Advertisement

ಐಪಿಎಸ್‌ ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ

11:34 PM Nov 14, 2020 | sudhir |

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಧಿಕಾರಿಗಳ ಸ್ನೇಹಿತರಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಈಗ ಐಪಿಎಸ್‌ ಅಧಿಕಾರಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅವರ ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ನಗರದ ಪೂರ್ವ ವಿಭಾಗ ಡಿಸಿಪಿ ಡಾ| ಶರಣಪ್ಪ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರಿದಿರುವ ಕಿಡಿಗೇಡಿಗಳು ಅವರ ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಶರಣಪ್ಪ ಅವರು, ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯ ಫೋಟೋ ಹಾಕಿ “ಇದು ನಕಲಿ ಖಾತೆಯಾಗಿದ್ದು, ಸ್ನೇಹಿತರು ಹಾಗೂ ಹಿತೈಷಿಗಳು ಫ್ರೆಂಡ್‌ ರಿಕ್ವೆಸ್ಟ್‌ ಸ್ವೀಕರಿಸಿಬೇಡಿ’ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಮೈತ್ರಿಯ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್‌-ಬಿಎಸ್ಪಿಗೆ ಗುಡ್‌ಬೈ! ಅಖೀಲೇಶ್‌ ಯಾದವ್ ಸ್ಪಷ್ಟನೆ

“ಶರಣಪ್ಪ ಎಸ್‌.ಡಾಂಗೆ ಐಪಿಎಸ್‌’ ಎಂಬುದು ಶರಣಪ್ಪ ಅವರ ಅಸಲಿ ಖಾತೆ. ಆದರೆ, ಕಿಡಿಗೇಡಿಗಳು “ಶರಣಪ್ಪ ಡಾಂಗೆ’ ಎಂದು ಖಾತೆ ತೆರೆದು ವಂಚಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next