Advertisement

ವಾಜಪೇಯಿ ಚಿತಾಭಸ್ಮ ಮಾರಾಟಕ್ಕಿಲ್ಲ!

06:00 AM Sep 01, 2018 | Team Udayavani |

ಲಕ್ನೋ: ವಾಜಪೇಯಿಯವರ ಚಿತಾಭಸ್ಮ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯವೆಂಬ ನಕಲಿ ಜಾಹಿರಾತು ನಂಬಿ, ಬಿಜೆಪಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದ ಬಿಎಸ್‌ಪಿ ನಾಯಕ ದೇವಾಶಿಶ್‌ ಜನಾರಿಯಾ ಅವರಿಗೆ ಆ ನಕಲಿ ಜಾಹಿರಾತನ್ನು ಪ್ರಕಟಿಸಿದ್ದ ವ್ಯಕ್ತಿಯೇ ಕಣ್ತೆರೆಸಿದ್ದಾರೆ. 

Advertisement

ಆಗಿದ್ದಿಷ್ಟೆ. ವಾಜಪೇಯಿಯವರ ಚಿತಾಭಸ್ಮವುಳ್ಳ ತಾಮ್ರದ ಕಳಸವು ಇ-ಕಾಮರ್ಸ್‌ ಸಂಸ್ಥೆಯಾದ ಅಮೆಜಾನ್‌ನಲ್ಲಿ ಮಾರಾಟಕ್ಕಿದ್ದು, ಈ ಕಲಶದೊಂದಿಗೆ ಪ್ರಧಾನಿ ಮೋದಿಯವರ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದೆಂಬ ಜಾಹೀರಾತೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲ ದಿನಗಳಿಂದ ಓಡಾಡುತ್ತಿತ್ತು. ಇದನ್ನೇ ನಂಬಿದ ಜನಾರಿಯಾ, ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು. ಹಿರಿಯ ಮುತ್ಸದ್ದಿಯ ಸಾವನ್ನು ವ್ಯಾಪಾರಕ್ಕಾಗಿ ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.  

ಆದರೆ, ಇದಕ್ಕೆ ಉತ್ತರಿಸಿದ ಯೋಯೋ ಮೋದಿ1 ಎಂಬ ಟ್ವಿಟರ್‌ ಹ್ಯಾಂಡಲ್‌  ಹೊಂದಿರುವ ವ್ಯಕ್ತಿಯೊಬ್ಬರು, “”ಸ್ವಾಮೀ, ಈ ಜಾಹೀರಾತನ್ನು ಪ್ರಕಟಿಸಿದ್ದು ನಾನೇ. ಆದರೆ, ಇದು ನಿಜವಲ್ಲ, ನಕಲಿ” ಎಂದಿದ್ದಾರೆ. ಅತ್ತ, ಅಮೆಜಾನ್‌ನಲ್ಲೂ ಈ ಬಗ್ಗೆ ಹುಡುಕಾಟ ನಡೆಸಿದಾಗ ಯಾರದ್ದೇ ಚಿತಾಭಸ್ಮ ಮಾರಾಟಕ್ಕಿರುವ ಬಗ್ಗೆ ಮಾಹಿತಿ 
ಇಲ್ಲದಿರುವುದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next