Advertisement
ಮಹಮ್ಮದ್ ಸಲ್ಮಾನ್.ಎಸ್‌ಗೆ ಇನ್ನು 26 ವರ್ಷ ಶಿವಮೊಗ್ಗ ತಾಲೂಕಿನ ಐನೋರ ಹೋಬಳಿ, ಅಬ್ಬಲುಗೆರೆ ಗ್ರಾಮದ ವಿನೋಭಾ ನಗರ ನಿವಾಸಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಲಕ್ಕೇನಹಳ್ಳಿ ಸೊಂಡೆಕೊಪ್ಪ ರಸ್ತೆಯ ಮನೆಯೊಂದರಲ್ಲಿ. ತಾನು ಆರ್.ಡಿ.ಪಿ.ಐ ಇಲಾಖೆಯ ಐಎಎಸ್ ಅಧಿಕಾರಿ ಅಂತ ಹೇಳಿಕೊಳ್ಳುತ್ತಿದ್ದ. ನೆಲಮಂಗಲದಲ್ಲಿ ಕರ್ನಾಟಕ ರಾಜ್ಯ ಸಮಗ್ರ ಜನಸ್ಪಂದನಾ ವೇದಿಕೆಯ ಕಚೇರಿ ಸ್ಥಾಪಿಸಿ ರಾಜ್ಯಾಧ್ಯಕ್ಷ ಅಂತ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ. ಜನರನ್ನು ನಂಬಿಸಲು ಕಾರಿಗೆ ಸರ್ಕಾರಿ ಇಲಾಖೆಯ ಬೋರ್ಡಿನಂತೆ ಕಾಣುವ ಹಸಿರು ಬಣ್ಣದ ವೇದಿಕೆಯ ಹೆಸರಿನ ಬೋರ್ಡು ಸಹ ಸಿಕ್ಕಿಸಿದ್ದ, ಕಾರಿಗೆ ರವಿಕುಮಾರ್ ಎಂಬ ವ್ಯಕ್ತಿಯನ್ನು ಚಾಲಕ ಕಂ ಗನ್‌ಮ್ಯಾನ್ ಆಗಿ ನೇಮಿಸಿ ಕೊಂಡಿದ್ದ.
Related Articles
Advertisement
ಹಣ ವಂಚಿಸುತ್ತಿದ್ದ: ತಾನು ಐಎಎಸ್ ಅಧಿಕಾರಿಗ ಎಂದು ಹೇಳಿಕೊಂಡು ಮಹಮ್ಮದ್ ಸಲ್ಮಾನ್ ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಚನ್ನಪಟ್ಟಣ, ಮಾಗಡಿ, ಗಂಗಾವತಿ ಹೀಗೆ ಹಲವಾರು ಕಡೆ ಸಂಚರಿಸಿ ಕೆಲಸ ಕೊಡಿಸುವುದಾಗಿ, ಸೈಟು ಕೊಡಿಸುವುದಾಗಿ ಹೇಳಿ ಹಣ ಪೀಕಿ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉರ್ದು ಶಾಲೆಗಳಿಗೆ ಭೇಟಿ ನೋಡಲು ಸುರದ್ರೂಪಿಯಾಗಿ ಸಲ್ಮಾನ್ ಧರಿಸುತ್ತಿದ್ದ ಸೂಟು ಬೂಟಿಗೆ ಮರಳಾದವರೇ ಇಲ್ಲ. ಆರ್ .ಡಿ.ಪಿ.ಐ ಅಧಿಕಾರಿ ಎಂದು ಹೇಳಿಕೊಂಡು ವಿಧಾನಸೌಧ, ಎಂ.ಎಸ್. ಬಿಲ್ಡಿಂಗ್‌ನಲ್ಲಿರುವ ಹಲವಾರು ಇಲಾಖೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಧಿಕಾರಿಗಳಿಂದ ಕೆಲಸ ಕಾರ್ಯಗಳಿಗೆ ಶಿಫಾರಸ್ಸು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಾಗಡಿ ತಾಲೂಕಿನ ಕುದೂರು ಮುಂತಾದ ಗ್ರಾಮಗಳಲ್ಲಿ ಇರುವ ಅಂಗನವಾಡಿಗಳು ವಿಶೇಷವಾಗಿ ಉರ್ದು ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುವುದು. ಶಾಲೆಯನ್ನು ದತ್ತು ಪಡೆದು ಅಭಿವೃದ್ದಿ ಮಾಡುವುದಾಗಿ ಸುಳ್ಳು ಹೇಳಿದ್ದಾನೆ. ಇವನ ಗತ್ತು ನೋಡಿ ನಿಜವೆಂದು ನಂಬಿದ ಶಿಕ್ಷಕರು ಮತ್ತು ಗ್ರಾಮಸ್ಥರು ಕೈಕಟ್ಟಿ ವಿಧೇಯತೆ ತೋರಿಸಿದ್ದರಂತೆ.
