ಹಿಂದೆ ಇಲ್ಲಿನ ಜಾನುವಾರುಗಳು ಅರಣ್ಯ ಪ್ರದೇಶದಲ್ಲಿ ಮೇಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ಜಾನುವಾರುಗಳ ಪ್ರವೇಶಕ್ಕೆ ಕಡಿವಾಣ ಹಾಕಿದೆ. ಪರಿಣಾಮ ಗೋವುಗಳಿಗೆ ಪ್ರಕೃತಿದತ್ತ ಮೇವು ಸಿಗದಾಗಿದ್ದು, ಗೋಪಾಲಕರು ಗೋವುಗಳನ್ನು ಸಾಕಲು ತೊಂದರೆ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯ ಲಾಭ ಪಡೆದ ಕಟುಕರು ಗೋಪಾಲಕರಿಂದ ಗೋವು ಖರೀದಿಸಿ ಕಸಾಯಿಖಾನೆಗೆ ಸಾಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.30 ಸಾವಿರಕ್ಕೂ ಅಧಿಕ ಜಾನುವಾರಿಗಳಿಗೆ ಮೇವು ವಿತರಣೆ: ಈ ದಿಸೆಯಲ್ಲಿ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಜೀ ಮ.ಬೆಟ್ಟದ ತಪ್ಪಲಿನ ವ್ಯಾಪ್ತಿಯಲ್ಲಿನ ಗೋವುಗಳಿಗೆ ಕಳೆದ 2 ತಿಂಗಳು 30 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಮೇವು ಒದಗಿಸುತ್ತಿದ್ದಾರೆ. ಇದರ ಜತೆಗೆ ಗೋವುಗಳು ಕಟುಕರ ಪಾಲಾಗಾದ ದಿಸೆಯಲ್ಲಿ ಗೋವುಗಳನ್ನು ಸಾಕಲು ತುಂಬಾ ಕಷ್ಟ ಎದುರಿಸುತ್ತಿರುವ ಗೋಪಾಲಕರಿಂದ ಗೋವುಗಳನ್ನು ಮಠದ ವತಿಯಿಂದ ಖರೀದಿಸಿ, ಸಾಕಲು ಇಚ್ಛಿಸುವ ರೈತರಿಗೆ ಹಣ ಪಡೆದು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ದೇಸಿ ತಳಿಗಳನ್ನು ಉಳಿಸಲು ಅಭಯ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಭಯ ಜಾತ್ರಗೆ ಚಾಲನೆ: ಇದಕ್ಕೂ ಮುನ್ನಾ ದೊಡ್ಡಲತ್ತೂರು ಗ್ರಾಪಂ ಅಧ್ಯಕ್ಷೆ ನೀಲಮ್ಮ ಅವರು ಅಭಯ ಜಾತ್ರೆಗೆ ಜ್ಯೋತಿಬೆಳಗಿಸಿ, ಗೋವುಗಳಿಗೆ ಆರತಿ ಎತ್ತುವುದರ ಮೂಲಕ ಚಾಲನೆ ನೀಡಿದರು. ಜಾತ್ರೆಗೆ ರಾಮಾಪುರ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮದ ಗೋಪಾಲಕರು ತಮ್ಮ ಕೆಲವು ಗೋವುಗಳನ್ನು ಮಾರಾಟ ಮಾಡಿದರಲ್ಲದೇ ಸಾಕಲು ಇಚ್ಛಿಸುವ ಕೆಲ ರೈತರು ಗೋವುಗಳನ್ನು ಖರೀದಿಸಿದರು. ಈ ಸಂದರ್ಭದಲ್ಲಿ ಅಭಯ ಜಾತ್ರೆ ಸಂಘದ ಅಧ್ಯಕ್ಷ ಶಿವಕುಮಾರ್, ಭಾರತೀಯ ಕಿಸಾನ್ ಸಂಘದ ಸಿದ್ದಪ್ಪ, ಶ್ರೀ ರಾಘವೇಂದ್ರಪುರ ಮಠದ ಸಂಚಾಲಕರು, ರೈತರು ಇದ್ದರು.
Advertisement