Advertisement

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

10:25 PM Nov 06, 2024 | Team Udayavani |

ಗದಗ: ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆ ಮಾಡಲು ಯತ್ನಿಸಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

Advertisement

ನವೆಂಬರ್ 6ರಂದು ಸೈಬರ್ ವಂಚಕರು ಬಿ.ಎಸ್. ನೇಮಗೌಡ ಐಪಿಎಸ್ ಎಂಬ ನಕಲಿ ಫೇಸ್‌ಬುಕ್‌ ಐಡಿಯಲ್ಲಿ ಗದಗ ಜಿಲ್ಲೆಯ ಎಸ್‌ಪಿ ಅವರ ಪೊಟೋವನ್ನು ಫ್ರೊಫೈಲ್ ಆಗಿ ಇಟ್ಟುಕೊಂಡು ಮತ್ತು ವಾಟ್ಸಾಪ್ ಡಿಪಿಯಾಗಿ ಫೊಟೊವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಬಯಲಾಗಿದ್ದು, ತನಿಖೆ ಮುಂದುವರೆದಿದೆ.

ಈ ಕುರಿತು ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ 71/2024 ಕಲಂ 66(ಡಿ)ಐ.ಟಿ ಆ್ಯಕ್ಟ-2008 ಮತ್ತು 319(2) ಬಿಎನ್‌ಎಸ್ ನೇ ಪ್ರಕರಣದಲಿ ಫೇಕ್ ಫೇಸ್‌ಬುಕ್‌ ಐಡಿ ಮುಖಾಂತರ ವಂಚನೆ ಮಾಡಲು ಪ್ರಯತ್ನಿಸುತ್ತಿರುವ ಕುರಿತು ಪ್ರಕರಣ ದಾಖಲಾಗಿದೆ.

ಸೈಬರ್ ವಂಚಕರು ಗದಗ ಎಸ್ಪಿ ಹೆಸರಿನಲ್ಲಿ ಫೇಕ್ ಫೇಸ್‌ಬುಕ್‌ ಐಡಿ ಕ್ರಿಯೆಟ್ ಮಾಡಿ ಮತು ಮೆಸೆಂಜ್‌ರ ಖಾತೆ ಹಾಗೂ ವಾಟ್ಸಾಪ್ ಖಾತೆ ತೆರೆದು ಅವುಗಳಲ್ಲಿ ಗದಗ ಜಿಲ್ಲೆಯ ಎಸ್‌ಪಿ ರವರ ಫೊಟೋವನ್ನು ಡಿಪಿ ಹಾಗೂ ಪ್ರೋಫೈಲ್ ಪೋಟೊ ಆಗಿ ಇಟ್ಟುಕೊಂಡು ಆ ಮೂಲಕ ಬೇರೆ ಬೇರೆ ಕಾರಣಗಳನ್ನು ಹೇಳಿ ಸಾರ್ವಜನಿಕರಿಗೆ ವಂಚನೆ ಮಾಡುವ ಪ್ರಯತ್ನದಲ್ಲಿದ್ದು, ಕಾರಣ ಯಾವುದೇ ಸಾರ್ವಜನಿಕರು ಮೋಸ ಹಾಗೂ ವಂಚನೆಗೆ ಒಳಗಾಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಇದನ್ನೂ ಓದಿ: BMTC: ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ; ಪ್ರಯಾಣಿಕರ ರಕ್ಷಿಸಿದ ನಿರ್ವಾಹಕ!

Advertisement
Advertisement

Udayavani is now on Telegram. Click here to join our channel and stay updated with the latest news.

Next