Advertisement

ಸ್ವಿಸ್‌ನಲ್ಲಿ ಭಾರತದ ನಕಲಿ ನೋಟುಗಳ ಹಾವಳಿ

11:20 AM May 15, 2017 | Karthik A |

ಹೊಸದಿಲ್ಲಿ: ಕಪ್ಪುಹಣ ಮತ್ತು ತೆರಿಗೆ ಕಳ್ಳರ ಪಾಲಿನ ಸ್ವರ್ಗ ಎಂದೇ ಕುಖ್ಯಾತಿ ಪಡೆದಿರುವ ಸ್ವಿಟ್ಸರ್ಲಂಡ್‌ನ‌ಲ್ಲಿ ಭಾರತದ ನಕಲಿ ನೋಟುಗಳ ಹಾವಳಿ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷದ ಅಂತ್ಯದಲ್ಲಿ ಕೇಂದ್ರ ಸರಕಾರ 1000 ಮತ್ತು 500ರ ಮುಖಬೆಲೆಯ ನೋಟುಗಳನ್ನು ಅಪಮೌಲ್ಯ ಮಾಡಿದ ಮೇಲೆ ಸ್ವಿಸ್‌ಗೆ ಹೋಗಿರುವ ನೋಟುಗಳ ಸಂಖ್ಯೆ ಹೆಚ್ಚಾಗಿವೆ ಎಂದು ಹೇಳಲಾಗಿದೆ. 2015ರಲ್ಲಿ 342 ಖೋಟಾನೋಟುಗಳು ಸಿಕ್ಕಿದ್ದವು. ಇದರಲ್ಲಿ 336 ಸಾವಿರ ಮುಖಬೆಲೆಯುಳ್ಳವು , ಐದು 500 ಮುಖಬೆಲೆ ಮತ್ತು ಒಂದು 100ರ ಮುಖಬೆಲೆಯ ನಕಲಿ ನೋಟುಗಳು ಸಿಕ್ಕಿದ್ದವು. ಆದರೆ 2016ರಲ್ಲಿ ಈ ನೋಟುಗಳ ಸಂಖ್ಯೆ 1437ಕ್ಕೆ ಏರಿಕೆಯಾಗಿದೆ. ಇದರಲ್ಲಿ 1000 ರೂ. ಮುಖಬೆಲೆಯ ನೋಟುಗಳೇ ಹೆಚ್ಚು. ಕೇವಲ ಐದು 500 ರೂ. ಮುಖಬೆಲೆಯ ನೋಟುಗಳು ಸಿಕ್ಕಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next