Advertisement

ಪಾಕ್‌ನಿಂದ ಸುಳ್ಳು ಸುದ್ದಿಗಳದ್ದೇ ಯುದ್ಧ!

12:30 AM Feb 28, 2019 | |

ಭಾರತೀಯ ಪಡೆ ನಡೆಸಿದ ಮಂಗಳವಾರ ವೈಮಾನಿಕ ದಾಳಿಗೆ ಬೆದರಿಗೆ ಪಾಕಿಸ್ತಾನ, ಬುಧವಾರ ಬೆಳಗ್ಗಿನಿಂದಲೇ ಒಂದಲ್ಲ ಒಂದು ಸುಳ್ಳು ಸುದ್ದಿ ಹಬ್ಬಿಸಲು ಆರಂಭಿಸಿತ್ತು. ಭಾರತದ ಮಿಗ್‌ 21 ವಿಮಾನ ಪತನವಾಗಿರುವ ಬಗ್ಗೆ ಪಾಕ್‌ ಸರ್ಕಾರ ಘೋಷಿಸುವುದಕ್ಕೂ ಮುನ್ನವೇ, ಅಲ್ಲಿನ ಮಾಧ್ಯಮಗಳು ಹಳೆಯ ವಿಮಾನ ಅಪಘಾತದ ಚಿತ್ರಗಳನ್ನು ಪ್ರಕಟಿಸಲು ಆರಂಭಿಸಿದ್ದವು. ಇರಾನ್‌ ಮೂಲದ ಪ್ರಸ್‌ ಟಿವಿ ಎಂಬ ಸುದ್ದಿಸಂಸ್ಥೆ ಈ ಚಿತ್ರ ಪ್ರಕಟಿಸಿತ್ತು. ನಂತರ ಪಾಕಿಸ್ತಾನದ ಮಾಧ್ಯಮಗಳು ಅದನ್ನೇ ಅನುಸರಿಸಿದವು. ಟ್ವಿಟರ್‌, ಫೇಸ್‌ಬುಕ್‌ನಲ್ಲೂ ಇವು ಹರಿದಾಡಿದವು.  ಇವುಗಳ‌ ನಿಜ ಪರೀಕ್ಷೆ ಮಾಡಿದಾಗ ಇವು 2015ರಲ್ಲಿ ಒಡಿಶಾದಲ್ಲಿ ಅಪಘಾತ ಕ್ಕೀಡಾದ ಜೆಟ್‌ ಟ್ರೇನರ್‌ ಎಂಬುದು ಬಹಿರಂಗವಾಯಿತು. ಇನ್ನೊಂದು ಚಿತ್ರ ಕೂಡ ಗುಜರಾತ್‌ನಲ್ಲಿ 2018 ಅಪಘಾತಕ್ಕೀಡಾಗಿದ್ದ ವಿಮಾನದ್ದಾಗಿತ್ತು. ಇದಾಗಿ ಎಷ್ಟೋ ಗಂಟೆಗಳ ನಂತರ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌  ಮಿಗ್‌ 21 ವಿಮಾನ ಕಳೆದಿದ್ದನ್ನು ಪ್ರಕಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next