Advertisement

ಮಳೆಗೆ ಕುಸಿದ ಮನೆ ಗೋಡೆ, ಛಾವಣಿ

02:50 PM Oct 18, 2019 | Suhan S |

ಹನೂರು: ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದಿರುವ ಘಟನೆ ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ.

Advertisement

ಮಂಗಲ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಬುಧವಾರ ಸಂಜೆ 4 ರಿಂದಲೇ ಮೋಡ ಕವಿದ ವಾತಾವರಣವಿದ್ದು ತಡರಾತ್ರಿ ಉತ್ತಮ ಮಳೆಯಾಗಿದೆ. ಅಲ್ಲದೆ ಕಳೆದ 2-3 ದಿನಗಳಿಂದಲೂ ಮಳೆಯಾಗಿದ್ದರಿಂದ ಮಂಗಲ ಗ್ರಾಮದ ಸಿದ್ದಮ್ಮ ಎಂಬುವರ ಮನೆಯ ಗೋಡೆ ತೇವಾಂಶದಿಂದ ಕೂಡಿತ್ತು.

ಪರಿಣಾಮ ಮನೆ ಗೋಡೆ ಮೇಲ್ಛಾವಣಿ ಕುಸಿದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿ ಸಿಲ್ಲ. ಆದರೆ ದಿನ ಬಳಕೆಗೆ ವಸ್ತುಗಳು ಹಾನಿಗೊಳಗಾಗಿದ್ದು, ನಷ್ಟ ಉಂಟಾಗಿದೆ.

ಸೂಕ್ತ ಪರಿಹಾರಕ್ಕೆ ಒತ್ತಾಯ: ನಾವು ತುಂಬಾ ಬಡವರಾಗಿದ್ದು, ಕೂಲಿ ಮಾಡಿ ಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ಮಳೆಯ ಪರಿಣಾಮ ಮನೆ ಗೋಡೆ ಕುಸಿದಿದ್ದು, ವಾಸಕ್ಕೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಸಿದ್ದಮ್ಮ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next