Advertisement

ನಕಲಿ ಗಾಂಧಿ ಪರಿವಾರವು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಂತ: ಪ್ರಲ್ಹಾದ್ ಜೋಶಿ

11:40 AM Oct 02, 2022 | Team Udayavani |

ಹುಬ್ಬಳ್ಳಿ: ನಕಲಿ ಗಾಂಧಿ ಪರಿವಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಂತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.

Advertisement

ನಗರದಲ್ಲಿಂದು ಗಾಂಧೀಜಿ ಜಯಂತಿ ಅಂಗವಾಗಿ ಕಿಮ್ಸ್ ಆವರಣ ಮುಂಭಾಗದಲ್ಲಿ ಮಹಾತ್ಮಾ ಗಾಂಧಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಮಾತನ್ನು ಗಂಭೀರವಾಗಿ ತೆಗೆದು ಕೊಳ್ಳುವ ಪ್ರಶ್ನೆ ಇಲ್ಲ. ಅವರು ಭಾರತ ಜೋಡೋ ಯಾತ್ರೆ ಮುಗಿದ ತಕ್ಷಣ ವಿಶ್ರಾಂತಿಗೆ ವಿದೇಶಕ್ಕೆ ಹೋಗುತ್ತಾರೆ. ಈಗಾಗಲೇ ಈ ಹಿಂದಿನ ಚುನಾವಣೆಯಲ್ಲಿ ಜನರು ಯಾರು ಯಾರ ಪರ ಇದ್ದಾರೆ ಎಂಬುದನ್ನು ತಮ್ಮ ತೀರ್ಮಾನ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರದಲ್ಲಿ 10 ವರ್ಷ ನಿರಂತರವಾಗಿ ಭ್ರಷ್ಟಾಚಾರ ಹಗರಣದ್ದೆ ಸುದ್ದಿ ಇತ್ತು ಎಂದರು‌.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನ

ಇನ್ನು ಮೋದಿ ಆಡಳಿತದಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ ಎಂಬ ರಾಹುಲ್ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾರ ಕಾಲದಲ್ಲಿ ಹೆಚ್ಚು ಸಾಲ ಆಗಿದೆ ಎಂಬುದನ್ನು ಅಂಕಿ ಅಂಶಗಳಿವೆ. ಕೋವಿಡ್ ಸಮಯದಂತಹ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಭಾರತ ಅಭಿವೃದ್ಧಿ ಹೊಂದುತ್ತಿದೆ. ಪ್ರಪಂಚವೇ ಭಾರತವನ್ನು ಗುರುತಿಸುವಂತೆ ಆಗಿದೆ. ಹೀಗಾಗಿ ಭಾರತದ ಹಿರಿಮೆ ಗರಿಮೆ ಬಗ್ಗೆ ಸುಳ್ಳು ಅಪಪ್ರಚಾರ ಮಾಡಬಾರದು ಎಂದರು.

ಈಗಾಗಲೇ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ 398 ಜನರ ಪೈಕಿ ಅತಿ ಹೆಚ್ಚು ಡಿಪಾಸಿಟ್ ಕಳೆದು ಕೊಂಡಿದೆ. ಇದೀಗ ರಾಹುಲ್ ಗಾಂಧಿ ಇನ್ನೊಬ್ಬರು ಬರೆದು ಕೊಟ್ಟಿದ್ದನ್ನು ಓದಿ ನಾಚಿಕೆ ಮಾನ ಮರ್ಯಾದೆ ಇಲ್ಲದೇ ಓದುತ್ತಾರೆ. ಚೀಟಿ ವಾಪಾಸ್ ಪಡೆದ ನಂತರ ಅದರಲ್ಲಿನ ವಿಷಯ ಗೊತ್ತಿರಲ್ಲ ಎಂದು ರಾಗಾ ವಿರುದ್ಧ ಕಿಡಿಕಾರಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next