Advertisement

Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

03:35 PM Nov 19, 2024 | Team Udayavani |

ಸೂರತ್: ದೇಶದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು ಪೊಲೀಸರು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಆಸ್ಪತ್ರೆ, ಕ್ಲಿನಿಕ್ ಗಳಿಗೆ ಬೀಗ ಜಡಿಯುತಿದ್ದಾರೆ, ಇದರ ನಡುವೆಯೇ ಸೂರತ್‌ನ ಪಾಂಡೆಸರಾದಲ್ಲಿ ನಕಲಿ ವೈದ್ಯರ ತಂಡವೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಂದಾಗಿದೆ.

Advertisement

ನಕಲಿ ವೈದ್ಯರು ಸೇರಿ ಮಲ್ಟಿ ಸ್ಪೆಷಾಲಿಟಿ ನಿರ್ಮಿಸುವ ಉದ್ದೇಶದಿಂದ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದು ಕಳೆದ ಭಾನುವಾರ (ನ.17) ರಂದು ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಸಲಾಗಿತ್ತು ಅಲ್ಲದೆ ಉನ್ನತ ಮಟ್ಟದ ಅಧಿಕಾರಿಗಳನ್ನು ಉದ್ಘಾಟನೆಗೆ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು ಅದರಂತೆ ಉದ್ಘಾಟನೆಯೂ ನೆರವೇರಿತ್ತು.

ಈ ನಡುವೆ ಇಲ್ಲಿನ ಪೊಲೀಸ್ ಠಾಣೆಗೆ ಸೂರತ್‌ನ ಪಾಂಡೆಸರಾದಲ್ಲಿ ನಕಲಿ ಆಸ್ಪತ್ರೆ ಉದ್ಘಾಟನೆಯಾಗಿದ್ದು ಇಲ್ಲಿರುವ ವೈದ್ಯರು ನಕಲಿ ವೈದ್ಯರಾಗಿದ್ದಾರೆ ಒಮ್ಮೆ ಪರಿಶೀಲಿಸಿ ಎಂದು ಮಾಹಿತಿ ಬಂದಿದೆ ಅದರಂತೆ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಗುರ್ಜರ್ ಅವರ ನೇತೃತ್ವದ ಪೊಲೀಸರ ತಂಡ ಭಾನುವಾರ ಉದ್ಘಾಟನೆಗೊಂಡ ಜನಸೇವಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿ ಅಲ್ಲಿನ ವೈದ್ಯರ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ, ಈ ವೇಳೆ ಆಸ್ಪತ್ರೆಯಲ್ಲಿರುವ ಐವರು ವೈದ್ಯರಲ್ಲಿ ಇಬ್ಬರು ನಕಲಿ ಪದವಿ ಹೊಂದಿದವರು ಎಂಬುದು ಗೊತ್ತಾಗಿದೆ, ಅಲ್ಲದೆ ಆಸ್ಪತ್ರೆಯಲ್ಲಿ ತಾನು ವೈದ್ಯ ಎಂದು ಪರಿಚಯಿಸಿಕೊಂಡಿದ್ದ ಬಿಆರ್ ಶುಕ್ಲಾನ ವಿರುದ್ಧ ಗುಜರಾತ್ ವೈದ್ಯಕೀಯ ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಗಿತ್ತು ಅಸಲಿಗೆ ಆತ ವೈದ್ಯನೇ ಅಲ್ಲ ಬದಲಿಗೆ ನಕಲಿ ವೈದ್ಯನಾಗಿದ್ದಾನೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ಎಲೆಕ್ಟ್ರೋ-ಹೋಮಿಯೋಪತಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿಕೊಂಡಿರುವ ಮತ್ತೊಬ್ಬ ಸಹ-ಸಂಸ್ಥಾಪಕ ಆರ್‌ಕೆ ದುಬೆ ವೈದ್ಯಕೀಯ ಪ್ರಾಕ್ಟೀಷನರ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. “ಇಬ್ಬರೂ ನಕಲಿ ಪದವಿಗಳನ್ನು ಹೊಂದಿದ್ದು. ಮತ್ತೊಬ್ಬ ಸಹ-ಸಂಸ್ಥಾಪಕ ಎಂದು ಹೇಳಿಕೊಂಡಿರುವ ಜಿಪಿ ಮಿಶ್ರಾ ಅವರ ವಿರುದ್ದವೂ ಮೂರು ಪ್ರಕರಣಗಳಿವೆ ಎಂದು ಹೇಳಲಾಗಿದ್ದು ಅವರ ದಾಖಲೆಗಳನ್ನು ಇನ್ನಷ್ಟೇ ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿದ ಪೊಲೀಸ್ ಅಧಿಕಾರಿ ನಕಲಿ ವೈದ್ಯರು ಸೇರಿಕೊಂಡು ಆಸ್ಪತ್ರೆ ತೆರೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸಿದ ವೇಳೆ ಇಬ್ಬರು ನಕಲಿ ವೈದ್ಯರು ಪತ್ತೆಯಾಗಿದ್ದಾರೆ ಇನ್ನೂ ಮೂವರ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ ಅದರ ಬಳಿಕ ನಿಜಾಂಶ ಹೊರಬರಲಿದೆ ಸದ್ಯ ತನಿಖೆ ನಡೆಯುತ್ತಿರುವುದರಿಂದ ಆಸ್ಪತ್ರೆಗೆ ಬೀಗ ಜಡಿಯಲಾಗಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತೆಯ ಕೊರತೆ
ನಿರ್ಮಿಸಿರುವ ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತೆಯ ಕೊರತೆ ಇರುವುದು ಬಯಲಾಗಿದೆ. ಆಸ್ಪತ್ರೆಯಲ್ಲಿ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಮಾಡಲಾಗಿದೆ ಆದರೆ ನೀರಿನ ಟ್ಯಾಂಕ್‌ಗೆ ಮೋಟಾರ್ ಸಂಪರ್ಕ ಕಲ್ಪಿಸಿಲ್ಲ. ಅಲ್ಲದೆ, ಬೆಂಕಿ ನಂದಿಸುವ ಸಾಧನಗಳನ್ನು ಇಡಲಾಗಿಲ್ಲ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿ ಬಿಟ್ಟು ವ್ಯಕ್ತಿ ನದಿಗೆ; ಶಂಕೆ

Advertisement

Udayavani is now on Telegram. Click here to join our channel and stay updated with the latest news.

Next