Advertisement

ಹಾವೇರಿ ಜಿಲ್ಲೆಯಲ್ಲಿ ಜಾತ್ರೆಗಳು ಸಂಪೂರ್ಣ ನಿಷೇಧ

07:22 PM Apr 21, 2021 | Team Udayavani |

ಹಾವೇರಿ: ಕೊವೀಡ್‌-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳನ್ನು ಸಂಪೂರ್ಣ ನಿಷೇಧಿ ಸಲಾಗಿದೆ. ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಪಾಸ್‌ ಪಡೆಯಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

Advertisement

ದೇವಸ್ಥಾನ ಕಮೀಟಿಯವರಿಗೆ ಜಾತ್ರೆ ನಿಷೇಧ ಕುರಿತು ಸಂಬಂಧಿಸಿದ ತಹಶೀಲ್ದಾರ್‌ ಗಳು ಮನವರಿಕೆ ಮಾಡಿ ಕೊಡಬೇಕು. ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿ ಅನುಸಾರ ಸೇರಬಹುದಾದ ಜನಸಂಖ್ಯೆಗನುಗುಣವಾಗಿ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು ಪಾಸ್‌ ವಿತರಿಸಲು ಸೂಚನೆ ನೀಡಿದ್ದಾರೆ.

ಪಾಸ್‌ ವಿತರಣೆ ಮೊದಲು ಪೊಲೀಸ್‌ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದು ನಂತರ ಪಾಸ್‌ ನೀಡಬೇಕು. ಒಂದು ವೇಳೆ ಪಾಸ್‌ ಪಡೆಯದೇ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಮದುವೆ ಹಾಗೂ ಇತರೆ ಸಭೆ-ಸಮಾರಂಭಗಳನ್ನು ನಡೆಸುತ್ತಿದ್ದಲ್ಲಿ ಅಂತವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಹಾಗೂ ಸಭೆ-ಸಮಾರಂಭಗಳು ಜರುಗುವ ಕಲ್ಯಾಣ ಮಂಟಪ ಹಾಗೂ ಇತರೆ ಸಭಾಂಗಣಗಳನ್ನು ಸೀಜ್‌ ಮಾಡಿ ಪ್ರಕರಣ ದಾಖಲಿಸಲು ಕ್ರಮ ವಹಿಸಬೇಕು. ಪಾಸ್‌ ನೀಡಿದ ಸಮಾರಂಭಗಳಲ್ಲಿ ನಿಗ ದಿತ ಸಂಖ್ಯೆಗಿಂತ ಅಧಿಕ ಜನರು ಸೇರಿದಲ್ಲಿ ಅಂತಹ ಸಭೆ-ಸಮಾರಂಭಗಳನ್ನು ತಕ್ಷಣ ಸ್ಥಗಿತಗೊಳಿಸಲು ಕ್ರಮ ವಹಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next