ¨ªೆ. ಆಗ ನನ್ನ ಮುಖದÇÉಾದ ನಿರಾಸೆಯ ಭಾವವನ್ನು ಕಂಡು ನಕ್ಕು ಕೊನೆಗೆ ಸಾರಿ ಕೇಳಿದ ನೀನು ನನಗೆ ಇನ್ನಿಲ್ಲದಂತೆ ಹಿಡಿಸಿಬಿಟ್ಟೆ.
ಆ ಒಂದು ದಿನದ ಗೆಳತಿಯೇ, ಈ ಮಾತನ್ನು ದಯವಿಟ್ಟು ಕೇಳು: ಅಂದಿನ ನನ್ನ ನಿನ್ನ ಒಡನಾಟ ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ಈಗಲೂ ಆಗಾಗ ಆ ದಿನದ ಸವಿನೆನಪುಗಳನ್ನು ಮೆಲುಕು ಹಾಕುತ್ತಿರುತ್ತೇನೆ. ಮೊದಲೇ ನಿರ್ಧರಿಸಿದಂತೆ ನಿನ್ನ ಬಕರಾ ಮಾಡುವ ಕಲೆಗೆ ನಾ ಬಲಿಯಾಗಿದ್ದರೂ ಅದರಲ್ಲೂ ಒಂಥರಾ ಖುಷಿ ಅನುಭವಿಸಿದವ ನಾನು. ಬಹುಶಃ ನಿನ್ನ ಬಲೆಗೆ ಬಿದ್ದ ಬಕ್ರಾಗಳ ಸಂಖ್ಯೆ ಈಗ ನೂರರ ಗಡಿ ದಾಟಿರಲೂಬಹುದು. ಪ್ರೀತಿಯ ನಾಟಕವಾಡಿ ಮೋಸ ಮಾಡಿ ಹುಡುಗರ ಬದುಕನ್ನು ಬರಡು ಮಾಡುವ ಕೆಲ ಹುಡುಗಿಯರಿಗಿಂತ ನಿನ್ನ ತುಂಟತನ ನಿಜವಾಗಿಯೂ ನನ್ನನ್ನು ಆಕರ್ಷಿಸಿದೆ. ಸದಾ ನಗುತ್ತಾ ಸುತ್ತಲಿನವರನ್ನೂ ನಗಿಸುವ ನಿನ್ನ ಗುಣಕ್ಕೆ ಮನಸೋತಿದ್ದೇನೆ. ನೀನು ಒಪ್ಪಿದರೆ, ನಿತ್ಯವೂ ನಿನ್ನ ಬಲೆಗೆ ಬಿದ್ದು ನಿನ್ನ ಖುಷಿಗೆ ಕಾರಣವಾಗಲು ಈಗಲೂ ಕಾಯುತ್ತಿರುವ ನಿನ್ನ ಪಾಲಿನ ಮಿ.ಬಕ್ರಾ.
– ಅಶೋಕ ವಿ. ಬಳ್ಳಾ