Advertisement

ಸುಳ್ಳು ಸುದ್ದಿ ಹಬ್ಬಿಸಿದ ಆರೋಪ: ಜಾಕ್‌ ಮಾ ವಿರುದ್ಧ ನೋಟಿಸ್‌

09:07 AM Jul 27, 2020 | mahesh |

ಹೊಸದಿಲ್ಲಿ: ಭಾರತದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಸಿವಿಲ್‌ ನ್ಯಾಯಾಲಯ, ಚೀನದ ಅತಿ ದೊಡ್ಡ ಶ್ರೀಮಂತ ಉದ್ಯಮಿ ಹಾಗೂ ಅಲಿಬಾಬಾ ಕಂಪನಿಯ ಒಡೆಯ ಜ್ಯಾಕ್‌ ಮಾ ಅವರಿಗೆ ನೋಟಿಸ್‌ ಜಾರಿಗೊಳಿಸಿದೆ. ಚೀನದ ಅಂತರ್ಜಾಲ ಬ್ರೌಸರ್‌ ಆದ ಯುಸಿ ಬ್ರೌಸರ್‌ ಸಂಸ್ಥೆ ಈ ಹಿಂದೆ ಭಾರತದಲ್ಲಿಯೂ ಸೇವೆ ನೀಡುತ್ತಿದ್ದು, ಆ ಕಂಪನಿಯ ಮಾಜಿ ಉದ್ಯೋಗಿ ಪುಷ್ಪೇಂದ್ರ ಸಿಂಗ್‌ ಪರಮಾರ್‌ ಎಂಬುವರು ನ್ಯಾಯಾ ಲಯದ ಮೊರೆ ಹೋಗಿದ್ದಾರೆ. ಯು.ಸಿ. ಬ್ರೌಸರ್‌ನಲ್ಲಿ ಚೀನದ ಘಾಸಿಯಾಗುವಂಥ ಮಾಹಿತಿಗಳನ್ನು ಸೆನ್ಸಾರ್‌ ಮಾಡಲಾಗುತ್ತಿತ್ತು. ಅದಲ್ಲದೆ, ಭಾರತದ ವಿರುದ್ಧ ಸುಳ್ಳು ವದಂತಿಗಳಿಗೆ ಬ್ರೌಸರ್‌ನಡಿ ಓದಲು ಅವಕಾಶ ಕಲ್ಪಿಸಲಾಗಿತ್ತು ಎಂದು ಸಿಂಗ್‌ ಅವರು, ಜು. 20ರಂದು ನ್ಯಾಯಾಲಯದಲ್ಲಿ ದಾಖ ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಹಾಗಾಗಿ, ಯು.ಸಿ. ಬ್ರೌಸರ್‌ ಒಡೆತನ ಹೊಂದಿರುವ ಜ್ಯಾಕ್‌ ಮಾ ಅವರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next