ಆರೋಪಿ ಹಿನ್ನೆಲೆ: ಶಿವಮೊಗ್ಗದ ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದ್ದ ಮೊಹಮದ್ ಸಲ್ಮಾನ್ 2014ರಲ್ಲಿ ಶಿವಮೊಗ್ಗೆ ಜಿಪಂನಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಜಿಪಂಗೆ ಬರುತ್ತಿದ್ದಸಾರ್ವಜನಿಕರಿಗೆ ಸಣ್ಣ ಪುಟ್ಟಣ ಕೆಲಸ ಮಾಡಿಕೊಟ್ಟು ಹಣ ಮಾಡುತ್ತಿದ್ದ. 2016ರಲ್ಲಿ ಬೆಂಗಳೂರು ಸೇರಿದ ಈತನ ಕಾರ್ಯ ವಿಧಾನವೇ ಬದಲಾಗಿ ಹೋಯ್ತು. ಕರ್ನಾಟಕ ರಾಜ್ಯ ಸಮಗ್ರ ಜನ ಸ್ಪಂದನ ವೇದಿಕೆಯ ಹೆಸರಿನಲ್ಲಿ ನಕಲಿ ಸಂಘಟನೆ ಸ್ಥಾಪಿಸಿ ತಾನು ರಾಜ್ಯಾಧ್ಯಕ್ಷ ನೆಂದು ಫೋಸು ಕೊಡುತ್ತಾ ಸರ್ಕಾರಿ ಇಲಾಖೆಗಳಲ್ಲಿ ಅವರಿವರ ಕೆಲಸ ಮಾಡಿಸಿಕೊಡುತ್ತಿದ್ದ. ಒಂದಿಬ್ಬರಿಗೆ ನಿವೇಶನ ಮಾಡಿಸಿ ಕೊಟ್ಟು ನಂಬಿಕೆ ಹುಟ್ಟಿಸಿದ್ದ. ಇದೇ ವೇಳೆ ತಾನು ಅಧಿಕಾರಿ ಅಂತಲೂ ನಂಬಿಸಲಾರಂಭಿಸಿದ್ದ. ಕೆಲಸ ಕೊಡಿಸುವುದಾಗಿ, ಸೈಟು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾರಂಭಿಸಿದ್ದ.
ಪೊಲೀಸರಿಗೆ ಸಿಕ್ಕಿದ್ದೇನು:? ನಕಲಿ ಐ.ಎ.ಎಸ್ ಅಧಿಕಾರಿ ಆರೋಪದ ಮೇಲೆ ಬಂಧನದಲ್ಲಿರುವ ಮಹಮದ್ ಸಲ್ಮಾನ್ ಬಳಿ ಪೊಲೀಸರು ಇನ್ನೋವ ಕಾರು, ಲ್ಯಾಪ್ ಟಾಪ್‌ಗ್ಳು, ಕ್ಯಾಮರಾ, ಮೊಬೈಲ್‌ಗಳು, ಪೊಲೀಸ್ ಲಾಠಿ, ಪೊಲೀಸ್ ಕ್ಯಾಪ್, ಕೆಲವು ರಬ್ಬರ್ ಸ್ಟಾಂಪ್‌ಗ್ಳು, ಬೇರೆ ಬೇರೆ ವ್ಯಕ್ತಿಗಳ ಆಧಾರ್ ಕಾರ್ಡುಗಳು, ಸರ್ಕಾರಿ ದಾಖಲೆ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿಎಸ್ಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಚನ್ನಪಟ್ಟಣ ಉಪವಿಭಾಗದ ಡಿಐಎಸ್‌ಪಿ ಪಿ.ಕೆ.ರಾಮರಾಜನ್, ವೃತ್ತ ನಿರೀಕ್ಷಕ ಗೋವಿಂದ್ ರಾಜು, ಪಿಎಸ್‌ಐ ಕುಮಾರಸ್ವಾಮಿ, ಸಿಬಂದ್ದಿ ಶಿವಲಿಂಗೇಗೌಡ, ದಿನೇಶ್, ರವಿ, ಅಕ್ರಮ್ ಖಾನ್,… ರಮೇಶ್, ಅನೀಲ ಕುಮಾರ್, ಸಂತೋಷ್, ಸುನೀಲ್ ಶ್ರಮಿಸಿದ್ದಾರೆ.