ಗಂಗಾವತಿ: ನಕಲಿ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಪ್ರಕರಣಗಳು ಹೆಚ್ಚುತ್ತಿದ್ದು ,ಗಂಗಾವತಿಯಲ್ಲಿ ಕೃಷಿ ಜಾಗೃತದಳ ಹಾಗೂ ಪೊಲೀಸರು ದಾಳಿ ನಡೆಸಿ ಸುಮಾರು 300 ಚೀಲ (15 ಟನ್) ಜೈಕಿಸಾನ್ ರಸಗೊಬ್ಬರದ ಚೀಲಗಳಲ್ಲಿ ತುಂಬಿದ್ದ ಡಿಎಪಿ ರಸಗೊಬ್ಬರ ವಶಕ್ಕೆ ಪಡೆದು ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕೃಷಿ ಜಾಗೃತ ದಳದ ಅಧಿಕಾರಿಗಳಾದ ಎಡಿಎ ಸಂತೋಷ ಪಟ್ಟದಕಲ್ಲು, ತಾಂತ್ರಿಕ ಅಧಿಕಾರಿ ಲಿಂಗಪ್ಪ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ಲಾರಿ ಸಮೇತ ನಕಲಿ ಡಿಎಪಿ ಜೈಕಿಸಾನ್ ಕಂಪನಿಯ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಗಂಗಾ ಎಂಟರ್ ಪ್ರೈಸಸ್ ಹಾಗೂ ಮಾರುತಿ ಆಗ್ರೋ ಫರ್ಟಿಲೈಜರ್ಸ್ ರಸಗೊಬ್ಬರ ಅಂಗಡಿಗಳ ರಸೀದಿಗಳು ಕೂಡಾ ದೊರಕಿವೆ.
ಇದನ್ನೂ ಓದಿ: ಕೊಕೊಕೊಲಾ ಕಂಪನಿಗೆ ಭಾರೀ ನಷ್ಟ ತಂದಿಟ್ಟಿತು ರೊನಾಲ್ಡೊ ಮಾಡಿದ ಈ ಒಂದು ಕೆಲಸ!
ಕೃಷಿ ಇಲಾಖೆ ಮತ್ತು ಜಾಗೃತ ದಳದ ಅಧಿಕಾರಿಗಳು ರಸಗೊಬ್ಬರ ಜಪ್ತಿ ಮಾಡಿ ರಸಗೊಬ್ಬರವನ್ನು ಪರೀಕ್ಷಾ ಕೇಂದ್ರಕ್ಕೆ ಕಳಿಸಿದ್ದಾರೆ.
ಇದನ್ನೂ ಓದಿ:ಎನ್ ಕೌಂಟರ್ ನಲ್ಲಿ ಉಗ್ರನೋರ್ವನನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಅಗತ್ಯ ಮಾಹಿತಿಯ ನಂತರ ಕೃಷಿ ಅಧಿಕಾರಿಗಳಿಂದ ದೂರು ಪಡೆದು ಕೇಸ್ ದಾಖಲಿಸಲಾಗುತ್ತದೆ. ಲಾರಿ ಸಹಿತ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ ತಿಳಿಸಿದ್ದಾರೆ