ಲಂಡನ್: ಯುನೈಟೆಡ್ ಕಿಂಗ್‌ಡಮ್‌ನ ಟಾಮ್ ಸಿಲ್ವರ್‌ಹುಡ್ ಎಂಬ ಫ್ಯಾಷನ್ ಡಿಸೈನರ್, ಜನರು ಬಳಸಿ ಬಿಸಾಡಿದ ಸುಮಾರು 1,500 ಫೇಸ್ ಮಾಸ್ಕ್ ಗಳನ್ನು ಒಗ್ಗೂಡಿಸಿ, ಕ್ರೈಸ್ತ ಮಹಿಳೆಯರು ಮದುವೆಗಳಲ್ಲಿ ತೊಡಗುವ ಗೌನ್ ಸಿದ್ಧಪಡಿಸಿದ್ದಾರೆ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹಾಗೂ ಇಂಗ್ಲೆಂಡ್‌ನಲ್ಲಿ ಕೊರೊನಾ ನಿರ್ಬಂಧಗಳನ್ನು ತೆರವುಗೊಳಿಸಿದ್ದಕ್ಕಾಗಿ, ಈ ವೆಡ್ಡಿಂಗ್ ಗೌನ್ ಸಿದ್ಧಪಡಿಸಲಾಗಿದ್ದು, ಇದನ್ನು ಕೊರೊನಾದಿಂದ ಸ್ವತಂತ್ರ ಪಡೆದ ಪ್ರತೀಕವೆಂಬಂತೆ ಬಿಂಬಿಸಲಾಗಿದೆ. ಹಾಗಾಗಿ, ಇದು ಇಡೀ ಇಂಗ್ಲೆಂಡ್‌ನಲ್ಲಿ ಖ್ಯಾತಿ ಪಡೆದಿದೆ.
ಕೊರೊನಾ ತಾರಕಕ್ಕೇರಿದ್ದ ಸಂದರ್ಭದಲ್ಲಿ ಯು.ಕೆ.ನ ಎಲ್ಲಾ ಕಡೆ ಕೊರೊನಾ ನಿರ್ಬಂಧಗಳು ಜಾರಿಗೊಂಡಿದ್ದವು. ಎಲ್ಲರ ಕೈಯ್ಯಲ್ಲೂ ಸ್ಯಾನಿಟೈಸರ್, ಬಾಯಿ- ಮೂಗಿನ ಮೇಲೆ ಫೇಸ್ ಮಾಸ್ಕ್ ಗಳು ಕಾಣುತ್ತಿದ್ದವು. ಆದರೆ, ಈಗ ಅಂಥ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಈ ಬೆಳವಣಿಗೆಯನ್ನು ನೆನಪಿನಲ್ಲಿ ಉಳಿಸಲು “ಕೊರೊನಾ ಸ್ವಾತಂತ್ರ ದಿನ’ ಎಂಬ ಪರಿಕಲ್ಪನೆ ಮಾಡಿದ ಟಾಮ್ ಅವರು, ಬಳಸಿ ಬಿಸಾಡಿದ ಫೇಸ್ ಮಾಸ್ಕ್ ಗಳಿಂದ ಗೌನ್ ತಯಾರಿಸಲು ನಿರ್ಧರಿಸಿದ್ದರು.
ಇದನ್ನೂ ಓದಿ :ಹಕ್ಕಿಜ್ವರಕ್ಕೆ ದೇಶದಲ್ಲಿ ಮೊದಲ ಸಾವು :ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ
ಇದಕ್ಕೆ ಬೇಕಾಗುವ ವೆಚ್ಚವನ್ನು “ಹಿಚಿಡ್’ ಎಂಬ ಮದುವೆ ಪ್ಲಾನಿಂಗ್ ವೆಬ್‌ಸೈಟ್ ಭರಿಸಿದೆ. ಈ ಗೌನ್ ತಯಾರಿಸಿದ ಮೇಲೆ ರೂಪದರ್ಶಿಯೊಬ್ಬರಿಗೆ ಇದನ್ನು ತೊಡಿಸಿ, ಲಂಡನ್‌ನ ಸೇಂಟ್ ಪಾಲ್ ಕ್ಯಾಥೆಡ್ರಲ್ ಬಳಿ ಇದರ ಫೋಟೋಶೂಟ್ ಕೂಡ ನಡೆಸಲಾಗಿದೆ.