Advertisement

ಸೂಪರ್ ಸಿಎಂರಿಂದ ಮೈತ್ರಿ ಸರ್ಕಾರ ಪತನ : ಎಚ್.ಡಿ.ರೇವಣ್ಣ ವಿರುದ್ದ ಎಸ್.ಎಂ.ಕೃಷ್ಣ ಕಿಡಿ

09:49 AM Nov 28, 2019 | sudhir |

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸೂಪರ್ ಸಿಎಂರಿಂದ ಕಾಂಗ್ರೆಸ್, ಜೆಡಿಎಸ್ ಅಧಿಕಾರ ಕಳೆದುಕೊಂಡಿತು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಟೀಕಿಸಿದರು.

Advertisement

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದ ಎಸ್. ಎಂ ಕೃಷ್ಣ,

ಕಾಂಗ್ರೆಸ್, ಜೆಡಿಎಸ್ ಎರಡು ಪಕ್ಷಗಳು ಅಧಿಕಾರಕ್ಕಾಗಿ ರಾತ್ರೋರಾತ್ರಿ ಮೈತ್ರಿ ಮಾಡಿಕೊಂಡರು. ಆದರೆ ಅವರ ಮಂತ್ರಿ ಮಂಡಲದಲ್ಲಿದ್ದ ಸಿಎಂ ಒಬ್ಬರು, ಸೂಪರ್ ಸಿಎಂ ಆಡಳಿತದಿಂದ ರಾಜ್ಯ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.

ಅವರಿಗೆ ತಮ್ಮ ಮಂತ್ರಿ ಮಂಡಲ ಉಳಿಸಿಕೊಳ್ಳುಲು ಕಾಲ ಸಿಕ್ಕಿದ್ದು ಬಿಟ್ಟರೆ ರಾಜ್ಯದ ಅಭಿವೃದ್ಧಿ ಕಾಣಲಿಲ್ಲ ಎಂದರು.

17 ಮಂದಿ ಬುದ್ದಿವಂತ ಶಾಸಕರು ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಅಗಿದೆ ಎಂದರು.

Advertisement

ಸರ್ಕಾರ ಉರುಳಿಸಿದ್ದೇ ನಾನು

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸುವಲ್ಲಿ ನಾನೇ ಪ್ರಮುಖ ಪಾತ್ರ ವಹಿಸಿದೆ ಎಂದರು. ಇದಕ್ಕೆ ಎಸ್.ಎಂ.ಕೃಷ್ಣ ಮಾತನಾಡಿ ಸುಧಾಕರ್ ರಾಜಕೀಯವಾಗಿ ಬೆಳೆಯಲು ನಾನು ಹೆಚ್ಚು ಪ್ರೋತ್ಸಾಹ ಕೊಟ್ಟೆ ಎನ್ನುವ ಮೂಲಕ ಸುಧಾಕರ್ ರಾಜೀನಾಮೆಗೆ ನಾನೇ ಪ್ರೇರಣೆ ಎಂಬಂತೆ ಮಾತನಾಡಿದರು.

ಮುಂದಿನ ಹಾದಿ ಸುಗಮವಾಗಿಲ್ಲ..

ಬಿಜೆಪಿ ಸರ್ಕಾರಕ್ಕೆ ಮುಂದಿನ ಹಾದಿ ಸುಗಮವಾಗಿಲ್ಲ. ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದರು. ಸಚಿವರಿಗೆ ಹೆಚ್ವಿನ ಬಲ ತುಂಬಬೇಕಿದೆ. ಸರ್ಕಾರಕ್ಕೆ ದೊಡ್ಡ ಹೊಣೆಗಾರಿಕೆ ಇದೆ. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಉತ್ತುಂಗಕ್ಕೆ ಹೋಗಲಿದೆ ಎಂದರು.

ಪ್ರಚಾರ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಸಚಿವ ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್‌, ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next