Advertisement

ತಾನು ಸಾಚಾ ಎಂದು ತೋರಿಸಲು ಉಗ್ರ ಸಯೀದ್‌ ವಿರುದ್ಧ ಪಾಕ್‌ ಸುಳ್ಳು ಕೇಸು!

09:23 AM Aug 19, 2019 | Team Udayavani |

ಇಸ್ಲಾಮಾಬಾದ್‌: ಭಯೋತ್ಪಾದನೆ ವಿಷಯದಲ್ಲಿ ನಾವು ಸತ್ಯವಂತರಾಗಿ ನಡೆಯುತ್ತಿದ್ದೇವೆ, ಯಾವುದೇ ರೀತಿ ಬೆಂಬಲ ಕೊಡುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೋರಿಸಲು ಪಾಕಿಸ್ಥಾನ ಇದೀಗ ಹೊಸ ನಾಟಕ ಆರಂಭಿಸಿದೆ.

Advertisement

ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎ) ಸಭೆಗೆ ದಿನಗಳು ಹತ್ತಿರವಾಗುತ್ತಿರುವಂತೆಯೇ, ಒಂದು ಸುಳ್ಳು ಎಫ್ಐಆರ್‌ ಅನ್ನು ದಾಖಲಿಸಿದೆ.
ಇದರಲ್ಲಿ ನಿಷೇಧಿತ ಸಂಘಟನೆಯಾದ ಲಷ್ಕರ್‌ ಎ ತೋಯ್ಬಾದ ಸಹ ಸಂಘಟನೆ ದಾವಾತ್‌ ವಾಲ್‌ ಇರ್ಷಾದ್‌ ವಿರುದ್ಧ ಭೂಮಿ ಅಕ್ರಮವಾಗಿ ವಶಪಡಿಸಿ, ಭಯೋತ್ಪಾದನೆ ಚಟುವಟಿಕೆಗೆ ಬಳಸಿದ ಆರೋಪವಿದೆ. ಆದರೆ ಎಲ್ಲೂ ಸಂಘಟನೆ ಮುಖ್ಯಸ್ಥ ಹಫೀಜ್‌ ಸಯೀದ್‌ ಹೆಸರೇ ಇಲ್ಲ. ಸಂಘಟನೆಯ ಇತರ ಪ್ರಮುಖರ ಹೆಸರೂ ಇಲ್ಲ. ಲಷ್ಕರ್‌ ಹೆಸರು ಬದಲಾಗಿ ಜಮಾತ್‌ ಉದ್‌ ದಾವಾ ಸಂಘಟನೆಯಾಗಿದ್ದು, ಅದರ ಹೆಸರೂ ಎಫ್ಐಆರ್‌ನಲ್ಲಿ ಇಲ್ಲ. ಆದ್ದರಿಂದ ಈ ಪ್ರಕರಣ ಕೋರ್ಟ್‌ನಲ್ಲಿ ಬಿದ್ದು ಹೋಗಬಹುದು ಎಂದು ಹೇಳಲಾಗಿದೆ.

ಕೆಲವೇ ದಿನಗಳಲ್ಲಿ ಎಫ್ಎಟಿಎ ಸಭೆ ನಡೆಸಲಿದ್ದು, ಇದು ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸದಂತೆ ಪಾಕಿಸ್ಥಾನ ನಾಟಕವಾಡುತ್ತಿದೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರಿದ್ದೇ ಆದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನಕ್ಕೆ ಯಾವುದೇ ಹೂಡಿಕೆಗಳು ಹರಿದು ಬರಲಾರವು.

Advertisement

Udayavani is now on Telegram. Click here to join our channel and stay updated with the latest news.

Next