Advertisement

ನಕಲಿ ವಾಟ್ಸಪ್‌ ಹಾವಳಿ

09:04 PM May 16, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ವೇಳೆ ವಾಟ್ಸಪ್‌ ಅಳವಡಿಸಿರುವ ಹಲವು ನಿರ್ಬಂಧಗಳಿಂದಾಗಿ ರಾಜಕೀಯ ನಾಯಕರು ಹಾಗೂ ಪ್ರಚಾರದ ಹೊಣೆ ಹೊತ್ತಿರುವವರು ಹಲವು ಅಡ್ಡ ದಾರಿ ಹಿಡಿದಿದ್ದಾರೆ ಎಂಬುದಾಗಿ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿ ಟರ್ಸ್‌ ಕಂಡುಕೊಂಡಿದೆ.

Advertisement

ವಾಟ್ಸಪ್‌ ಅನ್ನೇ ಹೋಲುವ ಹಲವು ನಕಲಿ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತಿದ್ದು, ಒಂದು ಸಾವಿರ ರೂಪಾಯಿಗೆಲ್ಲ ಇವು ಲಭ್ಯವಾಗು ತ್ತಿವೆ. ಇವುಗಳನ್ನು ಬಳಸಿ ಲಕ್ಷಗಟ್ಟಲೆ ಜನರಿಗೆ ಒಂದೇ ಬಾರಿಗೆ ಒಂದೇ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ದೊಡ್ಡ ದೊಡ್ಡ ವಿಡಿಯೋ ಫೈಲ್‌ಗ‌ಳನ್ನೂ ಇದರ ಮೂಲಕ ಕಳುಹಿಸಬಹುದಾಗಿದೆ.

ಕೆಲವು ತಂತ್ರಜ್ಞಾನ ಪರಿಣತರು ವಾಟ್ಸಪ್‌ನ ವೆಬ್‌ ಆವೃತ್ತಿ ಬಳಸಿಯೂ ಈ ರೀತಿ ಸಂದೇಶಗಳನ್ನು ಕಳುಹಿಸುತ್ತಾರೆ. ಇಂತಹ ಅಪ್ಲಿಕೇಶನ್‌ಗಳ ಬಳಕೆ ಕಂಡು ಬಂದರೆ ಅವರ ಸಂಖ್ಯೆಯನ್ನೇ ವಾಟ್ಸಪ್‌ ನಿರ್ಬಂಧಿಸುತ್ತದೆ. ಹಾಗೇನಾದರೂ ಮಾಡಿದರೆ, ಹೊಸ ಸಂಖ್ಯೆಯಿಂದ ಇವರು ಈ ಕೆಲ್ಸವನ್ನು ಮುಂದುವರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next