Advertisement

Udupi ಡಿಸಿ ಹೆಸರಲ್ಲಿ ನಕಲಿ ವಾಟ್ಸ್‌ ಆ್ಯಪ್‌ ಖಾತೆ

08:22 PM Nov 21, 2023 | Team Udayavani |

ಉಡುಪಿ: ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಹೆಸರಿನಲ್ಲಿ ನಕಲಿ ವಾಟ್ಸ್‌ ಆ್ಯಪ್‌ ಖಾತೆ ಸೃಷ್ಟಿಸಿ ಹಣಕ್ಕಾಗಿ ಸಂದೇಶ ಕಳುಹಿಸುತ್ತಿರುವ ಕುರಿತು ಜಿಲ್ಲಾಧಿಕಾರಿಗಳು ಉಡುಪಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಈ ಕುರಿತು ತಮ್ಮ ಅಧಿಕೃತ ಫೇಸ್‌ ಬುಕ್‌ ಖಾತೆಯಲ್ಲಿ ಜಿಲ್ಲಾಧಿಕಾರಿ ಬರೆದುಕೊಂಡಿದ್ದು ಜಾಲತಾಣಗಳನ್ನು ಬಳಸಿಕೊಂಡು, ನಕಲಿ ಖಾತೆಗಳನ್ನು ಸೃಜಿಸಿ ಹಣ ಕೇಳುತ್ತಿರುವ ಘಟನೆಗಳು ನಡೆಯುತ್ತಿವೆ. Dr K VidyaKumari IAS,DC ಎಂದು Whatsapp ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಸಂದೇಶಗಳನ್ನು ಕಳುಹಿಸುತ್ತಿರುವುದು ಹಾಗೂ ಹಣ ಕೇಳುತ್ತಿರುವ ವಿಚಾರವು ಗಮನಕ್ಕೆ ಬಂದಿರುತ್ತದೆ.

ಈ ಬಗ್ಗೆ ಎಚ್ಚರದಿಂದ ಇರುವಂತೆ ತಿಳಿಸಿರುವ ಅವರು ತತ್‌ಕ್ಷಣ ಅಗತ್ಯ ಮಾಹಿತಿಯೊಂದಿಗೆ ಸ್ಥಳೀಯ ಠಾಣಾಧಿಕಾರಿಯವರಿಗೆ ದೂರು ನೀಡುವಂತೆ ಕೋರಿದ್ದಾರೆ.

ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು “ದುಷ್ಕರ್ಮಿಗಳು ತನ್ನ ಹೆಸರನ್ನು ಬಳಸಿದ್ದು, ಆದರೆ ಅದರಲ್ಲಿ ಇರುವ ಮೊಬೈಲ್‌ ಸಂಖ್ಯೆ ನನ್ನದಲ್ಲ. ಅದೇ ರೀತಿ ನನ್ನ ಖಾತೆಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಫೋಟೋವನ್ನು ಬಳಸಿಕೊಳ್ಳಲಾಗಿದೆ. ದುಷ್ಕರ್ಮಿಗಳು ಹಣ ಕಳುಹಿಸುವಂತೆ ಕೆಲವು ತಹಶೀಲ್ದಾರ್‌ಗಳಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next