Advertisement

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ: ಅಪ್ಪ-ಮಗಳು ಸೇರಿ ನಾಲ್ವರ ಬಂಧನ

12:30 PM May 01, 2022 | Team Udayavani |

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಸಲಿ ಮಾಲೀಕರೆಂದು ಆಸ್ತಿಗಳ ಮಾರಾಟ ಮಾಡುತ್ತಿದ್ದ ತಂದೆ-ಮಗಳು ಸೇರಿ ನಾಲ್ವರು ದೇವನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಮಡಿವಾಳ ನಿವಾಸಿ ಸುಧಾಕರ್‌ ರೆಡ್ಡಿ (37), ಬಾಣಸವಾಡಿ ನಿವಾಸಿ ಅಶೋಕ್‌ ಕೃಷ್ಣಚೌಹಾನ್‌ (44), ಯಶವಂತಪುರ ನಿವಾಸಿ ಕುಮಾರಸ್ವಾಮಿ ಅಲಿಯಾಸ್‌ ನಕಲಿ ಲಾಲ್‌ ಜೇಸಿಂಗ್‌ (54) ಮತ್ತು ಬನಶಂಕರಿ ಪ್ರಿಯಾ ಕುಮಾರಿ ಅಲಿಯಾಸ್‌ ನಕಲಿ ಪ್ರಿಯಾ (20) ಬಂಧಿತರು.

ಆರೋಪಿಗಳಿಂದ ನಿವೇಶನಗಳಿಗೆ ಸಂಬಂಧಿಸಿದ ನಕಲಿ ದಾಖಲೆಗಳು ಹಾಗೂ ಅಕ್ರಮದಲ್ಲಿ ಸಂಪಾದಿ ಸಿದ್ದ 11 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ದೇವನಹಳ್ಳಿ ಟೌನ್‌ ಪುಟ್ಟಪ್ಪನಗುಡಿ ಬೀದಿ ವಾರ್ಡ್‌ ನಂ 19ರಲ್ಲಿ ಸರ್ವೆ ನಂ 134 ಖಾತೆ ನಂ755 ಸಿಎಂಸಿ ಖಾತೆ ನಂ 538/134ರಲ್ಲಿ 10 ಗುಂಟೆ ಜಮೀ ನನ್ನು ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು.

ಬಳಿಕ ಆರೋಪಿಗಳ ಪೈಕಿ ಕುಮಾರಸ್ವಾಮಿ ಬಿಂದು ದೇವಿ ಎಂಬಾಕೆ ಜತೆ ಸೇರಿಕೊಂಡು ತನ್ನ ಮಗಳಾದ ಪ್ರಿಯಾಗೆ ಗಿಫ್ಟ್ ಡೀಡ್‌ ಮಾಡಿದ್ದ. ನಂತರ ಅದೇ ದಾಖಲೆಗಳನ್ನು ಇಟ್ಟುಕೊಂಡು ಬೇರೆಡೆ ಮಾರಾಟಕ್ಕೆ ಸಿದ್ಧತೆ ನಡೆಸಿದ್ದರು. ಈ ಸಂಬಂಧ ನಿವೇಶನ ಮಾಲೀಕರು ದೂರು ನೀಡಿದ್ದರು. ಈ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಆರೋಪಿಗಳ ಪೈಕಿ ಕುಮಾರಸ್ವಾಮಿ ಮತ್ತು ಪ್ರಿಯಾ ತಂದೆ-ಮಗಳಾಗಿದ್ದು, ಪರಿಚ ಯಸ್ಥರು ಹಾಗೂ ಕೆಲ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳ ಮೂಲಕ ಖಾಲಿ ನಿವೇಶನಗಳು ಅಥವಾ ಬಹಳ ವರ್ಷಗಳಿಂದ ಯಾರು ನಿರ್ವಹಣೆ ಮಾಡದ ನಿವೇಶನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು.

ನಂತರ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ನಂತರ ಇತರೆ ಇಬ್ಬರು ಆರೋಪಿಗಳ ಮೂಲಕ ಗ್ರಾಹಕರನ್ನು ಹುಡುಕಿ ಮಾರಾಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next