Advertisement

ಆಫ್ರಿಕಾ: ಸುಳ್ಳು ಸುದ್ದಿಗಳದ್ದೇ ಸವಾಲು

09:13 AM Apr 04, 2020 | sudhir |

ಮಣಿಪಾಲ: ಆಫ್ರಿಕನ್‌ ದೇಶಗಳಲ್ಲಿ ಕೋವಿಡ್ 19 ವೈರಸ್‌ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಅಲ್ಲಿನ ಸರಕಾರಗಳಿಗೆ ಪ್ರಕರಣವನ್ನು ಎದುರಿಸುವುದಕ್ಕಿಂತ ಸುಳ್ಳು ಸುದ್ದಿಗಳನ್ನು ನಿಗ್ರಹಿಸುವುದೇ ದೊಡ್ಡ ಸವಾಲಾಗಿದೆ.

Advertisement

ಕೋವಿಡ್ 19 ವೈರಸ್‌ ಲಸಿಕೆಯನ್ನು ಪರೀಕ್ಷಿಸಲು ಆಫ್ರಿಕನ್ನರನ್ನು ಬಳಸಲಾಗುತ್ತಿದೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ವ್ಯಾಪಕವಾಗಿವೆ. ಕೋವಿಡ್‌ -19 ಗೆ ಯಾವುದೇ ಲಸಿಕೆ ಇಲ್ಲ. ಹಲವು ಕ್ಲಿನಿಕಲ್‌ ಪ್ರಯೋಗಗಳು ನಡೆಯುತ್ತಿವೆ. ಅವುಗಳಲ್ಲಿ ಯಾವುದೂ ಪ್ರಸ್ತುತ ಆಫ್ರಿಕನ್‌ ದೇಶಗಳಲ್ಲಿಲ್ಲ ಎಂಬ ಮಾಹಿತಿಯನ್ನು ಸರಕಾರ ನೀಡುತ್ತಿದೆೆ.

ಒಂದು ಫ್ರೆಂಚ್‌ ಭಾಷೆಯಲ್ಲಿ ಮಾತನಾಡುವ ಮಹಿಳೆಯ ಯೂಟ್ಯೂಬ್‌ ವಿಡಿಯೋ “ಎಲ್ಲಾ ಆಫ್ರಿಕನ್ನರಿಗೆ ಲಸಿಕೆ ಹಾಕಲು ಈಗ ಲಸಿಕೆ ಇದೆ. ಆದರೆ ಪಾಶ್ಚಿಮಾತ್ಯ ದೇಶಗಳಿಗೆ ಯಾವುದೂ ಇಲ್ಲ ಎಂದಿದ್ದಾರೆ. ಇದು ವೈರಲ್‌ ಆಗುತ್ತಿದೆ. ಮತ್ತೂಂದು ಯೂಟ್ಯೂಬ್‌ ವೀಡಿಯೊವು ಲಸಿಕೆಯನ್ನು ಇತರರ ಶ್ರೀಮಂತ ದೇಶಗಳಲ್ಲಿ ಬಳಸುವ ಮೊದಲು ಸುರಕ್ಷಿತ ವಾಗಿದೆಯೇ ಎಂದು ಪರೀಕ್ಷಿಸಲು ಆಫ್ರಿಕನ್‌ ಜನರ ಮೇಲೆ ಬಳಸಲಾಗುತ್ತದೆ ಎಂದು ಸುಳ್ಳು ಹೇಳಿದೆ.

ಕಪ್ಪು ಚರ್ಮಕ್ಕೆ ಬೇಗ ಸೋಂಕು
ಆಫ್ರಿಕಾದಲ್ಲಿ ಬಣ್ಣಗಳ ಮೇಲೆ ಜನರನ್ನು ವಿಭಾಗಿಸಲಾಗುತ್ತಿದೆ. ಕಪ್ಪು ಬಣ್ಣದವರಿಗೆ ಸೋಂಕು ಸುಲಭವಾಗಿ ಹರಡಬಹುದಾಗಿದ್ದು, ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇದನ್ನು ತಡೆಯಲು ಸ್ಥಳೀಯ ಸರಕಾರ ಪ್ರತ್ಯೇಕ ಜಾಹೀರಾತು ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಪ್ಪು ಚಹಾವನ್ನು ಕುಡಿಯುವುದರಿಂದ ಕೋವಿಡ್ 19 ಸೋಂಕು ಬರುವುದನ್ನು ತಡೆಯಬಹುದು ಎಂಬ ಮಾಹಿತಿಯನ್ನು ಹರಿಯ ಬಿಡಲಾಗುತ್ತಿದೆ. ಸ್ಥಳೀಯ ಕೀನ್ಯಾದ ಮಾಧ್ಯಮ ವರದಿಗಳ ಪ್ರಕಾರ, ಕೋವಿಡ್ 19 ಅನ್ನು ತಪ್ಪಿಸಲು ಕಪ್ಪು ಚಹಾ ಕುಡಿಯುವಂತೆ ಸಲಹೆ ನೀಡುವ ಫೋನ್‌ ಕರೆಗಳು ಹೆಚ್ಚುತ್ತಿವೆಯಂತೆ. ಅವರು ತಿಳಿಸಿರುವಂತೆ ಚಹಾ ಕುಡಿಯದೇ ಇದ್ದರೆ ಅವರು ಅನಾರೋಗ್ಯದಿಂದ ಸಾಯಬಹುದು ಎಂದು ಹೆದರಿಸಲಾಗುತ್ತಿದೆಯಂತೆ.

Advertisement

ವೈರಸ್‌ ಅನ್ನು “ನಾಶಮಾಡಲು” ಚೀನಕ್ಕೆ ಹೋಗುವುದಾಗಿ ಹೇಳುವ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ ಮತ್ತು ಇತರ ಪ್ಲಾಟ್‌ಫಾರ್ಮ್ಗಳಲ್ಲಿ ಹಂಚಿ ಕೊಳ್ಳಲಾಗಿದೆ. ನಾನು ಕೋವಿಡ್ 19 ವೈರಸ್‌ ಅನ್ನು ನಾಶಮಾಡಲು ಪ್ರವಾದಿಯಂತೆ ಹೋಗುತ್ತಿದ್ದೇನೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next